ನಿಮ್ಮ ಕಣ್ಣುಗಳು ಅಪಾಯದಲ್ಲಿವೆ.. ಅದ್ಕೆ ಈ ಅಂಶಗಳನ್ನು ನೀವು ಫಾಲೋ ಮಾಡಲೇಬೇಕು!

ಕಣ್ಣಿನ ಆರೋಗ್ಯವನ್ನು ಯಾವೆಲ್ಲಾ ರೀತಿಯಲ್ಲಿ ಕಾಪಾಡಿಕೊಳ್ಳಬಹುದು ಎನ್ನುವ ಹಲವು ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ. ಕಣ್ಣಿನ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಬಹುದು.   

Written by - Bhimappa | Last Updated : Dec 10, 2025, 05:14 PM IST
  • ಈಗೀಗ ಎಲ್ಲರಲ್ಲೂ ಕಣ್ಣುಗಳ ಸಮಸ್ಯೆಗಳು, ತೊಂದರೆಗಳು ಹೆಚ್ಚಾಗುತ್ತಿವೆ
  • ಕಣ್ಣುಗಳನ್ನು ರಕ್ಷಣೆ ಮಾಡಲು ಇವುಗಳನ್ನು ನೀವು ನಿತ್ಯ ತಿನ್ನಲೇಬೇಕು
  • ಪಲಾಕ್‌ ಅನ್ನು ಪಲ್ಯ, ಸಲಾಡ್‌, ಸೂಪ್‌ ರೀತಿಯಲ್ಲಿ ಸೇವಿಸಬಹುದು
ನಿಮ್ಮ ಕಣ್ಣುಗಳು ಅಪಾಯದಲ್ಲಿವೆ.. ಅದ್ಕೆ ಈ ಅಂಶಗಳನ್ನು ನೀವು ಫಾಲೋ ಮಾಡಲೇಬೇಕು!
ಕೃಪೆ; ಮೆಟಾ ಎಐ

ಮೊಬೈಲ್‌, ಕಂಪ್ಯೂಟರ್‌ಗಳು ಬಂದಾಗಿನಿಂದ ಹಲವಾರು ಜನರಿಗೆ ಕಣ್ಣುಗಳ ಸಮಸ್ಯೆಗಳು ಬರುತ್ತಿವೆ. ಡಿಸ್ಪ್ಲೇನ ಹೆಚ್ಚು ಸಮಯ ನೋಡುವುದರಿಂದ ದೂರದ, ಸಮೀಪದ ವಸ್ತುಗಳು ಮಂಜು ಮಂಜಾಗಿ ಕಾಣುತ್ತವೆ ಎಂದು ನಿಮ್ಮ ಅಕ್ಕಪಕ್ಕದವರೇ ಹೇಳುತ್ತಿರುತ್ತಾರೆ. ಹೀಗಾಗಿ ಕಣ್ಣುಗಳ ಆರೋಗ್ಯವನ್ನು ಕಾಪಾಡುವುದು ಅತಿ ಮುಖ್ಯವಾಗಿದೆ. ಹಾಗಾದರೆ ಕಣ್ಣುಗಳ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಕೆಲವೊಂದು ಟಿಪ್ಸ್‌ ಇಲ್ಲಿವೆ. 

Add Zee News as a Preferred Source

ಡಿಸ್ಪ್ಲೇ ಹೆಚ್ಚು ಸಮಯ ಕಣ್ಣು ಮಿಟುಕಿಸದೇ ನೋಡುವುದನ್ನು ಕಡಿಮೆ ಮಾಡಬೇಕು. ಪ್ರತಿ ಇಪ್ಪತ್ತು ಸೆಕೆಂಡ್ಸ್‌ಗೆ ಒಮ್ಮೆ ಆದರೂ ಕಣ್ಣುಗಳನ್ನು ಮಿಟುಕಿಸಬೇಕು. ಪ್ರತಿ ಇಪ್ಪತ್ತು ನಿಮಿಷಕ್ಕೊಮ್ಮೆ ಒಂದು ಬಾರಿ ನೀವು ಕುಳಿತಲ್ಲಿಂದ ಎದ್ದು ಕಣ್ಣುಗಳಿಗೆ ವಿಶ್ರಾಂತಿ ನೀಡಿ. ದೂರು ಇರುವ ವಸ್ತುವನ್ನು ಕೆಲ ಸೆಕೆಂಡ್ಸ್‌ ನೋಡಿ. ಹೀಗೆ ಮಾಡುವುದರಿಂದ ಕಣ್ಣುಗಳ ಆರೋಗ್ಯ ಸುಧಾರಿಸುತ್ತದೆ. ಇವುಗಳ ಜೊತೆಗೆ ಈ ಆಹಾರಗಳನ್ನು ನಿತ್ಯ ಫಾಲೋ ಮಾಡುವುದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು. 

ಹಸಿರು ಸೊಪ್ಪು ಪಾಲಕ್ ಕಣ್ಣಿನ ಆರೋಗ್ಯಕ್ಕೆ ಹೇಳಿ ಮಾಡಿಸಿದಂತ ಆಹಾರವಾಗಿದೆ. ಈ ಪಾಲಕ್‌ ಸೊಪ್ಪಿನಲ್ಲಿ ವಿಟಮಿನ್‌ ಸಿ, ಎ, ಕೆ ಹಾಗೂ ಒಮೆಗಾ- 3 ಕೊಬ್ಬಿನ ಆಮ್ಲಗಳು ಹೇರಳವಾಗಿವೆ. ಪಲಾಕ್‌ ಅನ್ನು ಪಲ್ಯ, ಸಲಾಡ್‌, ಸೂಪ್‌ ರೀತಿಯಲ್ಲಿ ಸೇವಿಸುವುದರಿಂದ ಕಣ್ಣಿನ ಆರೋಗ್ಯ ರಕ್ಷಣೆ ಮಾಡಬಹುದು. 

ನಮ್ಮ ಕಣ್ಣುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದರೆ ಗೆಣಸುಗಳನ್ನು ತಿನ್ನಬೇಕು. ಇದರಲ್ಲಿ ವಿಟಮಿನ್‌ ಎ ಮತ್ತು ಬೀಟಾ ಕ್ಯಾರೋಟಿನ್‌ನ ಅತಿ ಹೆಚ್ಚಾಗಿ ಇರುತ್ತದೆ. ಇವು ಕಾರ್ನಿಯಾದ ಆರೋಗ್ಯ ಸುಧಾರಿಸುತ್ತದೆ. ವಿಟಮಿನ್‌ ಎ ಕಣ್ಣಿಗೆ ಅತ್ಯಂತ ಮುಖ್ಯವಾದ ಜೀವಸತ್ವವಾಗಿದೆ. ಹೀಗಾಗಿ ಆಹಾರದ ಜೊತೆ ಗೆಣಸನ್ನು ತಿನ್ನುತ್ತಿರಬೇಕು. 

ಟೊಮ್ಯಾಟೊದಲ್ಲಿ ಕಣ್ಣುಗಳನ್ನು ರಕ್ಷಣೆ ಮಾಡುವ ಅಂಶಗಳು ಇವೆ. ಇದನ್ನು ತಿನ್ನುವುದರಿಂದ ರೆಟಿನಾದ ಆರೋಗ್ಯ ಚೆನ್ನಾಗಿರುತ್ತದೆ. ಮ್ಯಾಕ್ಯುಲರ್‌     ಡಿಜೆನರೇಷನ್‌ ಅಪಾಯ ವಯಸ್ಸಿನವರಲ್ಲಿ ಕಡಿಮೆ ಮಾಡುತ್ತದೆ. ಟೊಮ್ಯಾಟೊಗಳಲ್ಲಿ ಎ ಮತ್ತು ಸಿ ಜೀವಸತ್ವಗಳು ಇರುತ್ತವೆ.  

ಇದನ್ನೂ ಓದಿ: ಕಾಂತಾರದ ಕನಕವತಿಗೆ ಇಂದು ಎಷ್ಟನೇ ಹುಟ್ಟು ಹಬ್ಬ.. ಬರ್ತ್‌ಡೇ ದಿನ ರುಕ್ಮಿಣಿ ವಸಂತ್‌ ಸ್ಪೆಷಲ್‌ ಫೋಟೋಸ್‌!

ಕ್ಯಾಪ್ಸಿಕಂ ಅಥವಾ ದಪ್ಪ ಮೆಣಸಿನಕಾಯಿ ಇವುಗಳನ್ನು ತಿನ್ನುವುದರಿಂದ ಕಣ್ಣಿನ ಅಪಾಯ ಕಡಿಮೆ ಮಾಡುತ್ತದೆ. ಕೆಂಪಾಗಿ ಇರುವ ಕ್ಯಾಪ್ಸಿಕಂಗಳಲ್ಲಿ ಸಿ ವಿಟಮಿನ್ಸ್‌ ಸಮೃದ್ಧವಾಗಿರುತ್ತದೆ. ಇದರಲ್ಲಿನ ಉತ್ಕರ್ಷಣ ನಿರೋಧಕವೂ ಕಣ್ಣುಗಳಲ್ಲಿನ ರಕ್ತನಾಳಗಳ ಆರೋಗ್ಯವನ್ನು ರಕ್ಷಿಸುತ್ತದೆ. ಕಣ್ಣಿನ ಆರೋಗ್ಯಕ್ಕೆ ಕ್ಯಾರೆಟ್‌, ಮೊಟ್ಟೆ, ಬಾಳೆಹಣ್ಣುಗಳು, ಮೀನು, ಅಗಸೆ ಬೀಜ, ಸಿಟ್ರಸ್‌ ಹಣ್ಣುಗಳು, ವಾಲ್‌ನಟ್ಸ್‌ ಸೇರಿ ಇನ್ನು ಕೆಲವೊಂದಿಷ್ಟನ್ನು ತಿನ್ನಬಹುದು.     

ಇದನ್ನೂ ಓದಿ: ಆಡಿದ್ದೇ 13 ಟಿ20 ಮ್ಯಾಚ್‌.. ಲೆಜೆಂಡ್ರಿ ವಿಕೆಟ್‌ ಕೀಪರ್‌ ದಾಖಲೆ ಸರಿಗಟ್ಟಿದ ಯಂಗ್‌ ಮ್ಯಾನ್‌..!

About the Author

Bhimappa

ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

...Read More

Trending News