)
ಹುಬ್ಬಳ್ಳಿ: ಜಾಗತಿಕ ಐಟಿ ನಾಯಕ ಇನ್ಫೋಸಿಸ್ (NSE, BSE, NYSE: INFY) ತನ್ನ ಹುಬ್ಬಳ್ಳಿಯ ಅಭಿವೃದ್ಧಿ ಕೇಂದ್ರದಲ್ಲಿ ಇನ್ಫೋಸಿಸ್ ಸೆಂಟರ್ ಫಾರ್ ಅಡ್ವಾನ್ಸ್ ಎಐ, ಸೈಬರ್ ಸೆಕ್ಯುರಿಟಿ ಆಂಡ್ ಸ್ಪೇಸ್ ಟೆಕ್ನಾಲಾಜಿಯನ್ನು ಉದ್ಘಾಟಿಸಿದೆ.
ಈ ಕೇಂದ್ರವು ನಾವೀನ್ಯತೆ ಮತ್ತು ಒಳಗೊಂಡ ಬೆಳವಣಿಗೆಯ ಮೂಲಕ ಐಟಿ ಕ್ಷೇತ್ರದಲ್ಲಿ ಮುಂಚೂಣಿಯನ್ನು ಕಾಯ್ದುಕೊಳ್ಳುವ ಇನ್ಫೋಸಿಸ್ನ ಬದ್ಧತೆಯನ್ನು ಪ್ರದರ್ಶಿಸುತ್ತದೆ.ಇನ್ಫೋಸಿಸ್ ಲಿವಿಂಗ್ ಲ್ಯಾಬ್ನ ಭಾಗವಾಗಿರುವ ಈ ಕೇಂದ್ರವು, ಜಾಗತಿಕವಾಗಿ 12ಕ್ಕೂ ಹೆಚ್ಚು ಕೇಂದ್ರಗಳ ಜಾಲಕ್ಕೆ ಸಂಪರ್ಕಿತವಾಗಿದೆ. ಇದು ಕೃತಕ ಬುದ್ಧಿಮತ್ತೆ (ಎಐ), ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಭದ್ರತೆ, ಎಂಜಿನಿಯರಿಂಗ್ ಸೇವೆಗಳು, ಎಸ್ಎಪಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಗ್ರಾಹಕರಿಗೆ ನಾವೀನ್ಯತೆಯನ್ನು ವೇಗಗೊಳಿಸಲು ವಿನ್ಯಾಸಗೊಳಿಸಲಾಗಿದೆ.
ಈ ಕೇಂದ್ರವು ಉತ್ಪಾದನೆ, ಹಣಕಾಸು ಸೇವೆಗಳು, ರೀಟೇಲ್ ಮತ್ತು ಆರೋಗ್ಯ ರಕ್ಷಣೆಯಂತಹ ಕೈಗಾರಿಕೆಗಳಿಗೆ ಜಾಗತಿಕ ಮಟ್ಟದಲ್ಲಿ ಸೇವೆ ಒದಗಿಸಲಿದೆ. ಹುಬ್ಬಳ್ಳಿಯನ್ನು ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸುವ ಈ ಸೌಲಭ್ಯವು 1,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಉದ್ಯೋಗಾವಕಾಶ ಸೃಷ್ಟಿಸಲಿದೆ.
ಕರ್ನಾಟಕ ಸರ್ಕಾರದ ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಪ್ರಿಯಾಂಕ ಖರ್ಗೆ ಅವರು ಕೇಂದ್ರವನ್ನು ಉದ್ಘಾಟಿಸಿದರು. ಇನ್ಫೋಸಿಸ್ನ ಕಾರ್ಯಕಾರಿ ಉಪಾಧ್ಯಕ್ಷರಾದ ಸುನೀಲ ಕುಮಾರ ಧಾರೇಶ್ವರ, ರಜನೀಶ ಮಾಳವೀಯ ಸೇರಿದಂತೆ ಹಿರಿಯ ನಾಯಕರು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.