ಹುಡುಗಿ ತೋರಿಸಿ ಆಕೆ ಅಮ್ಮನ ಜೊತೆಗೆ ಮದುವೆ; ಮುಸುಕು ತೆಗೆದ ಮದುಮಗನಿಗೆ ಶಾಕ್!!‌

ತನಗಾದ ವಂಚನೆಯ ವಿರುದ್ಧ ಅಜೀಂ ಆಕ್ರೋಶ ವ್ಯಕ್ತಪಡಿಸಿದಾಗ, ಆತನ ಮೇಲೆ ಸುಳ್ಳು ಅತ್ಯಾಚಾರದ ಆರೋಪ ಹೋರಿಸುವುದಾಗಿ ನದೀಂ ಮತ್ತು ಶೈದಾ ಬೆದರಿಸಿದ್ದಾರೆ.

Written by - Puttaraj K Alur | Last Updated : Apr 22, 2025, 02:36 PM IST
  • ಅಣ್ಣ ಹಾಗೂ ಅತ್ತಿಗೆ ಮಾತು ನಂಬಿ ಮನ್ತಾಶಾ ಎಂಬಾಕೆ ಜೊತೆಗೆ ಮದುವೆಗೆ ಒಪ್ಪಿದ್ದ ವರ ಅಜೀಂ
  • ಮದುವೆ ವೇಳೆ ಮೌಲ್ವಿ ಮಧು ಹೆಸರನ್ನ ತಾಹಿರಾ ಎಂದಾಗ ವರನಿಗೆ ಆಘಾತ ಉಂಟಾಗಿದೆ
  • ಮುಖಕ್ಕೆ ಹಾಕಿದ್ದ ಸೆಹ್ರಾ ತೆಗೆದಾಗ ವಧು ಬದಲು ಆಕೆಯ ವಿಧೆ ತಾಯಿ ಪತ್ತೆ, ವರ ಕಂಗಾಲು
ಹುಡುಗಿ ತೋರಿಸಿ ಆಕೆ ಅಮ್ಮನ ಜೊತೆಗೆ ಮದುವೆ; ಮುಸುಕು ತೆಗೆದ ಮದುಮಗನಿಗೆ ಶಾಕ್!!‌

ʼನೂರು ಸುಳ್ಳು ಹೇಳಿ ಒಂದು ಮದುವೆ ಮಾಡುʼ ಅನ್ನೋ ಗಾದೆ ಮಾತಿನಂತೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಘಟನೆಯೊಂದು ನಡೆದಿದೆ. ಹುಡುಗಿಯನ್ನ ತೋರಿಸಿ ಆಕೆ ಅಮ್ಮನ ಜೊತೆಗೆ ಮದುವೆ ಮಾಡಿದ್ದು, ಮುಸುಕು ತೆಗೆದ ಮದುಮಗನಿಗೆ ಶಾಕ್ ಉಂಟಾಗಿದೆ.

ಹೌದು, ಹುಡುಗಿಯನ್ನ ತೋರಿಸಿ ಆಕೆಯ ಅಮ್ಮನ ಜೊತೆಗೆ ಯುವಕನಿಗೆ ಮದುವೆ ಮಾಡಿಸಲಾಗಿದೆ. ಬ್ರಹ್ಮಪುರಿ ನಿವಾಸಿ 22 ವರ್ಷದ ಮೊಹಮ್ಮದ್‌ ಅಜೀಂ ಎಂಬ ಯುವಕನ ಮದುವೆಯನ್ನು ಆತನ ಸಹೋದರ ನದೀಂ ಮತ್ತು ಅತ್ತಿಗೆ ಶೈದಾ ಸೇರಿ ಶಾಮ್ಲಿ ಜಿಲ್ಲೆಯ ಮನ್ತಾಶಾ ಎಂಬ ಯುವತಿಯೊಂದಿಗೆ ನಿಗದಿಪಡಿಸಿದ್ದರು. ಅದರಂತೆ ಮಾರ್ಚ್‌ 31ರಂದು ಮದುವೆಯೂ ನಡೆದಿತ್ತು. 

ಇದನ್ನೂ ಓದಿ: Gold River: ಭಾರತದ ಈ ನದಿಯಲ್ಲಿ ನೀರಿನ ಜೊತೆಯೇ ಹರಿದು ಬರುತ್ತೆ ಚಿನ್ನ! ಫ್ರೀ ಆಗಿ ಯಾವುದೇ ಅಡ್ಡಿಯಿಲ್ಲದೆ ಕೆಜಿಗಟ್ಟಲೆ ಬಂಗಾರ ನೀವೂ ಮನೆಗೆ ತರಬಹುದು

ಈ ವೇಳೆ ಸಂಪ್ರದಾಯದಂತೆ ಮೌಲ್ವಿ ಅವರು ಹುಡುಗಿಯ ಹೆಸರನ್ನು ತಾಹಿರಾ ಎಂದು ಹೇಳಿದಾಗ ವರ ಅಜೀಂ ಅವಾಕ್ಕಾಗಿದ್ದಾನೆ. ಬಳಿಕ ಆಕೆಯ ಮುಸುಕು ತೆಗೆದು ನೋಡಿದಾಗ 21 ವರ್ಷದ ಯುವತಿಯ ಬದಲು ವಧುವಿನ ಉಡುಗೆಯಲ್ಲಿದ್ದ 45 ವರ್ಷದ ವಿಧವಾ ತಾಯಿಯ ದರ್ಶನವಾಗಿದೆ. 

ಹೀಗೆ ತಾನು ಮದುವೆಯಾಗಿದ್ದು ವಧುವಿನ ತಾಯಿಯನ್ನು ಎಂದು ತಿಳಿದು ಮದುಮಗ ನಗುವುದೋ ಅಳುವುದೋ ಅಂತಾ ಕಕ್ಕಾಬಿಕ್ಕಿಯಾಗಿದ್ದಾನೆ. ತನಗಾದ ವಂಚನೆಯ ವಿರುದ್ಧ ಅಜೀಂ ಆಕ್ರೋಶ ವ್ಯಕ್ತಪಡಿಸಿದಾಗ, ಆತನ ಮೇಲೆ ಸುಳ್ಳು ಅತ್ಯಾಚಾರದ ಆರೋಪ ಹೋರಿಸುವುದಾಗಿ ನದೀಂ ಮತ್ತು ಶೈದಾ ಬೆದರಿಸಿದ್ದಾರೆ. ಆದರೂ ಅಜೀಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಧುವಿನ ಕುಟುಂಬಕ್ಕೆ ೫ ಲಕ್ಷ ರೂ. ಹಣವನ್ನೂ ಕೊಡಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. 

ಇದನ್ನೂ ಓದಿ: 'ಗೋಲ್ಡನ್ ಎಟಿಎಂ'.. ಚಿನ್ನ ಹಾಕಿದರೆ ನಿಮ್ಮ ಖಾತೆಗೆ ಹಣ! ಶೀಘ್ರದಲ್ಲೇ ಭಾರತದಲ್ಲೂ..

ಮದುವೆ ಪ್ರಕರಣದ ಕುರಿತು ಮಾತನಾಡಿದ ಬ್ರಹ್ಮಪುರಿಯ ಸಿಇಒ ಸೌಮ್ಯಾ ಆಸ್ಥಾನಾ, ʼಈ ಘಟನೆಗೆ ಸಂಬಂಧಿಸಿದಂತೆ ಮಧು-ವರರ ಕುಟುಂಬಗಳು ಇತ್ಯರ್ಥ ಮಾಡಿಕೊಂಡಿದ್ದಾರೆ. ತಾನು ಕಾನೂನು ಕ್ರಮ ಬಯಸುವುದಿಲ್ಲವೆಂದು ಹೇಳಿ ಅಜೀಂ ತಾನು ನೀಡಿರೋ ದೂರನ್ನ ಹಿಂಪಡೆದಿದ್ದಾನೆ. ಹೀಗಾಗಿ ನಾವು ಈ ಸಂಬಂಧ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲವೆಂದು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News