ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಡೋರಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಗ್ರಾಮ ದೇವಿಯರ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ.
ಮೊದಲ ದಿನ ದೇವಿಯರಿಗೆ ಉಡಿ ತುಂಬುವುದು ಮೂರು ದಿನ ಹೊನ್ನಾಟದ ನಂತರ ಶುಕ್ರವಾರ ಸಂಜೆ ಭವ್ಯವಾದ ತೇರಿನ ಉತ್ಸವ ಜರುಗಿತು.
ಮಹಾ 'ರಥೋತ್ಸವ'ದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.
ಹೊನ್ನಾಟದ ಕೊನೆಯ ದಿನ ಮುಸ್ಲಿಂ ಸಮುದಾಯದವರು ದೇವಿಯರನ್ನ ಹೊತ್ತು ಹೊನ್ನಾಟವಾಡಿದ್ದು ಭಾವೈಕ್ಯತೆಗೆ ಸಾಕ್ಷಿಯಾಗಿತ್ತು.
ನಿನ್ನೆಯೂ ಸಹ ಸುಮಾರು 45 ಕ್ವಿಂಟಾಲ ತೂಕದ ಮಹಾ ರಥೋತ್ಸವ ಎಳೆಯುವಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಸೇರಿದಂತೆ ಎಲ್ಲರೂ ಪ್ರಮುಖ ಪಾತ್ರ ವಹಿಸಿದ್ದು ವಿಶೇಷವಾಗಿತ್ತು.
ತೇರು ಎಳೆಯುವಾಗ ಉಧೋ, ಉಧೋ, ಹರ ಹರ ಮಹಾದೇವ ಎಂಬ ಉದ್ಘೋಷಗಳು ಮೊಳಗಿದವು. ಕೇಸರಿ ಧ್ವಜದ ಬಾವುಟ ಎಲ್ಲೆಡೆ ರಾರಾಜಿಸಿತು.
ಹುಲಿಕೇರಿ ಗ್ರಾಮದ ಡೊಳ್ಳು ಬಡಿತ ಮಹಾರಥೋತ್ಸವಕ್ಕೆ ಮೆರಗು ತಂದವು.