close

News WrapGet Handpicked Stories from our editors directly to your mailbox

ಸಿಗ್ನೇಚರ್ ಸೇತುವೆಯಲ್ಲಿ ಡಿವೈಡರ್'ಗೆ ಡಿಕ್ಕಿ ಹೊಡೆದ ಕಾರು; 1 ಸಾವು, ಮೂವರಿಗೆ ಗಾಯ

ನಾಲ್ವರು ಸ್ನೇಹಿತರು ಸಿಗ್ನೇಚರ್ ಸೇತುವೆ ಮೇಲೆ ತೆರಳುತ್ತಿದ್ದ ವೇಳೆ ಸಂಭವಿಸಿದ ದುರಂತ.

Updated: Apr 26, 2019 , 09:55 AM IST
ಸಿಗ್ನೇಚರ್ ಸೇತುವೆಯಲ್ಲಿ ಡಿವೈಡರ್'ಗೆ ಡಿಕ್ಕಿ ಹೊಡೆದ ಕಾರು; 1 ಸಾವು, ಮೂವರಿಗೆ ಗಾಯ
File Image

ನವದೆಹಲಿ: ಸಿಗ್ನೇಚರ್ ಸೇತುವೆಯಲ್ಲಿ ಡಿವೈಡರ್'ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಆಶಿಶ್, ರಿಷಬ್, ಯಶ್ ಮತ್ತು ವಿಶಾಲ್ ಎಂಬ ನಾಲ್ವರು ಸ್ನೇಹಿತರು ತಮ್ಮ ಕಾರಿನಲ್ಲಿ ಸಿಗ್ನೇಚರ್ ಸೇತುವೆ ಮೇಲೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರು ಚಾಲನೆ ಮಾಡುತ್ತಿದ್ದ ಆಶಿಶ್(23) ವಾಹನದ ಮೇಲೆ ನಿಯಂತ್ರಣ ಕಳೆದು ಕೊಂದು ಡಿವೈಡರ್'ಗೆ ಡಿಕ್ಕಿ ಹೊಡೆದಿದ್ದಾರೆ. 

ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಆಶಿಶ್ ಅವರನ್ನು ಟ್ರಾಮಾ ಸೆಂಟರ್ ಸಿವಿಲ್ ಲೈನ್ ಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಆಶಿಶ್ ಸಾವನ್ನಪ್ಪಿದ್ದರು. ಇನ್ನುಳಿದ ಮೂವರೂ ಗಾಯಗೊಂಡಿದ್ದು, ವಿಶಾಲ್ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಯಶ್ ಮತ್ತು ರಿಷಬ್ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಮೃತ ಆಶಿಶ್ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು. ಅಪಘಾತದ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುವುದು ಎಂದು ಪೋಲಿಸರು ಹೇಳಿದ್ದಾರೆ.