World Kidney Day 2025: ಮಕ್ಕಳಲ್ಲಿ ಹೆಚ್ಚುತ್ತಿರುವ ಕಿಡ್ನಿ ಸಮಸ್ಯೆಗೆ ಕಾರಣವೇನು ಗೊತ್ತಾ.?

ದೇಶದ ಮಕ್ಕಳಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಹೆಚ್ಚುತ್ತಿದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಈ ರೀತಿಯ ಸಮಸ್ಯೆ ಹೆಚ್ಚಾಗಲು ಅನುವಂಶಿಯ ಕಾರಣಗಳಿರುತ್ತವೆ.

Written by - Manjunath N | Last Updated : Mar 13, 2025, 12:25 PM IST
  • CKD ಯನ್ನು ಮೊದಲೇ ಪತ್ತೆಹಚ್ಚಲು ಆಗಾಗ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯಕ ಎಂದು ತಜ್ಞರು ತಿಳಿಸಿದ್ದಾರೆ
  • ಈ ಮೂತ್ರಪಿಂಡ ಸಮಸ್ಯೆಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡದಿದ್ದರೆ, ಮಕ್ಕಳಲ್ಲಿ UTI ಗಳು ಮೂತ್ರಪಿಂಡದ ಹಾನಿಗೆ ಕಾರಣವಾಗಬಹುದು.
  • ದೇಶದ ಮಕ್ಕಳಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಹೆಚ್ಚುತ್ತಿದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.
 World Kidney Day 2025: ಮಕ್ಕಳಲ್ಲಿ ಹೆಚ್ಚುತ್ತಿರುವ ಕಿಡ್ನಿ ಸಮಸ್ಯೆಗೆ ಕಾರಣವೇನು ಗೊತ್ತಾ.? title=

World Kidney Day 2025:ಪುಣೆ: ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ, ಅದರಲ್ಲಿಯೂ ಈ ಸಮಸ್ಯೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಈಗ ಈ ಸಮಸ್ಯೆಯು ಆರೋಗ್ಯ ಕ್ಷೇತ್ರದಲ್ಲಿ ಕಳವಳ ಉಂಟುಮಾಡಿದೆ.

ದೇಶದ ಮಕ್ಕಳಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಹೆಚ್ಚುತ್ತಿದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಈ ರೀತಿಯ ಸಮಸ್ಯೆ ಹೆಚ್ಚಾಗಲು ಅನುವಂಶಿಯ ಕಾರಣಗಳಿರುತ್ತವೆ. ಆದರೂ ಸಹ ಮಾಲಿನ್ಯ ಮತ್ತು ಮೂತ್ರನಾಳದ ಸೋಂಕುಗಳ ಕಾರಣದಿಂದ ಈ ಸಮಸ್ಯೆ ಹೆಚ್ಚಾಗುತ್ತಿರುವುದು ಚಿಂತಾಜನಕ ವಿಷಯವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಈ ಮೂತ್ರಪಿಂಡ ಸಮಸ್ಯೆಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡದಿದ್ದರೆ, ಮಕ್ಕಳಲ್ಲಿ UTI ಗಳು ಮೂತ್ರಪಿಂಡದ ಹಾನಿಗೆ ಕಾರಣವಾಗಬಹುದು.ಮತ್ತು ಇದು ಹಲವಾರು ಮಕ್ಕಳಲ್ಲಿ ಈಗಾಗಲೇ ಕಂಡುಬಂದಿದೆ" ಎಂದು ಪುಣೆಯ ಭಾರತಿ ವಿದ್ಯಾಪೀಠ ವೈದ್ಯಕೀಯ ಕಾಲೇಜಿನ ಮುಖ್ಯಸ್ಥೆ ಡಾ. ಭಕ್ತಿ ಸಾರಂಗಿ ಹೇಳಿದ್ದಾರೆ.

ಇದನ್ನೂ ಓದಿ : 500 ವರ್ಷ ಬಳಿಕ ಈ 4 ರಾಶಿಗಳಿಗೆ ಬಂಪರ್ ಲಾಟರಿ.. ಯುಗಾದಿಗೂ ಮೊದಲೇ ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಸಂಪತ್ತು, ಅಷ್ಟೈಶ್ವರ್ಯ ಪ್ರಾಪ್ತಿ.. ಬ್ರಹ್ಮಾಂಡ ಯಶಸ್ಸು!

ಹುಟ್ಟಿದಾಗಿನಿಂದ ಇದ್ದ ದೋಷಗಳು, ಜನ್ಮಜಾತ ಅಸಹಜತೆಗಳು ಮತ್ತು ಪಾಲಿಸಿಸ್ಟಿಕ್ ಮೂತ್ರಪಿಂಡ ಕಾಯಿಲೆಯಂತಹ ಆನುವಂಶಿಕ ಪರಿಸ್ಥಿತಿಗಳು ಸೇರಿದಂತೆ ಮಕ್ಕಳಲ್ಲಿ CKD ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿವೆ.ಅಷ್ಟೇ ಅಲ್ಲದೆ ನಮ್ಮ ಆರೋಗ್ಯದ ಮೇಲೆ ಸುತ್ತಮುತ್ತಲಿನ ಪರಿಸರ ಸಹ ಬಹಳ ಪರಿಣಾಮ ಬೀರುತ್ತದೆ.ಕಳಪೆ ನೈರ್ಮಲ್ಯ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗೆ ಸೀಮಿತ ಅವಕಾಶ ಸೇರಿದಂತೆ ಪರಿಸರ ಮತ್ತು ಸಾಮಾಜಿಕ ಆರ್ಥಿಕ ಅಂಶಗಳೂ ಕೂಡ ಈ ಕಿಡ್ನಿ ಸಮಸ್ಯೆ ಹೆಚ್ಚಾಗಲು ಕಾರಣವಾಗಿವೆ. ಬದಲಾಗುತ್ತಿರುವ ಹವಾಮಾನ ಕೂಡ ಒಂದು ಪ್ರಮುಖ ಅಂಶವಾಗಿದೆ, ವಿಶೇಷವಾಗಿ ಹೆಚ್ಚಿನ ತಾಪಮಾನ ಮತ್ತು ನಿರ್ಜಲೀಕರಣ ಮುಂತಾದಗಳು ಕೂಡ ಪರೋಕ್ಷವಾದ ಕಾರಣಗಳಾಗಿವೆ.

CKD ಯನ್ನು ಮೊದಲೇ ಪತ್ತೆಹಚ್ಚಲು ಆಗಾಗ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯಕ ಎಂದು ತಜ್ಞರು ತಿಳಿಸಿದ್ದಾರೆ.ಇದರಿಂದ ಸಮಸ್ಯೆ ಸಣ್ಣದಿದ್ದಾಗಲೇ ರೋಗದ ಗುಣಲಕ್ಷಣವನ್ನು ಕಂಡುಹಿಡಿದು ಸಮಸ್ಯೆಯನ್ನು ಬಗೆಹರಿಸಲು ಸೂಕ್ತ  ಚಿಕಿತ್ಸೆ ನೀಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

  

 

Trending News