ಪಾಕ್ ಯುದ್ಧ ವಿಮಾನ ಹೊಡೆದುರುಳಿಸಿದ ಭಾರತದ ವಾಯುಸೇನೆ

ಬುಧುವಾರದಂದು ಭಾರತದ ಗಡಿ ಪ್ರದೇಶದೊಳಗೆ ನುಗ್ಗಿದ್ದ ಪಾಕ್ ಯುದ್ದ ವಿಮಾನವನ್ನು ಭಾರತದ ವಾಯುಸೇನೆ ಹೊಡೆದುರುಳಿಸಿದೆ.

Last Updated : Feb 27, 2019, 12:52 PM IST
 ಪಾಕ್ ಯುದ್ಧ ವಿಮಾನ ಹೊಡೆದುರುಳಿಸಿದ ಭಾರತದ ವಾಯುಸೇನೆ title=

ನವದೆಹಲಿ: ಬುಧುವಾರದಂದು ಭಾರತದ ಗಡಿ ಪ್ರದೇಶದೊಳಗೆ ನುಗ್ಗಿದ್ದ ಪಾಕ್ ಯುದ್ದ ವಿಮಾನವನ್ನು ಭಾರತದ ವಾಯುಸೇನೆ ಹೊಡೆದುರುಳಿಸಿದೆ.

ಪಾಕ್ ನ ಮೂರು ಯುದ್ದ ವಿಮಾನಗಳು ಜಮ್ಮು ಕಾಶ್ಮೀರದ ಪೂಂಚ್ ಹಾಗೂ ನೌಶರಾ ಸೆಕ್ಟರ್ ಬಳಿ ಇರುವ ಗಡಿ ನಿಯಂತ್ರಣ ರೇಖೆಯೊಳಗೆ ನುಸುಳಿದ್ದವು.ಇದರಿಂದ ತಕ್ಷಣ ಎಚ್ಚೆತ್ತುಕೊಂಡ ಭಾರತದ ಸೇನೆಯು ಅವುಗಳಲ್ಲಿ ಒಂದನ್ನು ಹೊಡೆದುರುಳಿಸಿ ಉಳಿದ ವಿಮಾನವನ್ನು ಹಿಮ್ಮಟ್ಟಿಸುವಲ್ಲಿ ಯಶಸ್ವಿಯಾಗಿವೆ. ಇದೇ ವೇಳೆ ಪಾಕ್ ನ ಈ ಯುದ್ಧ ವಿಮಾನಗಳು ಬಾಂಬ್ ನ್ನು ಕೂಡ ಹಾಕಿವೆ ಎನ್ನಲಾಗಿದೆ. ಆದರೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ಜಮ್ಮು ಮತ್ತು ಶ್ರೀನಗರ ಏರ್ಪೋರ್ಟ್ ಗಳಲ್ಲಿ ಈಗ ವಾಣಿಜ್ಯ ಅಥವಾ ಇನ್ನಿತರ ಎಲ್ಲ ವಿಮಾನಗಳನ್ನು ಸ್ಥಗೀತಗೊಳಿಸಿ ಪಂಜಾಬ್ ಮತ್ತು ದೆಹಲಿಯಲ್ಲಿರುವ ವಿಮಾನ ನಿಲ್ದಾಣಗಳಿಗೆ ವರ್ಗಾಯಿಸಲಾಗಿದೆ. ಮಂಗಳವಾರವಷ್ಟೇ ಭಾರತೀಯ ವಾಯುಸೇನೆ ಪಾಕಿಸ್ತಾನದ ಉಗ್ರತಾಣಗಳ ಮೇಲೆ ದಾಳಿ ಮಾಡಿ ನಾಶ ಮಾಡಿದ್ದವು. ಬಾಲ್ ಕೋಟ ಹಾಗೂ ಮುಜಫರಾಬಾದ್ ಪ್ರದೇಶಗಳಲ್ಲಿ ವಾಯುಸೇನೆಯ ಮಿರಾಜ್ ವಿಮಾನಗಳು 1 ಸಾವಿರ ಕೆಜಿ ತೂಕದ ಬಾಂಬ್ ಗಳನ್ನು ಆ ಪ್ರದೇಶದಲ್ಲಿ ಹಾಕಿ ಉಗ್ರ ನೆಲೆಗಳನ್ನು ನಾಶಗೊಳಿಸಿದ್ದವು.

Trending News