Weight lose tips : ನಿಯಂತ್ರಿತ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವ ಮತ್ತು ಪೋಷಕಾಂಶಗಳಿಲ್ಲದ ಇನ್ಸ್ಟಂಟ್ ಆಹಾರಗಳನ್ನು ಸೇವಿಸದೆ ಇರುವ ಮೂಲಕ ತೂಕ ಇಳಿಸಿಕೊಳ್ಳಬಹುದು. ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ದೈಹಿಕ ಮತ್ತು ಮಾನಸಿಕ ದೃಢತೆ ಬಹಳ ಮುಖ್ಯವಾಗಿರುತ್ತದೆ.
36 ಕೆಜಿ ತೂಕ ಇಳಿಸಿಕೊಂಡ ಮಹಿಳೆ :
ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿ ಎಲಿಸ್ ರೋಸ್ ಆರೋಗ್ಯಕರ ವಿಧಾನದ ಮೂಲಕ ಸುಮಾರು 36 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇಲ್ಲಿ ಅವರು ತನ್ನ ನೆಚ್ಚಿನ ಆಹಾರಗಳನ್ನು ಸೇವಿಸುವುದನ್ನು ಮುಂದುವರಿಸಿದ್ದರೂ ತೂಕ ಇಳಿಸಿಕೊಂಡಿದ್ದಾರೆ .
ಇದನ್ನೂ ಓದಿ : ಯಾವ ಪಥ್ಯವೂ ಬೇಡ... ಊಟಕ್ಕೆ ಅರ್ಧ ಗಂಟೆ ಮುಂಚೆ ಇದನ್ನು ತಿನ್ನುವುದರಿಂದ ಶುಗರ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ!
ತೂಕ ಇಳಿಸಿಕೊಳ್ಳಬೇಕಾದಾಗ ಆಹಾರಕ್ರಮದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕೆಲವೊಂದು ಆಹಾರವನ್ನು ಶತ್ರುವನ್ನಾಗಿ ಪರಿಗಣಿಸಲೇಬೇಕು. ಅಂದರೆ, ಎಲಿಸ್ ರೋಸ್ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ತಪ್ಪಿಸಿದ್ದಾರೆ. ಅದರ ಬದಲಾಗಿ ಬಹಳಷ್ಟು ಸಲಾಡ್‌ಗಳನ್ನು ಸೇವಿಸಲು ಆರಂಭಿಸಿದ್ದರು. ತೂಕ ಇಳಿಸಿಕೊಳ್ಳುತ್ತಿರುವಂತೆ ತೋರಿದರೂ, ಹೆಚ್ಚು ಕ್ಯಾಲೊರಿಗಳನ್ನು ಸೇವಿಸಿದರೆ ತೂಕ ಮತ್ತೆ ಹೆಚ್ಚಾಗುತ್ತದೆ. ಹಾಗಾಗಿ ಸಮಸ್ಯೆ ಆಹಾರ ಕ್ರಮದಲ್ಲಲ್ಲ, ಬದಲಾಗಿ ಅದನ್ನು ಅನುಸರಿಸುವ ವಿಧಾನದಲ್ಲಿದೆ ಎಂದು ಅರಿತುಕೊಂಡ ಅವರು ಹೆಚ್ಚು ಪೌಷ್ಟಿಕ ಆಹಾರವನ್ನು ತಿನ್ನಲು ಪ್ರಾರಂಭಿಸಿದರು.
ಎಲಿಸ್ ರೋಸ್ ಯಾವುದೇ ತೊಂದರೆಗಳಿಲ್ಲದೆ, ಹೆಚ್ಚಿನ ನಿರೀಕ್ಷೆಗಳಿಲ್ಲದೆ ಸುಲಭವಾಗಿ ತೂಕ ಇಳಿಸಿಕೊಂಡಿದ್ದಾರೆ. ಆಹಾರದ ಮಧ್ಯೆ ಕಾಯ್ದುಕೊಂಡ ಸಮತೋಲನವೇ ಸುಲಭವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿದೆ. ಸಾಕಷ್ಟು ಪೌಷ್ಟಿಕಾಂಶ ಸೇವಿಸದಿದ್ದರೆ ಅಂದುಕೊಂಡಂತೆ ತೂಕ ಇಳಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನುವುದನ್ನು ಅರಿತ ಅವರು ಎಷ್ಟೇ ಆಸೆ ಆದರೂ ಜಂಕ್ ಫುಡ್ ಗಳತ್ತ ಮುಖ ಕೂಡಾ ಮಾಡಿರಲಿಲ್ಲ.
ಇದನ್ನೂ ಓದಿ : ತಂಪೆಂದು ಅತಿಯಾಗಿ ಮಜ್ಜಿಗೆ ಕುಡಿಯದಿರಿ.. ಈ ಗಂಭೀರ ಸಮಸ್ಯೆ ಇದ್ದರಂತೂ ಮುಟ್ಟಲೇ ಬೇಡಿ!
ತೂಕ ಇಳಿಕೆ ಎಂದರೆ ಕೇವಲ ಕಡಿಮೆ ಆಹಾರ ಸೇವಿಸುವುದಲ್ಲ. ಪೌಷ್ಟಿಕಾಂಶದ ಬಗ್ಗೆ ತಿಳುವಳಿಕೆಯನ್ನು ಹೊಂದಿರುವುದು ಮತ್ತು ಅದಕ್ಕೆ ತಕ್ಕಂತೆ ತಿನ್ನುವುದು ಸಹ ಮುಖ್ಯವಾಗಿದೆ. ಸಣ್ಣ ಭಾಗಗಳಲ್ಲಿ ಸಮತೋಲಿತ ಆಹಾರವನ್ನು ಸೇವಿಸುವುದು ಮತ್ತು ಇವುಗಳನ್ನು ನಿರಂತರವಾಗಿ ಅನುಸರಿಸುವುದು ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಆಹಾರ ಪದ್ಧತಿಗಳು ನಿಮ್ಮನ್ನು ದೈಹಿಕವಾಗಿ ಬಲಶಾಲಿಯಾಗಿ, ಆರೋಗ್ಯವಾಗಿ ಮತ್ತು ಆತ್ಮವಿಶ್ವಾಸದಿಂದ ಇರಲು ಸಹಾಯ ಮಾಡುತ್ತದೆ. ಈ ಮೂಲಕ ಅವರು 36 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
(ಸೂಚನೆ : ಇವೆಲ್ಲವೂ ಇನ್‌ಸ್ಟಾ ಸೆಲೆಬ್ರಿಟಿ ಎಲಿಸ್ ರೋಸ್ ಅವರ ತೂಕ ಇಳಿಸುವ ಅನುಭವಗಳು. ದಯವಿಟ್ಟು ಇದನ್ನು ಅನುಸರಿಸುವ ಮೊದಲು ಸರಿಯಾದ ವೈದ್ಯಕೀಯ ಸಲಹೆಯನ್ನು ಪಡೆಯಿರಿ. ಇದನ್ನು ಜೀ ಕನ್ನಡ ನ್ಯೂಸ್ ದೃಢಪಡಿಸಿಲ್ಲ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









