126 ಕೆಜಿಯಿಂದ 56 ಕೆಜಿಗೆ ತೂಕ ಇಳಿಸಿಕೊಂಡ ಬೆಂಗಳೂರಿನ ಮಹಿಳೆ! ಫಾಲೋ ಮಾಡಿದ್ದು ಈ ಸರಳ ಟಿಪ್ಸ್

Weight lose Journey : ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಇತ್ತೀಚೆಗೆ ತಮ್ಮ X ಖಾತೆಯಲ್ಲಿ ತಮ್ಮ ವೈಟ್ ಲಾಸ್ ಜರ್ನಿಯ ಅನುಭವ ಮತ್ತು ಪ್ರಕ್ರಿಯೆಯನ್ನು ಹಂಚಿಕೊಂಡಿದ್ದಾರೆ.  

Written by - Ranjitha R K | Last Updated : Apr 4, 2025, 02:24 PM IST
  • ತೂಕ ಇಳಿಸುವ ಪ್ರಯಾಣದಲ್ಲಿ 56 ಕೆಜಿ ಇಳಿಸಿಕೊಂಡ ಮಹಿಳೆ
  • ರುದ್ವಿ ಶಾ ಎನ್ನುವ ಮಹಿಳೆ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಈ ಬಗ್ಗೆ ಶೇರ್ ಮಾಡಿದ್ದಾರೆ
  • ರುದ್ವಿ ಶಾ ಅನುಸರಿಸಿದ ವಿಧಾನ ಯಾವುದು ?
126 ಕೆಜಿಯಿಂದ 56 ಕೆಜಿಗೆ ತೂಕ ಇಳಿಸಿಕೊಂಡ ಬೆಂಗಳೂರಿನ ಮಹಿಳೆ! ಫಾಲೋ ಮಾಡಿದ್ದು ಈ ಸರಳ ಟಿಪ್ಸ್

Weight lose Journey : ಬೊಜ್ಜು ಹೊಂದಿರುವ ಅನೇಕ ಜನರು ಆರೋಗ್ಯಕರ ಜೀವನಶೈಲಿಗಾಗಿ ಪ್ರಸ್ತುತ ತೂಕ ಇಳಿಸುವಿಕೆಯ ಕೆಲವು ಮಾರ್ಗಗಳನ್ನು ಸಕ್ರಿಯವಾಗಿ ಅನುಸರಿಸುತ್ತಿದ್ದಾರೆ. ಕೆಲವರು ತಮ್ಮ ತೂಕ ಇಳಿಕೆಯ ಅನುಭವ ಮತ್ತು  ಅನುಸರಿಸಿದ ಪ್ರಕ್ರಿಯೆಗಳನ್ನು ನಿರಂತರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

Add Zee News as a Preferred Source

ತೂಕ ಇಳಿಸುವ ಪ್ರಯಾಣದಲ್ಲಿ 56 ಕೆಜಿ ಇಳಿಸಿಕೊಂಡ ಮಹಿಳೆ :
ಆ ನಿಟ್ಟಿನಲ್ಲಿ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಇತ್ತೀಚೆಗೆ ತಮ್ಮ X ಖಾತೆಯಲ್ಲಿ ತಮ್ಮ ವೈಟ್ ಲಾಸ್ ಜರ್ನಿಯ ಅನುಭವ ಮತ್ತು ಪ್ರಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಅಂದರೆ, ತೂಕ ಇಳಿಸಿಕೊಳ್ಳಲು ತಾನು ನಡೆಸಿದ ಪ್ರಯತ್ನಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ.  

ಇದನ್ನೂ ಓದಿ : ತಿಂಗಳಲ್ಲಿ ಒಮ್ಮೆಯಾದರೂ ಈ ತರಕಾರಿಯ ಜ್ಯೂಸ್‌ ಕುಡಿಯಿರಿ ಸಾಕು... ಕಿಡ್ನಿ ಸ್ಟೋನ್‌ ಆಪರೇಷನ್‌ ಇಲ್ಲದೇ ಕರಗಿ ನೋವಿಲ್ಲದೇ ಹೊರ ಹೋಗುವುದು!

ರುದ್ವಿ ಶಾ ಎನ್ನುವ ಮಹಿಳೆ ತನ್ನ ಎಕ್ಸ್ ಪೋಸ್ಟ್‌ನಲ್ಲಿ ತಾನು ಅಧಿಕ ತೂಕ ಹೊಂದಿದ್ದಾಗ ಇದ್ದ ಫೋಟೋ ಮತ್ತು ತೂಕ ಇಳಿಸಿಕೊಂಡ ನಂತರದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ತೂಕ ಇಳಿಸುವ ಪ್ರಯಾಣದ ಬಗ್ಗೆಯೂ ಮಾತನಾಡಿದ್ದಾರೆ. ಸುಮಾರು ಮೂರು ವರ್ಷಗಳ ಪರಿಶ್ರಮದ ಫಲವಾಗಿ 126 ಕೆಜಿಯಿಂದ 56 ಕೆಜಿ ತೂಕ ಇಳಿಸಿಕೊಂಡಿರುವ ಬಗ್ಗೆ ವಿವರಿಸಿ ಹೇಳಿದ್ದಾರೆ. 

 

ಇದನ್ನೂ ಓದಿ : Health Tips: ಉಪವಾಸ ಮಾಡುವುದರಿಂದ ಸಕ್ಕರೆ ಕಾಯಿಲೆ ನಿವಾರಣೆಯಾಗುತ್ತದೆಯೇ? ಇಲ್ಲಿದೆ ಸರಳ ಪರಿಹಾರ

ರುದ್ವಿ ಶಾ ಮಾಡಿದ್ದೇನು? :
ಶಾಂತವಾಗಿರುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಹೆಚ್ಚು ಸಹಾಯವಾಯಿತು ಎನ್ನುವುದು ರುದ್ವಿ ಶಾ  ಅನುಭವದ ಮಾತು.  ಮಾರ್ಚ್ 31 ರಂದು ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಮ್ಮ ತೂಕ ಇಳಿಕೆ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. 3.5 ವರ್ಷಗಳ ಕಾಲ ನಿರಂತರವಾಗಿ ನಡೆಸಿರುವ ಪ್ರಯತ್ನ ಖಂಡಿತವಾಗಿಯೂ ಕೆಲವು ಅದ್ಭುತಗಳನ್ನು ಮಾಡಿದೆ ಎಂದು ಹೇಳಿದೆ.  ಅಕ್ಟೋಬರ್ 2021ರಲ್ಲಿ, ನಾನು 126.5 ಕೆಜಿ ತೂಕವಿದ್ದೆ. ಆದರೆ ಈಗ ನಾನು 69.7 ಕೆಜಿಯಾಗಿದ್ದೇನೆ ಎಂದು ಹೇಳಿದ್ದಾರೆ. ಅಂದರೆ 56 ಕೆಜಿಗಿಂತ ಹೆಚ್ಚುತೂಕ ಕಳೆದುಕೊಂಡಿರುವುದಾಗಿ  ಹೇಳಿದ್ದಾರೆ. 

ತೂಕ ಇಳಿಕೆ ಪ್ರಕ್ರಿಯೆಯನ್ನು ತುಂಬಾ ಸರಳವಾಗಿ ಪ್ರಾರಂಭಿಸಿದ್ದು, ಅದನ್ನು ಬಿಡದೇ ಅನುಸರಿಸಿಕೊಂಡು ಬಂದಿರುವುದಾಗಿ ಹೇಳಿದ್ದಾರೆ. "ನಾನು ಪ್ರತಿದಿನ ವ್ಯಾಯಾಮ ಮಾಡುತ್ತಿದ್ದೇನೆ, ಸ್ಟ್ರೆಂತ್ ಟ್ರೈನಿಂಗ್ ಮತ್ತು ಕಾರ್ಡಿಯೋದೊಂದಿಗೆ ತೂಕವನ್ನು ಎತ್ತುತ್ತಿದ್ದೇನೆ ಮತ್ತು ಉತ್ತಮ ಆಹಾರವನ್ನು ಸೇವಿಸುತ್ತಿದ್ದೇನೆ" ಎಂದಿದ್ದಾರೆ. ಅಲ್ಲದೆ ಯಾರಾದರೂ ತೂಕ ಇಳಿಸಿಕೊಳ್ಳಲು ಕಷ್ಟಪಡುತ್ತಿದ್ದರೆ, ನಾನು ಅವರಿಗೆ ಸಹಾಯ ಮಾಡಲು ಇಷ್ಟಪಡುತ್ತೇನೆ ಎಂದು ಕೂಡಾ ಹೇಳಿಕೊಂಡಿದ್ದಾರೆ. 

ವೈಟ್ ಲಾಸ್ ಜರ್ನಿ ಬಗ್ಗೆ ನೆಟಿಜನ್‌ಗಳ ಪ್ರತಿಕ್ರಿಯೆ : 
ಸಾಮಾಜಿಕ ಜಾಲತಾಣಗಳಲ್ಲಿ ರುದ್ವಿ ಶಾಗೆ ಅನೇಕ ಜನರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ನೀವು ಹೇಳಿದ್ದು ಸರಿ. ಸರಳ ಬದಲಾವಣೆಯಿಂದ ಪ್ರಾರಂಭಿಸಿ ಅದನ್ನು ದೀರ್ಘಕಾಲದವರೆಗೆ ಅನುಸರಿಸುವುದು ತೂಕ ಕಳೆದುಕೊಳ್ಳಲು ಅನುಸರಿಸುವ ಸುಲಭ ವಿಧಾನ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

(ಸೂಚನೆ :ಇವೆಲ್ಲವೂ ರುದ್ವಿ ಶಾ ಅವರ ವೈಯಕ್ತಿಕ ಅನುಭವಗಳು. ಇದನ್ನು ಅನುಸರಿಸುವ ಮೊದಲು ಸರಿಯಾದ ವೈದ್ಯಕೀಯ ಸಲಹೆಯನ್ನು ಪಡೆಯಿರಿ. ಇದನ್ನು ಜೀ ಕನ್ನಡ ನ್ಯೂಸ್ ದೃಢಪಡಿಸಿಲ್ಲ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News