ಬಿಹಾರ ಚುನಾವಣೆಯಲ್ಲಿ '160 ಟನ್' ಬಯೋಮೆಡಿಕಲ್ ತ್ಯಾಜ್ಯ ಉತ್ಪತ್ತಿ..!

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 160 ಟನ್ ಬಯೋಮೆಡಿಕಲ್ ತ್ಯಾಜ್ಯ ಉತ್ಪಾದನೆ

Last Updated : Nov 16, 2020, 08:43 PM IST
  • ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 160 ಟನ್ ಬಯೋಮೆಡಿಕಲ್ ತ್ಯಾಜ್ಯ ಉತ್ಪಾದನೆ
  • 70 ಲಕ್ಷ ಫೇಸ್ ಮಾಸ್ಕ್, 5.4 ಲಕ್ಷ ಏಕ ರಬ್ಬರ್ ಹ್ಯಾಂಡ್ ಗ್ಲೌಸ್ ಬಳಕೆ
  • 29 ಲಕ್ಷ ಹ್ಯಾಂಡ್ ಸ್ಯಾನಿಟೈಸರ್ ಬಾಟಲ್ ಬಳಕ
ಬಿಹಾರ ಚುನಾವಣೆಯಲ್ಲಿ '160 ಟನ್' ಬಯೋಮೆಡಿಕಲ್ ತ್ಯಾಜ್ಯ ಉತ್ಪತ್ತಿ..!

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಮುಗಿದು ಇಂದು ನಿತೀಶ್ ಕುಮಾರ್ ಪದಗ್ರಹಣ ಕೂಡ ಮಾಡಿದ್ದಾರೆ. ಆದ್ರೆ, ಕೋವಿಡ್ -19 ಇರುವ ಕಾರಣ ಚುನಾವಣಾ ಆಯೋಗವು ಮುನ್ನೆಚ್ಚರಿಕಾ ಕ್ರಮವಾಗಿ ಕೆಲವಿಷ್ಟು ಮಾರ್ಗಸೂಚಿಗಳನ್ನ ನೀಡಿತ್ತು. ಚುನಾವಣೆ ಅಧಿಕಾರಿಗಳು, ರಕ್ಷಣಾ ಸಿಬ್ಬಂಧಿಗಳು ಮತ್ತು ಸಾರ್ವಜನಿಕರ ಬಳಕೆಗೆಂದು ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಬಾಟಲ್, ಹ್ಯಾಂಡ್ ಗ್ಲೌಸ್ ಇವೆಲ್ಲವುಗಳನ್ನ ನೀಡಲಾಗಿತ್ತು. ಸಧ್ಯ ಇವುಗಳಿಂದ ಒಟ್ಟು 160 ಟನ್ ಬಯೋಮೆಡಿಕಲ್ ತ್ಯಾಜ್ಯ ಉತ್ಪಾದನೆಯಾಗಿದೆ.

ಈ ಸಾಂಕ್ರಾಮಿಕ ರೋಗದ ಮಧ್ಯೆ ನಡೆದ ಮೊದಲ ಚುನಾವಣೆ(Election) ಇದಾಗಿತ್ತು. ಹಾಗಾಗಿ ಮತದಾರರ, ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನು ಸುರಕ್ಷತೆಗಾಗಿ ಚುನಾವಣಾ ಆಯೋಗವು 18 ಲಕ್ಷ ಫೇಸ್ ಶಿಲ್ಡ್ಸ್ , 70 ಲಕ್ಷ ಫೇಸ್ ಮಾಸ್ಕ್, 5.4 ಲಕ್ಷ ಏಕ ರಬ್ಬರ್ ಹ್ಯಾಂಡ್ ಗ್ಲೌಸ್ ಮತದಾನ ಮತ್ತು ಭದ್ರತಾ ಸಿಬ್ಬಂದಿಗೆ ಮತ್ತು 7.21 ಕೋಟಿ ಸಿಂಗಲ್ ಬಟನ್ ಇವಿಎಂ ಮಷೀನ್ ಬಟನ್ ಒತ್ತಲು ಮತದಾರರಿಗೆ ಪಾಲಿಥೀನ್ ನಿಂದ ತಯಾರಿಸಿದ ಹ್ಯಾಂಡ್ ಗ್ಲೌಸ್ ಗಳು, 100 ಮಿಲಿ ಮತ್ತು 500 ಮಿಲಿ ಒಟ್ಟು 29 ಲಕ್ಷ ಹ್ಯಾಂಡ್ ಸ್ಯಾನಿಟೈಸರ್ ಬಾಟಲಿಗಳನ್ನ ಮೂರು ಹಂತದ ಮತದಾನದಲ್ಲಿ ಬಳಕೆ ಮಾಡಲಾಗಿದೆ.

7ನೇ ಬಾರಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ! ಡಿಸಿಎಂ ಸ್ಥಾನಯಾರಿಗೆ ಗೊತ್ತಾ?

ಈ ಎಲ್ಲ ಬಳಕೆಯಿಂದ ಸರಿಸುಮಾರು 160 ಟನ್ ಬಯೋಮೆಡಿಕಲ್ ತ್ಯಾಜ್ಯ ಉತ್ಪತ್ತಿಯಾಗಿದೆ ಎಂದು ರಾಜ್ಯ ಚುನಾವಣಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಅದರ ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ ಸಂಸ್ಥೆ ಇದೆ, ಅವರು ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಿಂದ ತ್ಯಾಜ್ಯವನ್ನು ರವಾನೆ ಮಾಡುವುದೇ ಸವಾಲಾಗಿ ಪರಿಣಮಿಸಿತ್ತು, ಈಗ ಆ ತ್ಯಾಜ್ಯವನೆಲ್ಲ  ವಿಲೇವಾರಿ ಮಾಡಲು ಕಾರ್ಮಿಕರನ್ನ ನೇಮಿಸಲಾಗಿದೆ. 

ಕೆಲಸ ಬಿಟ್ಟ ತಕ್ಷಣ ನಿಮ್ಮ PF ವಿತ್‌ ಡ್ರಾʼ ಮಾಡ್ಲೇಬೇಡಿ: ಯಾಕೆ ಗೊತ್ತಾ?

More Stories

Trending News