ಅಗರ್ತಲಾ (ತ್ರಿಪುರ): ಅಂತರಾಷ್ಟ್ರೀಯ ಮಹಿಳಾ (International Women's Day) ದಿನದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (AMith Sha) ಅವರು ಮಂಗಳವಾರ ತ್ರಿಪುರಾದಲ್ಲಿ 33% ಸರ್ಕಾರಿ ಉದ್ಯೋಗಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ಘೋಷಿಸಿದರು.


COMMERCIAL BREAK
SCROLL TO CONTINUE READING

ತ್ರಿಪುರದ (Tripura) ಸರ್ಕಾರಿ ಉದ್ಯೋಗಗಳಲ್ಲಿ 33 ಪ್ರತಿಶತ ಮೀಸಲಾತಿಯನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ಹೇಳಿದರು. ತ್ರಿಪುರಾದಲ್ಲಿ ಬಿಜೆಪಿ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಗರ್ತಲಾದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು.


ಇದನ್ನೂ ಓದಿ: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಗಮನ ಸೆಳೆಯುತ್ತಿದೆ ಹೊಸಬರ ‘ನೈನಾ’!


ತ್ರಿಪುರದಲ್ಲಿನ ಹಿಂದಿನ ಸಿಪಿಐ-ಎಂ (CPI-M) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಹಿಂದಿನ ಸಿಪಿಐ-ಎಂ ಸರ್ಕಾರವು ತಮ್ಮ ಆಡಳಿತದಲ್ಲಿ ಪ್ರತಿಪಕ್ಷಗಳ ರಕ್ತದಿಂದ ಹೋಳಿ ಆಡಿತ್ತು. ಆದರೆ ಮುಖ್ಯಮಂತ್ರಿ ವಿಪ್ಲವ್‌ ಕುಮಾರ್‌ ದೇವ್‌ ರಾಜ್ಯದಲ್ಲಿ ರಾಜಕೀಯ ಕೊಲೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕಿದ್ದಾರೆ ಎಂದು ಹೇಳಿದರು.


ಕಮ್ಯುನಿಸ್ಟ್ ಸರ್ಕಾರ ಇರುವಲ್ಲೆಲ್ಲಾ ಹೋಳಿಯನ್ನು ರಾಜಕೀಯ ವಿರೋಧಿಗಳ ರಕ್ತದಿಂದ ಆಡಲಾಗುತ್ತದೆ. ಆದರೆ ನಮ್ಮ ಮುಖ್ಯಮಂತ್ರಿ ವಿಪ್ಲವ್‌ ಕುಮಾರ್‌ ದೇವ್‌ (Biplab Kumar Deb) ಅವರು ತ್ರಿಪುರದಲ್ಲಿ ರಾಜಕೀಯ ಹತ್ಯೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಹೇಳಿದರು.


ಅಧಿಕಾರಾವಧಿ ಮುಗಿದ ನಂತರ ಬಿಜೆಪಿಗೆ ಇನ್ನೂ ಒಂದು ಅವಕಾಶ ನೀಡಿ, ತ್ರಿಪುರವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವನ್ನಾಗಿ ಮಾಡುತ್ತೇವೆ ಎಂದರು.


ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Sha) ಪ್ರಕಾರ, ತ್ರಿಪುರದಲ್ಲಿ ಸಿಪಿಐ-ಎಂ ಬಡವರ ಹೆಸರಿನಲ್ಲಿ 25 ವರ್ಷಗಳ ಕಾಲ ಆಡಳಿತ ನಡೆಸಿತು. ಆದರೆ ಅವರ ಉನ್ನತಿಗಾಗಿ ಏನನ್ನೂ ಮಾಡಲಿಲ್ಲ. 25 ವರ್ಷಗಳ ಕಾಲ ಕಮ್ಯುನಿಸ್ಟರು ಬಡವರ ಹೆಸರಿನಲ್ಲಿ ಇಲ್ಲಿ ಆಡಳಿತ ನಡೆಸಿದರು. ಆದರೆ ಬಡವರಿಗಾಗಿ ಏನನ್ನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.


ಇದನ್ನೂ ಓದಿ: Bones Weak - ನಿತ್ಯದ ನಿಮ್ಮ ಈ ಅಭ್ಯಾಸಗಳಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ, ಇಂದೇ ಬದಲಾಯಿಸಿ


ಬಿಜೆಪಿ ತ್ರಿಪುರವನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಿದೆ. ಬಿಜೆಪಿ ಸರ್ಕಾರ ರಚನೆಯಾದ ನಾಲ್ಕು ವರ್ಷಗಳ ನಂತರ, ಮೊದಲು ಡ್ರಗ್ಸ್ ಮತ್ತು ವ್ಯಸನದಿಂದ ಬಳಲುತ್ತಿದ್ದ ತ್ರಿಪುರ ಸ್ವಾವಲಂಬಿಯಾಗುವತ್ತ ಸಾಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ ಎಂದರು. ಬಿಜೆಪಿ (BJP) ಸರ್ಕಾರವು ತ್ರಿಪುರದ ಪ್ರತಿಯೊಬ್ಬ ಬಡವರಿಗೆ ವಿದ್ಯುತ್ ನೀಡಿದೆ ಎಂದು ಹೇಳಿದರು.


ಈ ಹಿಂದೆ ತ್ರಿಪುರದಲ್ಲಿ ಉಗ್ರವಾದ, ಒಳನುಸುಳುವಿಕೆ, ಬಂದ್, ಉದ್ವಿಗ್ನತೆ, ಭ್ರಷ್ಟಾಚಾರ ಇತ್ತು. ಆದರೆ ಇದೀಗ ಅಭಿವೃದ್ಧಿ, ಸಂಪರ್ಕ, ಮೂಲಸೌಕರ್ಯ, ಕ್ರೀಡೆ, ಹೂಡಿಕೆ ಮತ್ತು ಸಾವಯವ ಕೃಷಿಯ ದೊಡ್ಡ ಕೇಂದ್ರವಾಗಿದೆ ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.