Paneer: ಪನೀರ್‌ನಲ್ಲಿರುವ ಎಲ್ಲಾ ಪೋಷಕಾಂಶಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವರು ಪನೀರ್ ತಿನ್ನುವುದನ್ನು ತಪ್ಪಿಸಬೇಕು ಇಲ್ಲದಿದ್ದರೆ ಅವರು ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪನೀರ್ ತಿನ್ನುವುದರಿಂದಾಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುತ್ತದೆ, ಪನೀರ್ ತಿನ್ನುವುದರಿಂದ ಉಂಟಾಗುವ ಕೆಲವು ಅಡ್ಡಪರಿಣಾಮಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ.
ರಕ್ತದೊತ್ತಡ ರೋಗಿಗಳು
ಕಡಿಮೆ ರಕ್ತದೊತ್ತಡದ ಸಂದರ್ಭದಲ್ಲಿ, ಪೌಷ್ಟಿಕ-ಭರಿತ ಪನೀರ್ ತಿನ್ನಲು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಆದರೆ ನಿಮ್ಮ ರಕ್ತದೊತ್ತಡ ಹೆಚ್ಚಿದ್ದರೆ ಯಾವುದೇ ಕಾರಣಕ್ಕೂ ಪನೀರ್ ತಿನ್ನಬಾರದು, ಇಲ್ಲದಿದ್ದರೆ ನಿಮ್ಮ ಸಮಸ್ಯೆ ಹೆಚ್ಚಾಗಬಹುದು. ಇದಲ್ಲದೆ ನೀವು ಅಗತ್ಯಕ್ಕಿಂತ ಹೆಚ್ಚು ಪನೀರ್ ತಿಂದರೆ, ಅತಿಸಾರದ ಸಮಸ್ಯೆಯೂ ಉಂಟಾಗಬಹುದು.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದರೆ ಸಾಕು ಹಾರ್ಟ್ ಅಟ್ಯಾಕ್‌ನ ಭಯವೇ ಇರಲ್ಲ; ಮಧುಮೇಹ ಮತ್ತು ತೂಕ ಇಳಿಕೆಗೂ ಇದು ಸಹಕಾರಿ
ಆಹಾರ ವಿಷಪೂರಿತ ರೋಗಿಗಳು
ನೀವು ಆಹಾರ ವಿಷದಿಂದ ಬಳಲುತ್ತಿದ್ದೀರಾ? ಹೌದು ಎಂದಾದರೆ, ನಿಮ್ಮ ಆಹಾರದಲ್ಲಿ ಪನೀರ್ ಸೇರಿಸುವುದನ್ನು ತಪ್ಪಿಸಬೇಕು. ವಾಸ್ತವವಾಗಿ ಆಹಾರ ವಿಷದ ಸಂದರ್ಭದಲ್ಲಿ ಲಘು ಆಹಾರ ಮತ್ತು ಪಾನೀಯಗಳನ್ನು ಸೇವಿಸಲು ಸೂಚಿಸಲಾಗುತ್ತದೆ. ಪ್ರೋಟೀನ್ ಭರಿತ ಪನೀರ್ ಆಹಾರ ವಿಷದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಎಚ್ಚರಿಕೆಯಿಂದ ಪರಿಗಣಿಸಿದ ನಂತರವೇ ಪನೀರ್‌ಅನ್ನು ತಮ್ಮ ಆಹಾರ ಯೋಜನೆಯ ಭಾಗವಾಗಿ ಮಾಡಿಕೊಳ್ಳಬೇಕು.
ಸೋಂಕು ಮತ್ತು ಅಲರ್ಜಿ
ಹೆಚ್ಚಾಗಿ ಹಸಿ ಪನೀರ್ ತಿನ್ನುವುದರಿಂದ ಕೆಲವೊಮ್ಮೆ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಸೋಂಕಿನ ಸಮಸ್ಯೆಯನ್ನು ತಪ್ಪಿಸಲು, ನೀವು ಪನೀರ್ ಗುಣಮಟ್ಟವನ್ನು ಪರಿಶೀಲಿಸದೆ ತಿನ್ನಬಾರದು. ನಿಮಗೆ ಡೈರಿ ಉತ್ಪನ್ನಗಳಿಂದ ಅಲರ್ಜಿ ಇದ್ದರೆ, ಪನೀರ್ ತಿನ್ನುವುದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಇದಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಪನೀರ್ ಸೇವಿಸುವುದರಿಂದ ಗಂಭೀರ ಮತ್ತು ಮಾರಕ ಹೃದಯ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಹೀಗಾಗಿ ಪನೀರ್ ಸೇವಿಸುವ ಮುನ್ನ ನಿಮ್ಮ ಆರೋಗ್ಯದ ಬಗ್ಗೆ ನೂರು ಬಾರಿ ಯೋಚಿಸಿರಿ.
ಇದನ್ನೂ ಓದಿ: ದುಂಡಗಿನ ಹೊಟ್ಟೆ ಒಂದೇ ವಾರದಲ್ಲಿ ಚಪ್ಪಟೆಯಾಗಬೇಕಾದರೆ ಮೊಸರನ್ನು ಈ ರೀತಿ ಸೇವಿಸಿ !
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









