close

News WrapGet Handpicked Stories from our editors directly to your mailbox

ದೆಹಲಿ ಒಂಬತ್ತು ರಸ್ತೆಗಳಿಗೆ ಅಂತರಾಷ್ಟ್ರೀಯ ದರ್ಜೆಯ ಮರುವಿನ್ಯಾಸ- ಕೇಜ್ರಿವಾಲ್

 ದೆಹಲಿ ಸರ್ಕಾರವು ಒಟ್ಟು 45 ಕಿ.ಮೀ ವಿಸ್ತಾರದ ಕನಿಷ್ಠ ಒಂಬತ್ತು ರಸ್ತೆಗಳನ್ನು ಮರುವಿನ್ಯಾಸಗೊಳಿಸಲಾಗುವುದು  ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಪ್ರಕಟಿಸಿದ್ದಾರೆ. ರಸ್ತೆಗಳನ್ನು ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಮರುವಿನ್ಯಾಸಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Updated: Oct 22, 2019 , 05:38 PM IST
 ದೆಹಲಿ ಒಂಬತ್ತು ರಸ್ತೆಗಳಿಗೆ ಅಂತರಾಷ್ಟ್ರೀಯ ದರ್ಜೆಯ ಮರುವಿನ್ಯಾಸ- ಕೇಜ್ರಿವಾಲ್

ನವದೆಹಲಿ: ದೆಹಲಿ ಸರ್ಕಾರವು ಒಟ್ಟು 45 ಕಿ.ಮೀ ವಿಸ್ತಾರದ ಕನಿಷ್ಠ ಒಂಬತ್ತು ರಸ್ತೆಗಳನ್ನು ಮರುವಿನ್ಯಾಸಗೊಳಿಸಲಾಗುವುದು  ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಪ್ರಕಟಿಸಿದ್ದಾರೆ. ರಸ್ತೆಗಳನ್ನು ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಮರುವಿನ್ಯಾಸಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

'45 ಕಿ.ಮೀ ವಿಸ್ತಾರದ ಒಂಬತ್ತು ಪಿಡಬ್ಲ್ಯೂಡಿ ರಸ್ತೆಗಳನ್ನು ಪೈಲಟ್ ಆಧಾರದ ಮೇಲೆ ಮರುವಿನ್ಯಾಸಗೊಳಿಸಲಾಗುವುದು. ಈಗಾಗಲೇ ಕಾಮಗಾರಿಗಳನ್ನು ಹಂಚಿಕೆ ಮಾಡಲಾಗಿದೆ' ಎಂದು ಕೇಜ್ರಿವಾಲ್ ಹೇಳಿದರು. ರಸ್ತೆ ಕಾಮಗಾರಿ ಒಂದು ವರ್ಷದೊಳಗೆ ಪೂರ್ಣಗೊಳ್ಳುವುದಾಗಿ ಘೋಷಿಸಿದರು. ಈ ವಿನ್ಯಾಸದಿಂದಾಗಿ ರಸ್ತೆಗಳು ಸುಂದರವಾಗಿರಲಿದ್ದು ಸಂಚಾರ ಸಮಸ್ಯೆಗಳಿಗೆ ಅಂತ್ಯ ಹಾಡಲಿದೆ ಎಂದು ತಿಳಿಸಿದರು.

'ಅಡಚಣೆಗಳನ್ನು ತೆಗೆದುಹಾಕಲಾಗುವುದು. ಮರುವಿನ್ಯಾಸವು ಜಾಗದ ಗರಿಷ್ಠ ಬಳಕೆಯನ್ನು ಖಚಿತಪಡಿಸುತ್ತದೆ. ಫುಟ್‌ಪಾತ್‌ಗಳನ್ನು ಮರುವಿನ್ಯಾಸಗೊಳಿಸಲಾಗುತ್ತದೆ ಮತ್ತು ಅಗಲಗೊಳಿಸಲಾಗುತ್ತದೆ. ಅಲ್ಲದೆ, ಮರಗಳಿಗೆ ಸ್ಥಳಾವಕಾಶವಿರುತ್ತದೆ ಮತ್ತು ಆಟೊಗಳು ಮತ್ತು ಇ-ರಿಕ್ಷಾಗಳಿಗೆ ಸ್ಟ್ಯಾಂಡ್‌ಗಳು ಇರುತ್ತವೆ' ಎಂದು ಸಿಎಂ ಹೇಳಿದರು. ಫುಟ್‌ಪಾತ್‌ಗಳನ್ನು ಅಂಗವಿಕಲರಿಗೆ ಪ್ರವೇಶಿಸಲು ಮರುವಿನ್ಯಾಸಗೊಳಿಸಲಾಗುವುದು ಮತ್ತು ಅವು ಐದರಿಂದ ಹತ್ತು ಅಡಿ ಉದ್ದವಿರುತ್ತವೆ ಎಂದು ಹೇಳಿದರು.

ರಸ್ತೆಗಳಲ್ಲಿ ನೀರು ಬರದಂತೆ ರಸ್ತೆಬದಿಯ ಚರಂಡಿಗಳನ್ನು ಸಹ ಪುನರ್ನಿರ್ಮಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದರು. ಇದರ ವೆಚ್ಚ ಕಿಮೀಗೆ ಸುಮಾರು 8-10 ಕೋಟಿ ರೂ. ಯಂತೆ ಒಟ್ಟು ಸುಮಾರು 400 ಕೋಟಿ ರೂ.ವ್ಯಯವಾಗಲಿದೆ ಎಂದು ತಿಳಿಸಿದರು.