ರೈತರ ಆದಾಯ ದ್ವಿಗುಣ, ರಾಮಮಂದಿರ ನಿರ್ಮಾಣ; ಸಂಕಲ್ಪ ಪತ್ರದ ಪ್ರಮುಖ ಭರವಸೆ!

ಮುಂದಿನ ಐದು ವರ್ಷಗಳಲ್ಲಿ ಭಾರತದ ಸಮಗ್ರ ಅಭಿವೃದ್ಧಿ ಸಂಕಲ್ಪದೊಂದಿಗೆ ಬಿಜೆಪಿ ಇಂದು ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದೆ.

Last Updated : Apr 8, 2019, 01:30 PM IST
ರೈತರ ಆದಾಯ ದ್ವಿಗುಣ, ರಾಮಮಂದಿರ ನಿರ್ಮಾಣ; ಸಂಕಲ್ಪ ಪತ್ರದ ಪ್ರಮುಖ ಭರವಸೆ! title=
Pic Courtesy: ANI

ನವದೆಹಲಿ: ಭಾರತೀಯ ಜನತಾ ಪಕ್ಷ(ಬಿಜೆಪಿ) ಕೇಂದ್ರ ಕಚೇರಿಯಲ್ಲಿಂದು 'ಸಂಕಲ್ಪ ಪತ್ರ' ಹೆಸರಿನಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಮುಂದಿನ ಐದು ವರ್ಷಗಳಲ್ಲಿ ಭಾರತದ ಸಮಗ್ರ ಅಭಿವೃದ್ಧಿ ಸಂಕಲ್ಪದೊಂದಿಗೆ ಈ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಲಾಗಿದೆ. 

ಭಾರತದ ಅಭಿವೃದ್ಧಿಗಾಗಿ ಕಳೆದ ಐದು ವರ್ಷಗಳಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ ಸಾಧನೆಗಳು, 2014ರಿಂದ 2019ರ ವರೆಗಿನ ಅವಧಿ ದೇಶದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು ಎಂದು ಅಮಿತ್ ಶಾ ಹೇಳಿದರು. ಪ್ರಣಾಳಿಕೆ ಸಮಿತಿ ಅಧ್ಯಕ್ಷ ಗೃಹ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಬಿಜೆಪಿ ಸಂಕಲ್ಪ ಪತ್ರದಲ್ಲಿ ನೀಡಿರುವ ಎಲ್ಲಾ ಭರವಸೆಗಳು ಮತ್ತು ಆಶೋತ್ತರಗಳೊಂದಿಗೆ ನಾವು ನವ ಭಾರತದ ನಿರ್ಮಾಣಕ್ಕಾಗಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದರು.

ಸಂಕಲ್ಪ ಪತ್ರದಲ್ಲಿ ನೀಡಲಾಗಿರುವ 10 ಪ್ರಮುಖ ಭರವಸೆಗಳಿವು:
1. ಸಶಸ್ತ್ರ ಪಡೆಗಳನ್ನು ಬಲಪಡಿಸುವುದಕ್ಕಾಗಿ, ಅತ್ಯುತ್ತಮ ರಕ್ಷಣಾ ಸಲಕರಣೆಗಳನ್ನು ಖರೀದಿಸಲು ಕ್ರಮ
2. ಉಗ್ರವಾದದ ವಿರುದ್ಧ 'ಝೀರೋ ಟಾಲರೆನ್ಸ್' 
3. ದೇಶದ ಇತರ ಭಾಗಗಳಲ್ಲಿ ಹಂತ ಹಂತವಾಗಿ NRC (ರಾಷ್ಟ್ರೀಯ ನಾಗರಿಕರ ನೋಂದಣಿ) ಅನ್ನು ಜಾರಿಗೊಳಿಸುತ್ತದೆ
4. ಈಶಾನ್ಯ ಭಾಗದಲ್ಲಿ ಅಕ್ರಮ ಒಳನುಸುಳುವಿಕೆ ತಡೆಯಲು ಸ್ಮಾರ್ಟ್ ಫೆನ್ಸಿಂಗ್ ಬಳಕೆ 
5. ಜನಸಂಘದ ಕಾಲದಿಂದಲೂ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಜಮ್ಮು ಮತ್ತು ಕಾಶ್ಮೀರ ನಾಗರಿಕರಿಗೆ ವಿಶೇಷ ಅಧಿಕಾರ ನೀಡುವ ಕಲಂ 35 ಎ ಅನ್ನು ರದ್ದು ಪಡಿಸಲು ಬದ್ಧ.
6. ಕೃಷಿಕರ ಆದಾಯ ದ್ವಿಗುಣಗೊಳಿಸಲು ರೈತರಿಗೆ ಪ್ರೋತ್ಸಾಹ. 1ರಿಂದ 5 ವರ್ಷಗಳ ಅಲ್ಪಾವಧಿಗೆ ಶೂನ್ಯ ಬಡ್ಡಿದರದಲ್ಲಿ, ಪ್ರಾಮಾಣಿಕ ಮರುಪಾವತಿ ಮಾಡುವ ರೈತರಿಗೆ 1 ಲಕ್ಷ ರೂ ವರೆಗೆ ಹೊಸ ಸಾಲ ನೀಡುವ ಭರವಸೆ.
7. 130 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪೂರೈಸುವುದು ಸಂಕಲ್ಪ ಪತ್ರದ ಉದ್ದೇಶ.
8. ಸಾಧ್ಯವಾದಷ್ಟು ಬೇಗ ಸೌಹಾರ್ದಯುತವಾಗಿ ರಾಮಮಂದಿರ ನಿರ್ಮಾಣಕ್ಕೆ ಬದ್ಧ.
9. ಮನೆಯಿಲ್ಲದವರಿಗೆ 2022 ರ ಹೊತ್ತಿಗೆ ಮನೆ ನೀಡುವ ಭರವಸೆ.
10. ರೂ. 2024 ರೊಳಗೆ ಮೂಲಭೂತ ವಲಯದಲ್ಲಿ 100 ಲಕ್ಷ ಕೋಟಿ ರೂ. ಹೂಡಿಕೆ
 

Trending News