8 ತಿಂಗಳಲ್ಲಿ 42 ಕೆಜಿ ತೂಕ ಇಳಿಸಿಕೊಂಡ ಮಹಿಳೆ!ಈ ಆಹಾರ ಸೇವಿಸಿಯೇ ವೆಯಿಟ್ ಲಾಸ್ ಮಾಡಿಕೊಂಡ ಲೇಡಿ

Weight Loss Journey : ತೂಕ ಇಳಿಕೆ ಎನ್ನುವುದು ಹೇಳುವಷ್ಟು ಸುಲಭದ ಮಾತಲ್ಲ. ಆದರೆ ಸರಿಯಾದ ಆಹಾರ ಪದ್ದತಿಯನ್ನು ಸ್ಥಿರವಾಗಿ ಅನುಸರಿಸುತ್ತಾ ಬಂದರೆ ಕಷ್ಟವೂ ಅಲ್ಲ.  

Written by - Ranjitha R K | Last Updated : Apr 30, 2025, 11:29 AM IST
  • ದೇಹದ ತೂಕ ವೇಗವಾಗಿ ಕಡಿಮೆಯಾದರೂ, ಅದು ಶಾಶ್ವತ ಎಂದು ಹೇಳುವುದು ಸಾಧ್ಯವಿಲ್ಲ.
  • ಬೇಗನೆ ಕಳೆದುಹೋದ ತೂಕ ಮತ್ತೆ ಮರಳಿ ಬರುವುದಿಲ್ಲ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ.
  • ಆರೋಗ್ಯಕರ ರೀತಿಯಲ್ಲಿ ತೂಕ ಇಳಿಕೆ ಮಾಡಿಕೊಳ್ಳುವುದು ಬಹಳ ಮುಖ್ಯ
8 ತಿಂಗಳಲ್ಲಿ 42 ಕೆಜಿ ತೂಕ ಇಳಿಸಿಕೊಂಡ ಮಹಿಳೆ!ಈ ಆಹಾರ ಸೇವಿಸಿಯೇ ವೆಯಿಟ್ ಲಾಸ್ ಮಾಡಿಕೊಂಡ ಲೇಡಿ

Weight Loss Journey : ತೂಕ ಇಳಿಸಿಕೊಳ್ಳುವಲ್ಲಿ ತೊಡಗಿರುವವರು ತೀವ್ರವಾದ ವ್ಯಾಯಾಮ ಆಹಾರ ಪದ್ದತಿಯಲ್ಲಿ ಕಟ್ಟುನಿಟ್ಟಿನ ನಿರ್ಬಂಧವನ್ನು ಪಾಲಿಸುತ್ತಾರೆ. ಬೇಗನೆ ತುಕ ಇಳಿಸಿಕೊಳ್ಳಲು ಈ ವಿಧಾನ ಸಹಾಯ ಮಾಡುತ್ತದೆ ಎನ್ನುವುದು ಸಾಮಾನ್ಯವಾಗಿ ಇರುವ ನಂಬಿಕೆ. ತಕ್ಕ ಮಟ್ಟಿಗೆ ಇದು ನಿಜ ಕೂಡಾ. ಆದರೆ ಇದು ಆರೋಗ್ಯಕರ ವಿಧಾನವಲ್ಲ. 

Add Zee News as a Preferred Source

ದೇಹದ ತೂಕ ವೇಗವಾಗಿ ಕಡಿಮೆಯಾದರೂ, ಅದು ಶಾಶ್ವತ ಎಂದು ಹೇಳುವುದು ಸಾಧ್ಯವಿಲ್ಲ. ಬೇಗನೆ ಕಳೆದುಹೋದ ತೂಕ ಮತ್ತೆ ಮರಳಿ ಬರುವುದಿಲ್ಲ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ವೈದ್ಯಕೀಯ ವೃತ್ತಿಪರರು ಸಲಹೆ ನೀಡುವ ಆರೋಗ್ಯಕರ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕು. ಬಹಳ ಕಡಿಮೆ ಜನರು ಆರೋಗ್ಯಕರ ರೀತಿಯಲ್ಲಿ ದೀರ್ಘಕಾಲೀನ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಇದನ್ನೂ ಓದಿ : ನಿಂಬೆ ನೀರನ್ನು ಯಾವಾಗ ಕುಡಿಯಬೇಕು? ಸರಿಯಾದ ಸಮಯ ಯಾವುದು?

ಆರೋಗ್ಯಕರ ರೀತಿಯಲ್ಲಿ ತೂಕ ಇಳಿಕೆ : 
ಖ್ಯಾತ ಭಾರತೀಯ ಬರಹಗಾರ್ತಿ ಶೋಭಾ ಡೇ ಅವರ ಪುತ್ರಿ ಆನಂದಿತಾ ಡೇ ಅವರ ವೆಯಿಟ್ ಲಾಸ್ ಜರ್ನಿ ನಮಗೆ ಆರೋಗ್ಯಕರ ಅನುಭವವನ್ನು ಹೇಳುತ್ತದೆ. ಅವರು ತಮ್ಮ ಶಿಸ್ತು, ಸ್ಥಿರವಾದ ಕ್ರಮ ಮತ್ತು ಕಠಿಣ ಪರಿಶ್ರಮದ ಮೂಲಕ ತೂಕ ಇಳಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಇಲ್ಲಿ ಇವರು ಯಾವುದೇ ರೀತಿಯ ಶಾರ್ಟ್ ಕಟ್ ಅನುಸರಿಸಿಲ್ಲ ಎನ್ನುವುದು ಗಮನಾರ್ಹ. 

ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ತಮ್ಮ ಅನುಭವದ ಬಗ್ಗೆ ಮಾತನಾಡಿದ ಆನಂದಿತಾ ಡೇ, ತಾನು  ಯಾವುದೇ ಆಹಾರಕ್ರಮದ ನಿರ್ಬಂಧಗಳನ್ನು ಅನುಸರಿಸಲಿಲ್ಲ. ಆರೋಗ್ಯ ವೃತ್ತಿಪರರು ಅಥವಾ ಪೌಷ್ಟಿಕತಜ್ಞರನ್ನು ಸಂಪರ್ಕಿಸಲಿಲ್ಲ. ಸಾಮಾನ್ಯ ಜ್ಞಾನವನ್ನು ಬಳಸಿ ಸ್ಪಷ್ಟತೆಯೊಂದಿಗೆ ಊಟ ಮಾಡಿದೆ. ಒಂದು ಕಾಲದಲ್ಲಿ ನಾನು ಉಪಾಹಾರಕ್ಕಾಗಿ ಒಂದು ಪ್ಯಾಕೆಟ್ ಚಾಕೊಲೇಟ್ ಚಿಪ್, ಬಿಸ್ಕತ್ತುಗಳನ್ನು ಸಹ ತಿಂದಿದ್ದೆ. ಆದರೆ ಈಗ ಬೆಳಿಗ್ಗೆ ಕಾಫಿ ಮಾತ್ರ ಕುಡಿಯುತ್ತೇನೆ. ನಾನು ಅದರೊಂದಿಗೆ ಏನನ್ನೂ ತಿನ್ನುವುದಿಲ್ಲ. ಸರಳ ಮತ್ತು ಸಂಪೂರ್ಣ ಆಹಾರ ಪದ್ಧತಿಯನ್ನು ಅನುಸರಿಸಿರುವುದಾಗಿ ಹೇಳಿದ್ದಾರೆ. 

ಇದನ್ನೂ ಓದಿ : ಈ ಹಣ್ಣಿನ ಸಿಪ್ಪೆಯಿಂದ ಹೀಗೆ ಮಾಡಿ 10 ನಿಮಿಷದಲ್ಲೇ ಮುತ್ತಿನಂತೆ ಬಿಳಿಯಾಗುತ್ತವೆ ಹಳದಿ ಹಲ್ಲು!

ಆರೋಗ್ಯ ಸಮಸ್ಯೆಗಳೂ ನಿವಾರಣೆ :
ಆನಂದಿತಾ ಡೇ ಅವರಿಗೂ ಕೆಲವು ಆರೋಗ್ಯ ಸಮಸ್ಯೆಗಳಿವೆ. ಟೈಪ್ 2 ಮಧುಮೇಹವನ್ನು ತೊಡೆದುಹಾಕಲು ಅವರು ತೂಕ ಇಳಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ತೂಕ ಇಳಿಸಿಕೊಂಡ ನಂತರ ಅವರ ಡಯಾಬಿಟೀಸ್ ಕೂಡಾ ನಿಯಂತ್ರಣದಲ್ಲಿದೆ. ಮುಟ್ಟಿನ ಸಮಸ್ಯೆಗಳೂ ಸುಧಾರಿಸಿವೆ. ಹಲವು ವರ್ಷಗಳಿಂದ ನಿಯಮಿತವಾಗಿ ಋತುಚಕ್ರವಾಗದೇ ಸಮಸ್ಯೆ ಎದುರಿಸುತ್ತಿದ್ದ ಆನಂದಿತಾ ಡೇ  ಈಗ ಆ ಸಂಸ್ಯೆಯೂ ಬಗೆಹರಿದಿರುವುದಾಗಿ ಹೇಳಿದ್ದಾರೆ.

ಆನಂದಿತಾ ಡೇ ಅವರ ಆಹಾರ ಪದ್ಧತಿ :
"ತೂಕ ಇಳಿಸಿಕೊಳ್ಬೇಕು ಎಂದು ಆನಂದಿತಾ ಡೇ  ಎಂದಿಗೂ ಯಾವ ಆಹಾರವನ್ನೂ ತ್ಯಜಿಸಿರಲಿಲ್ಲ. ಆದರೆ ಏನು ತಿನ್ನುತ್ತಿದ್ದೇನೆ, ಎಷ್ಟು ತಿನ್ನುತ್ತಿದ್ದೇನೆ ಎನ್ನುವ ಸ್ಪಷ್ಟತೆ ಅವರಿಗಿತ್ತು. ತಿನ್ನುವ ಆಹಾರದ ಪ್ರಮಾಣವನ್ನು ಕೂಡಾ ಕಡಿಮೆ ಮಾಡಿದ್ದರು. ಬೆಳಗಿನ ಉಪಾಹಾರಕ್ಕಾಗಿ ಮನೆಯಲ್ಲಿ ತಯಾರಿಸಿದ ಓಟ್ ಮೀಲ್ ಮತ್ತು ಹಣ್ಣುಗಳನ್ನು ಸೇವಿಸುತ್ತಿದ್ದರು.  ಚಪಾತಿ, ಅವಲಕ್ಕಿ  ಮತ್ತು ಕೋಳಿ ಮಾಂಸವನ್ನು ಎಣ್ಣೆ ಅಥವಾ ಬೆಣ್ಣೆ ಸೇರಿಸದೆ ತಿನ್ನುತ್ತಿದ್ದರು. 

ಇದನ್ನೂ ಓದಿ : ಈ 3 ವಿಧದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತವೆ; ಈ ಮಾರಕ ರೋಗದಿಂದ ದೂರವಿರುವುದು ಹೇಗೆ?

ಸಣ್ಣ ಸಣ್ಣ ಧಾನ್ಯಗಳನ್ನು ಕೂಡಾ ಸೇವಿಸುತ್ತಿದ್ದರು.  ಹುರಿದ ಆಹಾರಗಳು, ಸಿಹಿ ಪಾನೀಯಗಳು, ಆಲೂಗಡ್ಡೆ ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.  ಸಿಹಿತಿಂಡಿಗಳನ್ನು ಅಪ್ಪಿ ತಪ್ಪಿಯೂ ಸೇವಿಸಿಲ್ಲ. ಸಿಹಿ ತಿನ್ನಬೇಕು ಎಂದು ಅನ್ನಿಸಿದಾಗ ಹಣ್ಣುಗಳು ಮತ್ತು ಖರ್ಜೂರವನ್ನು ಸೇವಿಸುತ್ತಿದ್ದರು.

ಆನಂದಿತಾ ಡೇ ನಡಿಗೆಯ ವ್ಯಾಯಾಮ : 
ತೂಕ ಇಳಿಸಿಕೊಳ್ಳಲು ಆಹಾರ ಮಾತ್ರವಲ್ಲ, ಜೊತೆಗೆ ವ್ಯಾಯಾಮವೂ ಮುಖ್ಯ. ಹಾಗಾಗಿ ಆನಂದಿತಾ ಪ್ರತಿದಿನ ವಾಕ್ ಮಾಡುತ್ತಿದ್ದರು. ಬೆಳಿಗ್ಗೆ ಒಂದೂವರೆ ಗಂಟೆ ಮತ್ತು ಸಂಜೆ ಒಂದು ಗಂಟೆ ವಾಕಿಂಗ್ ತಪ್ಪಿಸುತ್ತಿರಲಿಲ್ಲ. ರಾತ್ರಿ ನಿದ್ದೆ ಬರುವುದಿಲ್ಲ ಎನ್ನುವ ಸಮಸ್ಯೆಯಿಂದ ಬಳಲುತ್ತಿದ್ದ ಆನಂದಿತಾ, 2024 ರಿಂದ ಆ ಸಂಸ್ಯೆಯಿಂದಲೂ 100%  ಹೊರ ಬಂದಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Anandita De (@ananditade)

ಆನಂದಿತಾ ಡೇ ತಮ್ಮ ತೂಕ ಇಳಿಸುವ ಪ್ರಯಾಣದಲ್ಲಿ 8 ತಿಂಗಳಲ್ಲಿ 42 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಉಲ್ಲೇಖಿಸಿದ್ದಾರೆ. ಇದಲ್ಲದೆ, ತೂಕ ಇಳಿಸಿಕೊಳ್ಳಲು ಬಯಸುವವರು, ರಿಸಲ್ಟ್ ತಕ್ಷಣವೇ ಏನನ್ನೂ ನಿರೀಕ್ಷಿಸದೆ ಪ್ರತಿದಿನ ಸ್ಥಿರವಾಗಿ ಪ್ರಯತ್ನ ಮುಂದುವರೆಸುವುದರಿಂದ ಗುರಿ ಮತ್ತು ಅಪೇಕ್ಷಿತ ಫಲಿತಾಂಶಗಳನ್ನು  ಪಡೆಯಬಹುದು ಎನ್ನುವುದು ಆನಂದಿತಾ ನೀಡುವ ಸಲಹೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

(ಸೂಚನೆ :ಇವೆಲ್ಲವೂ ಆನಂದಿತಾ ಡೇ ಅವರ ವೈಯಕ್ತಿಕ ತೂಕ ಇಳಿಕೆಯ ಅನುಭವಗಳು. ಇದನ್ನು ಅನುಸರಿಸುವ ಮೊದಲು ನೀವು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಆನಂದಿತಾ ಡೇ ಅವರ ಅಭಿಪ್ರಾಯಗಳಿಗೆ ಜೀ ಕನ್ನಡ ನ್ಯೂಸ್ ಜವಾಬ್ದಾರರಲ್ಲ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News