)
Hubli ED Raid: ದೇಶದ ವಿವಿಧ ಕಡೆಗಳಲ್ಲಿ ಕರಾಳ ದಂದೆ ಮೂಲಕ ಅಪಾರ ಪ್ರಮಾಣದ ಸಂಪತ್ತು, ಹಣ, ಭೂಮಿ, ಚಿನ್ನಾಭರಣ ಮಾಡಿಕೊಂಡ ದಂಧೆಕೋರರ ನಿವಾಸ, ಕಚೇರಿ ಹಾಗೂ ಅವರ ಸಂಬಂಧಿಕರ ಮನೆ ಆಸ್ತಿ ಪಾಸ್ತಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದರಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ದೇಶಪಾಂಡೆ ನಗರದ ಕಾಮಾಕ್ಷಿ ಅರ್ಪಾಮೆಂಟ್ ಮೇಲೆಯೋ ಸಹ ದಾಳಿ ಆಗಿದ್ದು ಹವಾಲ ಮೂಲಕ ಅಪಾರ ಸಂಪತ್ತು ಗಳಿಸಿದ್ದ ಸಮುಂದ್ರ ಸಿಂಗ್ ಮನೆ ಮೇಲೆ ಇಡಿ ಅಧಿಕಾರಿಗಳು ಇಂದು (ಆ.22) ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಸಮುಂದ್ರ ಸಿಂಗ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ಸ್ವಲ್ಪ ಡಿಫರಂಟ್ ಆಗಿ ದಾಳಿ ಮಾಡಿದ್ದು ಇವರ ದಾಳಿಗೆ ಇಡೀ ಹುಬ್ಬಳ್ಳಿ ಬೆಚ್ಚಿ ಬಿದ್ದಿದೆ. ಸಿನಿಮೀಯ ಶೈಲಿಯಲ್ಲಿ ಹುಬ್ಬಳ್ಳಿ ಉದ್ಯಮಿ ಮನೆ ಮೇಲೆ ಇಡಿ ದಾಳಿ ಮಾಡಿದೆ. ಅಧಿಕಾರಿಗಳು ಬೆಲ್ ಮಾಡಿದರೂ ಉದ್ಯಮಿ ಡೋರ್ ಓಪನ್ ಮಾಡದಿದ್ದಾಗ, ಅಧಿಕಾರಿಗಳು ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ್ದಾರೆ. ಹವಾಲಾ ಕಿಂಗ್ ಪಿನ್ ಸಮುಂದರ್ ಸಿಂಗ್ ಮನೆ ಮೇಲೆಯೇ ಈ ದಾಳಿ ನಡೆದಿದೆ.
ದೇಶಪಾಂಡೆ ನಗರದ ಕಾಮಾಕ್ಷಿ ಅಪಾರ್ಟ್ಮೆಂಟ್ ನಲ್ಲಿ ಸಿಂಗ್ ವಾಸವಾಗಿದ್ದು, ಈತನ ಮನೆಗೆ ಐವರು ಅಧಿಕಾರಿಗಳು ಹಾಗೂ 4 ಜನ ಸಿ ಆರ್ ಪಿ ಎಫ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. 15 ಜನ ಅಧಿಕಾರಿಗಳ ತಂಡದಿಂದ ಏಕಕಾಲದಲ್ಲಿ ದಾಳಿ ನಡೆದಿದ್ದು, ಈ ಬಗ್ಗೆ ಮಾಹಿತಿ ಪಡೆದುಕೊಂಡ ಸಮುಂದ್ರ ಸಿಂಗ್ ಬಾಗಿಲು ತೆರೆಯದೇ, ತಾನು ಮನೆಯಲ್ಲೇ ಇಲ್ಲವೆನ್ನುವಂತೆ ಡ್ರಾಮಾ ಮಾಡಿದ್ದಾನೆ. ಇಡಿ ಅಧಿಕಾರಿಗಳು ಮಾತ್ರ ಇವರ ಡ್ರಾಮಾ ಬಗ್ಗೆ ತಲೆಕೆಡಿಸಿಕೊಳ್ಳದೇ, ಬಾಗಿಲು ಮುರಿದು ನುಗ್ಗಿದ್ದಾರೆ.
ಅಪಾರ್ಟ್ಮೆಂಟ್ನ ಐದನೇ ಮಹಡಿಯಲ್ಲಿರು ಸಮುಂದರ್ ಸಿಂಗ್ ಹಾಗು ಆತನ ಸಹೋದರ ಮನೆ ದಾಳಿ ನಡೆದಿದೆ. ಈತ ಗೋವಾ, ಶ್ರೀಲಂಂಕಾ, ದುಬೈನಲ್ಲಿ ಮೆಜೆಸ್ಟಿಕ್ ಫ್ರೈಡ್ ಕ್ಯಾಸಿನೊ ನಡೆಸುತ್ತಿದ್ದು, ಕೋಟ್ಯಾಂತರ ರೂಪಾಯಿ ಗೇಮ್ ಆಫ್ ಹಾಗು ಕ್ಯಾಸಿನೊ ವ್ಯವಹಾರ ನಡೆಸುತ್ತಿದ್ದಾನೆ. ಅಲ್ಲದೇ ಇತ್ತೀಚೆಗೆ, ಕೋಟಿ ಕೋಟಿ ಖರ್ಚು ಮಾಡಿ, ಪುತ್ರನ ವಿವಾಹ ಕೂಡ ಅದ್ಧೂರಿಯಾಗಿಯೇ ಮಾಡಿದ್ದ ಬಗ್ಗೆ ಖರ್ಚು ವೆಚ್ಚ ಹಾಗೂ ಹವಾಲ ಹಗರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕಲೆ ಹಾಕಿ ಈತನ ಮನೆ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿ, ತನಿಖೆ ಮುಂದುವರೆಸಿದ್ದಾರೆ.