ಶೇ 50 ಪ್ರಕರಣಗಳೊಂದಿಗೆ ದೆಹಲಿಯಲ್ಲಿ ಓಮಿಕ್ರಾನ್ ನ ಸಮುದಾಯ ಪ್ರಸರಣ..!

ಮೆಟ್ರೋ ನಗರಗಳ ಎಲ್ಲಾ ಕೊವಿಡ್ ಮಾದರಿಗಳನ್ನ ಈಗ ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ಇಂದು ತಿಳಿಸಿವೆ.

Written by - Zee Kannada News Desk | Last Updated : Dec 31, 2021, 05:48 PM IST
  • ಮೆಟ್ರೋ ನಗರಗಳ ಎಲ್ಲಾ ಕೊವಿಡ್ ಮಾದರಿಗಳನ್ನ ಈಗ ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ಇಂದು ತಿಳಿಸಿವೆ.
  • ಈಗ ಓಮಿಕ್ರಾನ್ ನ ಮೂರನೇ ಅಲೆಯ ಭೀತಿಯ ನಡುವೆ ಭಾರತದಲ್ಲಿ ಇತ್ತೀಚಿಗೆ ಪರೀಕ್ಷಿಸಲಾದ ಮಾದರಿಗಳಲ್ಲಿ ಶೇ 18 ರಷ್ಟು ಮಾದರಿಗಳಲ್ಲಿ ಹೊಸ ರೂಪಾಂತರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ
ಶೇ 50 ಪ್ರಕರಣಗಳೊಂದಿಗೆ ದೆಹಲಿಯಲ್ಲಿ ಓಮಿಕ್ರಾನ್ ನ ಸಮುದಾಯ ಪ್ರಸರಣ..! title=
file photo

ನವದೆಹಲಿ: ಮೆಟ್ರೋ ನಗರಗಳ ಎಲ್ಲಾ ಕೊವಿಡ್ ಮಾದರಿಗಳನ್ನ ಈಗ ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ಇಂದು ತಿಳಿಸಿವೆ.

ಈಗ ಓಮಿಕ್ರಾನ್ ನ ಮೂರನೇ ಅಲೆಯ ಭೀತಿಯ ನಡುವೆ ಭಾರತದಲ್ಲಿ ಇತ್ತೀಚಿಗೆ ಪರೀಕ್ಷಿಸಲಾದ ಮಾದರಿಗಳಲ್ಲಿ ಶೇ 18 ರಷ್ಟು ಮಾದರಿಗಳಲ್ಲಿ ಹೊಸ ರೂಪಾಂತರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.ಅದರಲ್ಲೂ ಈಗ ದೆಹಲಿಯಲ್ಲಿ ಹೊಸ ರೂಪಾಂತರ ವ್ಯಾಪಕ ಪ್ರಮಾಣದಲ್ಲಿ ಕಂಡು ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ : Pro Kabaddi PKL:ಹರಿಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಗೆ ಗೆಲುವು

ಡಿಸೆಂಬರ್ ೧೨ ರಿಂದ ಪರೀಕ್ಷೆ ಮಾಡಿದ ಶೇ ೫೦ ರಷ್ಟು ಮಾದರಿಗಳಲ್ಲಿ ಹೊಸ ರೂಪಾಂತರ ಕಂಡು ಬಂದಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.ಆ ಮೂಲಕ ಈಗ ದೆಹಲಿಯಲ್ಲಿ ಒಮಿಕ್ರಾನ್ ಸಾಂಕ್ರಾಮಿಕ ತೀವ್ರಗತಿಯಲ್ಲಿ ಹರಡುತ್ತಿದೆ ಎನ್ನುವುದು ಧೃಡಪಟ್ಟಿದೆ.

ದೆಹಲಿಯು ಈ ತಿಂಗಳು ಒಂಬತ್ತು ಕೋವಿಡ್ ಸಾವುಗಳನ್ನು ದಾಖಲಿಸಿದೆ, ಇದು ಕಳೆದ ನಾಲ್ಕು ತಿಂಗಳುಗಳಲ್ಲಿ ಅತ್ಯಧಿಕವಾಗಿದೆ.ಗುರುವಾರ,1,313 ಹೊಸ ಪ್ರಕರಣಗಳು ವರದಿಯಾಗಿದ್ದು.ಇದು ಕಳೆದ ಏಳು ತಿಂಗಳಲ್ಲಿಯೇ ಅಧಿಕ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Ind Vs SA: ದ. ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಶತಕ ಗಳಿಸಿದ್ದು ಹೇಗೆ? ರಹಸ್ಯ ಬಿಚ್ಚಿಟ್ಟ ಕೆಎಲ್ ರಾಹುಲ್   

ಈ ವಾರದ ಆರಂಭದಲ್ಲಿ, ಅರವಿಂದ್ ಕೇಜ್ರಿವಾಲ್ ಸರ್ಕಾರವು ಹಳದಿ ಅಲರ್ಟ್ ಅಡಿಯಲ್ಲಿ ಹೊಸ ನಿರ್ಬಂಧಗಳನ್ನು ಜಾರಿಗೆ ತಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News