ಭಾರತ ಕೇವಲ ರಾಜ್ಯಗಳ ಒಕ್ಕೂಟವಷ್ಟೇ ಅಲ್ಲ, ಜನರ ಒಕ್ಕೂಟವೂ ಆಗಿದೆ- ನಿವೃತ್ತ ನ್ಯಾ.ಕುರಿಯನ್ ಜೋಸೆಫ್

 ಭಾರತವು ರಾಜ್ಯಗಳ ಒಕ್ಕೂಟ ಮಾತ್ರವಲ್ಲ, ಹಲವಾರು ಧರ್ಮ ಮತ್ತು ಸಂಸ್ಕೃತಿಗಳನ್ನು ಪ್ರತಿನಿಧಿಸುವ ಜನರ ಒಕ್ಕೂಟವೂ ಆಗಿದೆ ಎಂದು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕುರಿಯನ್ ಜೋಸೆಫ್ ಶುಕ್ರವಾರ ಹೇಳಿದ್ದಾರೆ.

Last Updated : Aug 24, 2019, 11:39 AM IST
 ಭಾರತ ಕೇವಲ ರಾಜ್ಯಗಳ ಒಕ್ಕೂಟವಷ್ಟೇ ಅಲ್ಲ, ಜನರ ಒಕ್ಕೂಟವೂ ಆಗಿದೆ- ನಿವೃತ್ತ ನ್ಯಾ.ಕುರಿಯನ್ ಜೋಸೆಫ್ title=
ANI PHOTO

ನವದೆಹಲಿ:  ಭಾರತವು ರಾಜ್ಯಗಳ ಒಕ್ಕೂಟ ಮಾತ್ರವಲ್ಲ, ಹಲವಾರು ಧರ್ಮ ಮತ್ತು ಸಂಸ್ಕೃತಿಗಳನ್ನು ಪ್ರತಿನಿಧಿಸುವ ಜನರ ಒಕ್ಕೂಟವೂ ಆಗಿದೆ ಎಂದು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕುರಿಯನ್ ಜೋಸೆಫ್ ಶುಕ್ರವಾರ ಹೇಳಿದ್ದಾರೆ.

ಅಖಿಲ ಭಾರತ ಕ್ಯಾಥೊಲಿಕ್ ಯೂನಿಯನ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕುರಿಯನ್ ಜೋಸೆಫ್  "ನನ್ನ ಪ್ರಕಾರ, ಭಾರತ್ ಎಂದರೆ ಭಾರತವು ಕೇವಲ ರಾಜ್ಯಗಳ ಒಕ್ಕೂಟವಲ್ಲ, ಇದು ಹಲವಾರು ಧರ್ಮಗಳಿಗೆ ಸೇರಿದ ಜನರ ಒಕ್ಕೂಟವಾಗಿದೆ, ವಿವಿಧ ಸಂಸ್ಕೃತಿಗಳು, ಹಲವಾರು ಭಾಷೆಗಳು ಮತ್ತು ನಾಗರಿಕತೆಗಳನ್ನು ಪ್ರತಿನಿಧಿಸುತ್ತದೆ. ಆದ್ದರಿಂದ, ಇದು ಎಲ್ಲಾ ವೈವಿಧ್ಯತೆಗಳ ಒಕ್ಕೂಟವಾಗಿದೆ, ಅದು ಭಾರತ "ಈ ವೈವಿಧ್ಯತೆಯನ್ನು ತೆಗೆದುಕೊಂಡ ಕ್ಷಣ, ಅದು ಭಾರತವಲ್ಲ, ಅದು ಬೇರೆ ವಿಷಯ" ಎಂದು ಹೇಳಿದರು.

"ದೇಶವು ಹಿಂದುಳಿಯುತ್ತಿರುವುದು ಸಂವಿಧಾನ ಕೆಟ್ಟದ್ದಿದೆ ಎಂದಲ್ಲ , ಆದರೆ ಸಂವಿಧಾನವನ್ನು ನಿರ್ವಹಿಸುವ ಅಥವಾ ಅದರ ಸಂಸ್ಥೆಗಳನ್ನು ನಿರ್ವಹಿಸುವ ಜನರು ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುವುದಿಲ್ಲ. ಅದು ನಾವು ಎದುರಿಸುತ್ತಿರುವ ಸಂಪೂರ್ಣ ಸಮಸ್ಯೆ" ಎಂದು ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶರು ಹೇಳಿದರು.

"ಡಾ.ಅಂಬೇಡ್ಕರ್ ಅವರು ಹೇಳಿದ ಮಾತನ್ನು ನಾನು  ಹೇಳಲು ಬಯಸುತ್ತೇನೆ - ಈ ಸಂವಿಧಾನ ನಮ್ಮನ್ನು ವಿಫಲಗೊಳಿಸುವುದಿಲ್ಲ, ಬಹುಶಃ ನಾವು ಸಂವಿಧಾನವನ್ನು ವಿಫಲಗೊಳಿಸಬಹುದು. ಅದು ನಿಜಕ್ಕೂ ನೆಲದ ವಾಸ್ತವ" ಎಂದು ಅವರು ಹೇಳಿದರು.

Trending News