ಪೊಲೀಸರ ಹೊಡೆತಕ್ಕೆ ಸಾವನ್ನಪ್ಪಿದ ಪದವಿ ವಿದ್ಯಾರ್ಥಿ: ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ

ಉದಿತ್ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ತಡರಾತ್ರಿ ಹಿಂತಿರುಗುತ್ತಿದ್ದ. ಈ ವೇಳೆ ಆತನನ್ನ ತಡೆದ ಪೊಲೀಸರು ಹಣ ಕೇಳಿದ್ದಾರೆ. ಹಣ ಕೊಡದ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಉದಿತ್‌ಗೆ ಮನಬಂದಂತೆ ಥಳಿಸಲಾಗಿದೆ.

Written by - Puttaraj K Alur | Last Updated : Oct 12, 2025, 03:33 PM IST
  • ಪೊಲೀಸರ ಹೊಡೆತಕ್ಕೆ ಸಾವನ್ನಪ್ಪಿದ ಪದವಿ ವಿದ್ಯಾರ್ಥಿ
  • ಹಣ ನೀಡದ್ದಕ್ಕೆ ಬಿಟೆಕ್ ವಿದ್ಯಾರ್ಥಿಗೆ ಥಳಿಸಿದ ಪೊಲೀಸರು
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್
ಪೊಲೀಸರ ಹೊಡೆತಕ್ಕೆ ಸಾವನ್ನಪ್ಪಿದ ಪದವಿ ವಿದ್ಯಾರ್ಥಿ: ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ

Bhopal Viral Video: ಪೊಲೀಸರು ಸುತ್ತುವರೆದು ಲಾಠಿಯಿಂದ ಹೊಡೆದ ಪರಿಣಾಮ 22 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಿಟೆಕ್ ವಿದ್ಯಾರ್ಥಿ ಉದಿತ್ ಗಾಯ್ಕೆ ಮೃತಪಟ್ಟಿದ್ದು, ಆತನಿಗೆ ಪೊಲೀಸರು ಹೊಡೆಯುತ್ತಿರುವ ಸಿಸಿಟಿವಿ ದೃಶ್ಯವು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

Add Zee News as a Preferred Source

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಸೇರಿ ಲಾಠಿಯಿಂದ ಮನಬಂದಂತೆ ಹೊಡೆದಿದ್ದಾರೆ. ಒಬ್ಬ ಪೊಲೀಸ್ ಉದಿತ್‌ನನ್ನ ಬಿಗಿಯಾಗಿ ಹಿಡಿದಿದ್ದರೆ, ಇನ್ನೊಬ್ಬ ಪೊಲೀಸ್ ಲಾಠಿಯಿಂದ ಹೊಡೆದಿದ್ದಾನೆ. ಪರಿಣಾಮ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆಂದು ವರದಿಯಾಗಿದೆ. 

ಇದನ್ನೂ ಓದಿ: ರೈತರಿಗೆ ದೀಪಾವಳಿ ಉಡುಗೊರೆ ಘೋಷಿಸಿದ ಕೇಂದ್ರ ಸರ್ಕಾರ..!, 42,000 ಕೋಟಿ ರೂ.ಗಳ ಹೊಸ ಯೋಜನೆ ಘೋಷಣೆ !

ಉದಿತ್ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ತಡರಾತ್ರಿ ಹಿಂತಿರುಗುತ್ತಿದ್ದ. ಈ ವೇಳೆ ಆತನನ್ನ ತಡೆದ ಪೊಲೀಸರು ಹಣ ಕೇಳಿದ್ದಾರೆ. ಹಣ ಕೊಡದ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಉದಿತ್‌ಗೆ ಮನಬಂದಂತೆ ಥಳಿಸಲಾಗಿದೆ. ಆತನ ಮೈಮೇಲೆ ತೀವ್ರ ಗಾಯದ ಗುರುತುಗಳಿದ್ದು, ಹರಿದ ಶರ್ಟ್‌ ಕೂಡ ಪತ್ತೆಯಾಗಿದೆ ಎಂದು ಸ್ನೇಹಿತರು ದೂರಿದ್ದಾರೆ. 

ಈ ಘಟನೆ ಸಂಬಂಧ ಕಾನ್‌ಸ್ಟೆಬಲ್‌ಗಳಾದ ಸಂತೋಷ್ ಬಮಾನಿಯಾ ಮತ್ತು ಸೌರಭ್ ಆರ್ಯರನ್ನ ಅಮಾನತುಗೊಳಿಸಲಾಗಿದೆ ಎಂದು ಭೋಪಾಲ್‌ ವಲಯ 2ರ ಉಪ ಪೊಲೀಸ್‌ ಆಯುಕ್ತ (DCP) ವಿವೇಕ್ ಸಿಂಗ್ ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿಯಿಂದ ಹಲ್ಲೆಗೊಳಗಾದ ಉದಿತ್‌ನನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದಾನೆಂದು ವೈದ್ಯರು ತಿಳಿಸಿದರು. ಸ್ನೇಹಿತರ ಪ್ರಕಾರ, ಲಂಚ ನೀಡದ ಕಾರಣ ಕಾನ್‌ಸ್ಟೆಬಲ್‌ಗಳು ಉದಿತ್‌ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅವರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. 

ಇದನ್ನೂ ಓದಿಕಣ್ಣೆದುರೇ ಹೃದಯಾಘಾತದಿಂದ ಕೆಲಸಗಾರ ಸಾವು: ಮೊಬೈಲ್ ನೋಡುತ್ತಾ ಕುಳಿತ ಮಾಲೀಕ!

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಮೃತನ ಪೋಷಕರು ಭೋಪಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸೋದರ ಮಾವ ಬಾಲಘಾಟ್ ಜಿಲ್ಲೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾರೆ. ಮರಣೋತ್ತರ ವರದಿ ಬಂದ ನಂತರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಪರಾರಿಯಾಗಿರುವ ಆರೋಪಿ ಕಾನ್‌ಸ್ಟೆಬಲ್‌ಗಳನ್ನ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಡಿಸಿಪಿ ಸಿಂಗ್ ತಿಳಿಸಿದ್ದಾರೆ.

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News