ಗುಜರಾತ್ ತೊರೆದ ಯುಪಿ, ಎಂಪಿ ಮತ್ತು ಬಿಹಾರದ 20 ಸಾವಿರಕ್ಕೂ ಹೆಚ್ಚು ಜನ, ವಾಪಸ್ ಬನ್ನಿ ಎಂದು ಸಿಎಂ ಮನವಿ

ದಾಳಿಗೆ ಸಂಬಂಧಿಸಿದಂತೆ 431 ಜನರನ್ನು ಬಂಧಿಸಲಾಗಿದೆ ಮತ್ತು 56 ಎಫ್ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ಹೇಳಿರುವ ರಾಜ್ಯ ಸರ್ಕಾರ ವಲಸಿಗರ ಭದ್ರತೆಗಾಗಿ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸುರಕ್ಷತೆ ಬಗ್ಗೆ ಭರವಸೆ ನೀಡಿತು.  

Last Updated : Oct 9, 2018, 11:36 AM IST
ಗುಜರಾತ್ ತೊರೆದ ಯುಪಿ, ಎಂಪಿ ಮತ್ತು ಬಿಹಾರದ 20 ಸಾವಿರಕ್ಕೂ ಹೆಚ್ಚು ಜನ, ವಾಪಸ್ ಬನ್ನಿ ಎಂದು ಸಿಎಂ ಮನವಿ title=

ಅಹಮದಾಬಾದ್ / ಲಕ್ನೋ / ಪಾಟ್ನಾ: ಗುಜರಾತ್ನಲ್ಲಿ ಹಿಂದಿ ಮಾತನಾಡುವ ವಲಸಿಗರ ಮೇಲೆ ದಾಳಿ ನಂತರ, ಹಲವರು ಗುಜರಾತ್ ಅನ್ನು ತೊರೆದಿದ್ದಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರದ ಸುಮಾರು 20,000 ಜನರು ಪ್ರಸ್ತುತ ಪರಿಸ್ಥಿತಿಯ ದೃಷ್ಟಿಯಿಂದ ಗುಜರಾತಿನಿಂದ ಹೊರ ನಡೆದಿದ್ದಾರೆ ಎಂದು ಉತ್ತರ ಭಾರತೀಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶ್ರೀ ಮಹೇಶ್ ಸಿಂಗ್ ಕುಶ್ವಾಹ ಹೇಳಿದರು. ಅದೇ ಸಮಯದಲ್ಲಿ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಕಳೆದ 48 ಗಂಟೆಗಳಿಂದ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಅಹಿತಕರ ಘಟನೆಗಳು ನಡೆದಿಲ್ಲ, ಜನತೆ ಶಾಂತಿಯಿಂದ ವರ್ತಿಸಬೇಕು ಎಂದು ಕರೆ ನೀಡಿದ್ದಾರೆ. ದಾಳಿಗೆ ಸಂಬಂಧಿಸಿದಂತೆ 431 ಜನರನ್ನು ಬಂಧಿಸಲಾಗಿದೆ ಮತ್ತು 56 ಎಫ್ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ಹೇಳಿರುವ ರಾಜ್ಯ ಸರ್ಕಾರ ವಲಸಿಗರ ಭದ್ರತೆಗಾಗಿ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸುರಕ್ಷತೆ ಬಗ್ಗೆ ಭರವಸೆ ನೀಡಿತು.

ವಾಪಸ್ ಬನ್ನಿ... ದಾಳಿ ಭಯದಿಂದ ಗುಜರಾತ್ ತೊರೆದವರಿಗೆ ಸಿಎಂ ಮನವಿ:
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಕಳೆದ 48 ಗಂಟೆಗಳಿಂದ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಅಹಿತಕರ ಘಟನೆಗಳು ನಡೆದಿಲ್ಲ, ಜನತೆ ಶಾಂತಿಯಿಂದ ವರ್ತಿಸಬೇಕು ಎಂದು ಕರೆ ನೀಡಿದ್ದಾರೆ. ಅಲ್ಲದೆ "ನಾವು ಕಾನೂನನ್ನು ಕಾಯ್ದುಕೊಳ್ಳಲು ಬದ್ಧರಾಗಿದ್ದೇವೆ ಮತ್ತು ತೊಂದರೆಗಳ ಸಂದರ್ಭದಲ್ಲಿ ಜನರು ಪೊಲೀಸರನ್ನು ಕರೆಯಬಹುದು. ನಾವು ಅವರಿಗೆ ರಕ್ಷಣೆ ನೀಡುತ್ತೇವೆ" ಎಂದಿದ್ದಾರೆ. 

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ:
ಗುಜರಾತ್ ನಲ್ಲಿ ನಡೆದಿರುವ ಈ ದಾಳಿಯ ಬಗ್ಗೆ ಮಾತನಾಡಿದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ದಾಳಿಗಳ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದರು. ಗುಜರಾತ್ ಶಾಂತಿಯುತ ರಾಜ್ಯ ಎಂದು ದೇಶದ ಮುಖ್ಯಮಂತ್ರಿ ಯೋಗಿ ಹೇಳಿದ್ದಾರೆ. ಅಭಿವೃದ್ಧಿಯ ಅಗತ್ಯವಿಲ್ಲದವರು, ವದಂತಿಗಳನ್ನು ಹರಡುವ ಮೂಲಕ ಸಮಾಜವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ. ಗುಜರಾತ್ನಲ್ಲಿ ಕೆಲವು ಉತ್ತರ ಭಾರತೀಯರು ಕರೆ ಮಾಡಿದ್ದರು ಎಂದು ಯೋಗಿ ಹೇಳಿದರು "ವದಂತಿಗಳಿಗೆ ಗಮನ ಕೊಡದಂತೆ ನಾನು ಅವರಿಗೆ ಹೇಳಿದ್ದೇನೆ" ಎಂದು ಅವರು ಹೇಳಿದರು.

ಕಾಂಗ್ರೆಸ್ ಮೇಲೆ ಆರೋಪ:
ಸಬರ್‌ಕಂಠ ಪ್ರದೇಶದಲ್ಲಿ ಸೆ.28 ರಂದು 14 ತಿಂಗಳ ಮಗುವಿನ ಮೇಲೆ ಅತ್ಯಾಚಾರದ ಬಳಿಕ ಆರು ಜಿಲ್ಲೆಗಳಲ್ಲಿ ಹಿಂದಿ ಮಾತನಾಡುವ ಜನರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಪ್ರಕರಣದಲ್ಲಿ ಬಿಹಾರದ ನೌಕರನೊಬ್ಬನನ್ನು ಬಂಧಿಸಲಾಗಿದೆ. 
ಘಟನೆಯೊಂದಿಗೆ ಬಿಹಾರದ ಕಾರ್ಮಿಕ ರವೀಂದ್ರ ಸಾಹು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಷಯವು ರಾಜಕೀಯ ಬಣ್ಣವನ್ನು ತೆಗೆದುಕೊಂಡು ಗುಜರಾತ್ನಲ್ಲಿ ಬಿಹಾರದ ಜನರ ವಿರುದ್ಧ ಹಿಂಸಾಚಾರದ ಅಪರಾಧವೆಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ ನಾಯಕ ಪತ್ರ ಬರೆದರು.

ನೀವು ನಿಮ್ಮ ಗುಜರಾತ್ ನ ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್ ಅವರನ್ನು ಬಿಹಾರ ಕಾಂಗ್ರೆಸಿನ ಸಹಾಯಕರಾಗಿ ನೇಮಕ ಮಾಡಿದ್ದೀರಿ. ಅವರು ಸೈನ್ಯ (ಗುಜರಾತ್ ಕ್ಷತ್ರಿಯ ಠಾಕೋರ್ ಸೈನ್ಯ) ಗುಜರಾತ್ನಿಂದ ಬಿಹಾರದ ಜನರನ್ನು ಹೊರದೂಡುವ ನಿಟ್ಟಿನಲ್ಲಿ ನಿರತರಾಗಿದ್ದಾರೆ ಎಂದು ಜೆಡಿಯು ವಕ್ತಾರ ಮತ್ತು ವಿಧಾನ ಪರಿಷತ್ ನೀರಜ್ ಕುಮಾರ್ ಆರೋಪಿಸಿದ್ದಾರೆ. ವಿಪಕ್ಷ ಕಾಂಗ್ರೆಸ್ ಹೆಸರನ್ನು ಹೇಳದೆಯೇ ಈ(ದಾಳಿ) 22 ವರ್ಷಗಳ ಕಾಲ ಗುಜರಾತ್ ಆಳ್ವಿಕೆಯಿಂದ ದೂರಯಿರುವವರ ಪಿತೂರಿ ಎಂದು ರಾಜ್ಯ ಗೃಹ ಸಚಿವ ದೀಪ್ ಸಿನ್ಹ್ ಜಡೇಜಾ ಹೇಳಿದ್ದಾರೆ. 

ಆರೋಪ 'ಸಂಪೂರ್ಣ ಸುಳ್ಳು' ಎಂದ ರಾಹುಲ್ ಗಾಂಧಿ:
ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರು ಠಾಕೂರ್ಗೆ ಕ್ಲೀನ್ ಚಿಟ್ ನೀಡಿದರಲ್ಲದೆ, ಬಿಜೆಪಿ ಸರಕಾರ ಈ ವಿಷಯವನ್ನು ರಾಜಕೀಯವಾಗಿ ಬಳಸುತ್ತಿದೆ ಎಂದು ಆರೋಪಿಸಿದರು. ಗುಜರಾತ್ನಲ್ಲಿ ಉತ್ತರ ಭಾರತೀಯರ ಮೇಲಿನ ದಾಳಿಯ ಬಗೆಗಿನ ಆರೋಪ ಸಂಪೂರ್ಣವಾಗಿ ಸುಳ್ಳು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿಯವರು "ಬಡತನಕ್ಕಿಂತ ದೊಡ್ಡ ಪ್ಯಾನಿಕ್ ಇಲ್ಲ. ಗುಜರಾತಿನಲ್ಲಿ ಹಿಂಸಾಚಾರದ ಮೂಲವು ಮುಚ್ಚಿದ ಕಾರ್ಖಾನೆ ಮತ್ತು ನಿರುದ್ಯೋಗದಿಂದ ಉಂಟಾಗಿದೆ ಎಂಬುದು ಸತ್ಯ. ವ್ಯವಸ್ಥೆ ಮತ್ತು ಆರ್ಥಿಕತೆಯು ಕ್ಷೀಣಿಸುತ್ತಿವೆ" ಎಂದು ಅವರು ಹೇಳಿದ್ದಾರೆ.

"ವಲಸಿಗ ಕಾರ್ಮಿಕರನ್ನು ಗುರಿಯಾಗಿಸುವುದು ತಪ್ಪು, ಅದರ ವಿರುದ್ಧವಾಗಿ ನಾನು ನಿಲ್ಲುತ್ತೇನೆ." ಇತರ ಪ್ರಾಂತ್ಯಗಳಿಂದ ಉದ್ಯೋಗ ಅರಸಿ ಬಂದವರಿಗೆ ಭದ್ರತೆಯನ್ನು ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ರಾಹುಲ್ ಹೇಳಿದರು. 

ಘಟನೆಯನ್ನು ಖಂಡಿಸಿದ ನಿತೀಶ್:
ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಟ್ಟುಕೊಂಡು ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಬೇಕೆಂದು ನೆನಪಿಸಿಕೊಳ್ಳಬೇಕು ಎಂದು ಹೇಳಿದರು. ಮೋದಿ ಅವರು ಲೋಕಸಭೆಯಲ್ಲಿ ವಾರಣಾಸಿಯನ್ನು ಪ್ರತಿನಿಧಿಸುತ್ತಾರೆ. ನಿತೀಶ್ ಕುಮಾರ್ ಹುಡುಗಿಯ ಅಪಹರಣವನ್ನು ಖಂಡಿಸಿದರು ಮತ್ತು ಅಪರಾಧಿ ವ್ಯಕ್ತಿಗೆ ಖಂಡಿತವಾಗಿಯೂ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು.

ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಯೊಂದಿಗೆ ನಾವು ಮಾತುಕತೆ ನಡೆಸಿದ್ದೇವೆ ಎಂದು ನಿತೀಶ್ ಹೇಳಿದರು. ನಮ್ಮ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಅವರ ಸಂಪರ್ಕದಲ್ಲಿರುತ್ತಾರೆ. "ತಮ್ಮ  ಸರ್ಕಾರ ಎಲ್ಲರಿಗೂ ಭದ್ರತೆಯನ್ನು ಖಾತ್ರಿಪಡಿಸಿದೆ ಎಂದು ರೂಪಾನಿ ಹೇಳಿದ್ದಾರೆ ಹೇಳಿದ್ದಾರೆ. ಅದನ್ನು ನಾವು ಎಲ್ಲರೂ ಸ್ವಾಗತಿಸುತ್ತೇವೆ ಎಂದು ಅವರು ಹೇಳಿದರು. ಗುಜರಾತ್ ಒಂದು ಶಾಂತಿಯುತ ರಾಜ್ಯ ಎಂದ ನಿತೀಶ್ ಕುಮಾರ್, ಕೆಲವು ಜನರು ಅಲ್ಲಿನ ಅಭಿವೃದ್ಧಿ ಮಾದರಿಯನ್ನು ಇಷ್ಟಪಡದೆ ವದಂತಿಗಳನ್ನು ಹರಡುತ್ತಿದ್ದಾರೆ ಎಂದರು.

Trending News