Teenage Girl's Secret Marriage Ends in Tragedy: ಸೋದರ ಸಂಬಂಧಿ ಜೊತೆ ರಹಸ್ಯವಾಗಿ ಮದುವೆಯಾಗಿದ್ದ 18 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರೀತಿ ಕುಶ್ವಾಹ್ ಸಾವಿಗೆ ಶರಣಾದ ಯುವತಿ. ಅಣ್ಣ, ಅಕ್ಕ ಮತ್ತು ಪೋಷಕರು ಹೊರಗಡೆ ಹೋಗಿದ್ದ ವೇಳೆ ಪ್ರೀತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಹೊರಗೆ ಹೋಗಿದ್ದ ತಾಯಿ ಸಂಜೆ ವೇಳೆ ಪ್ರೀತಿಗೆ ಹಲವಾರು ಬಾರಿ ಕರೆ ಮಾಡಿದ್ದಾರೆ. ಆದರೆ ಮಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ಮನೆಗೆ ಬಂದು ನೋಡಿದಾಗ ಪ್ರೀತಿ ಸೂಸೈಡ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಗಳ ಸಾವಿನ ನಂತರ ಆಕೆಯ ರಹಸ್ಯ ಮದುವೆಯ ಬಗ್ಗೆ ಪೋಷಕರಿಗೆ ತಿಳಿದಿದ್ದು, ಇದಕ್ಕೆಲ್ಲಾ ದೂರದ ಸಂಬಂಧಿಯೇ ಕಾರಣವೆಂದು ಆರೋಪ ಮಾಡಿದ್ದಾರೆ.
ನೇಣಿಗೆ ಶರಣಾದ ಪ್ರೀತಿ ದೆಹಲಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಎರಡು ವರ್ಷದ ಹಿಂದೆ ಕುಟುಂಬದವರೊಂದಿಗೆ ಪ್ರೀತಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗಿದ್ದರು. ಅಲ್ಲಿ ಪ್ರೀತಿಗೆ ದೂರದ ಸಂಬಂಧಿ ಯುವಕನ ಪರಿಚಯವಾಗಿತ್ತು. ಕ್ರಮೇಣ ಇಬ್ಬರ ನಡುವಿನ ಈ ಒಡನಾಟ ಪ್ರೀತಿಯಾಗಿ ಮಾರ್ಪಟ್ಟಿದೆ. ಬಳಿಕ ಇಬ್ಬರೂ ಪರಸ್ಪರ ಒಪ್ಪಿಕೊಂಡು ರಹಸ್ಯವಾಗಿ ಮದುವೆ ಆಗಿದ್ದರಂತೆ. ಆದರೆ ಪ್ರೀತಿ ಸಾವಿನ ಬಳಿಕವೇ ಆಕೆಯ ರಹಸ್ಯ ಮದುವೆಯ ಬಗ್ಗೆ ಪೋಷಕರಿಗೆ ತಿಳಿದಿದೆ. ಪ್ರೀತಿಯ ಸ್ನೇಹಿತೆಯೊಬ್ಬಳು ಯುವಕನ ಜೊತೆಗೆ ಆಕೆ ಚಾಟ್ ಮಾಡಿರು ಸ್ಕ್ರೀನ್‌ಶಾಟ್‌ಗಳನ್ನ ಪೋಷಕರಿಗೆ ತೋರಿಸಿದ್ದಾಳೆ. ಇದರ ನಂತರವೇ ಮಗಳ ರಹಸ್ಯ ಮದುವೆ ವಿಚಾರ ಬೆಳಕಿಗೆ ಬಂದಿದೆ. ಈ ಚಾಟ್‌ನಲ್ಲಿ ಪ್ರೀತಿ ಆ ಯುವಕನಿಗೆ ಹಸ್ಬೆಂಡ್‌ಜೀ ಎಂದು ಕರೆಯುತ್ತಿದ್ದಳಂತೆ. ಏಪ್ರಿಲ್ 2023ರ ಚಾಟ್‌ನಲ್ಲಿ ಆಕೆ ಆತನನ್ನು ರಿಂಕು ಜೀ ಎಂದು ಕರೆದಿದ್ದಳು. ಪ್ರೀತಿಯ ಗೆಳತಿ ಹಂಚಿಕೊಂಡ ಫೋಟೋದಲ್ಲಿ ಪ್ರೀತಿಯ ಹಣೆಗೆ ಆತ ಸಿಂಧೂರ ಇಡುವ ಫೋಟೋ ಕೂಡ ಸಿಕ್ಕಿದೆ.
ಇದನ್ನೂ ಓದಿ: ಮುಂಬೈನಿಂದ ವಾರಣಾಸಿಗೆ ಹೋಗುತ್ತಿದ್ದ ವಿಮಾನದಲ್ಲೇ ಮಹಿಳೆ ಸಾವು, ಇಂಡಿಗೋ ಫ್ಲೈಟ್ ತುರ್ತುಭೂಸ್ಪರ್ಶ..!
ಪ್ರಿಯಕರನಿಗಾಗಿ ಪ್ರೀತಿ ತನ್ನ ಉದ್ದನೇಯ ಕೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಂಡಿದ್ದಳಂತೆ. ಕೂದಲು ಕತ್ತರಿಸುವ ಬಯಕೆ ವ್ಯಕ್ತಪಡಿಸಿದ್ದ ಪ್ರೀತಿಯ ನಿರ್ಧಾರಕ್ಕೆ ಆಕೆಯ ಅಕ್ಕ ಇಷ್ಟಪಟ್ಟಿರಲಿಲ್ಲವಂತೆ. ಇದಕ್ಕಾಗಿ ಜಗಳವೂ ಆಗಿತ್ತು. ತನ್ನ ಕೂದಲು ತೆಗೆಯುವ ಬಗ್ಗೆ ಹಠ ಹಿಡಿದ ಪ್ರೀತಿ ಸಲೂನ್‌ಗೆ ಹೋಗುವುದಾಗಿ ಬೆದರಿಕೆ ಹಾಕಿದ್ದಳು. ಮುಜುಗರಕ್ಕೆ ಹೆದರಿದ್ದ ಪ್ರೀತಿ ಸಹೋದರ ಮನೆಯಲ್ಲಿಯೇ ಆಕೆಯ ತಲೆ ಬೋಳಿಸಿದ್ದ. ಪ್ರೀತಿಯ ಪ್ರಿಯಕರ ʼನೀನು ತುಂಬಾ ಸುಂದರಿ.. ಬೇರೆ ಯಾರಾದರೂ ನಿನ್ನ ಇಷ್ಟಪಟ್ಟರೇ ನಾನು ಏನು ಮಾಡಲಿ? ಎಂದು ಪ್ರಶ್ನಿಸಿದ್ದನಂತೆ. ಇದೇ ಕಾರಣಕ್ಕೆ ಪ್ರೀತಿ ತನ್ನ ಕೂದಲನ್ನು ಕತ್ತರಿಸಿಕೊಂಡಿದ್ದಳು ಅನ್ನೋ ವಿಚಾರ ಸಾವಿನ ನಂತರ ಬಯಲಾಗಿದೆ.
ಪ್ರೀತಿ ಮತ್ತು ಪ್ರಿಯಕರನ ನಡುವೆ ಯಾವುದೇ ವಿಚಾರಕ್ಕೆ ಜಗಳವಾಗಿದೆ. ಹೀಗಾಗಿ ಇಬ್ಬರ ನಡುವೆ ಬ್ರೇಕಪ್ ಆಗಿತ್ತು. ಪ್ರೀತಿಯ ಜೊತೆ ಮಜಾ ಮಾಡಿದ್ದ ಪ್ರಿಯಕರ ಬಳಿಕ ಆಕೆಯಿಂದ ಸಂಪರ್ಕ ಕಡಿದುಕೊಂಡಿದ್ದನಂತೆ. ಆಕೆಯ ನಂಬರ್ ಬ್ಲಾಕ್ ಮಾಡಿ ದೂರವಾಗಿದ್ದ. ಇದರಿಂದ ಪ್ರೀತಿ ಡಿಪ್ರೆಶನ್‌ಗೆ ಜಾರಿದ್ದಳಂತೆ. ಪ್ರೀತಿಯ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಆಕೆ ಖಿನ್ನತೆಯಿಂದ ಮಾನಸಿಕವಾಗಿ ಕುಗ್ಗಿರುವುವುದು ತಿಳಿದುಬಂದಿದೆ. ಪ್ರಿಯಕರನ ಮೋಸದಿಂದ ನೊಂದುಕೊಂಡಿದ್ದ ಪ್ರೀತಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾಳೆಂದು ತಿಳಿದುಬಂದಿದೆ. ಇದೀಗ ಆಕೆಯ ಪೋಷಕರು ತಮ್ಮ ಮಗಳಿಗೆ ನ್ಯಾಯ ಒದಗಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆಂದು ತಿಳಿದುಂಬಿದೆ.
ಇದನ್ನೂ ಓದಿ: 50 ರೂ. ಎಲ್‌ಪಿಜಿ ದರ ಹೆಚ್ಚಿಸಿದ ಕೇಂದ್ರ ಸರ್ಕಾರ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









