ನವದೆಹಲಿ: ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಕೇರಳದ 96ರ ಹರೆಯದ ಅಜ್ಜಿಯೊಬ್ಬರು ಈ ಆಸೆಗೆ ಜೀವಂತ ಸಾಕ್ಷಿಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಕೇರಳದ 'ಅಕ್ಷರ ಲಕ್ಷಂ' ಸಾಕ್ಷರತಾ ಯೋಜನೆ ಅಡಿಯಲ್ಲಿ ಅಕ್ಷರ ಕಲಿಯುತ್ತಿರುವ 96ವಯಸ್ಸಿನ ಅಜ್ಜಿ ಕಾರ್ತಿಯಾಯನಿ ಅಮ್ಮ 4ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಕೇರಳದ ಈ ಯೋಜನೆ ಅಡಿಯಲ್ಲಿ ಇತ್ತೀಚೆಗೆ ಪರೀಕ್ಷೆ ಬರೆದ 40 ಸಾವಿರ ಪರಿಕ್ಷಾರ್ಥಿಗಳಲ್ಲಿ ಅಳಪ್ಪುಜ ಪ್ರದೇಶದ ಕಾರ್ತಿಯಾಯನಿ ಅಮ್ಮ ಅತ್ಯಂತ ಹಿರಿಯ ವಯಸ್ಸಿನವರು. ಪ್ರಶ್ನೆ ಪತ್ರಿಕೆ ಪಡೆದು ಬಹಳ ಸುಲಭವಾಗಿ ಬರೆದ ಉತ್ತರಗಳನ್ನು ಬರೆದ ಅಜ್ಜಿ ಕಾರ್ತಿಯಾಯನಿ, 10ನೇ ತರಗತಿಯವರೆಗೆ ಓದುವ ಹಂಬಲ ವ್ಯಕ್ತಪಡಿಸಿದ್ದಾರೆ. 


ಕುಟುಂಬದಲ್ಲಿನ ಆರ್ಥಿಕ ಸಮಸ್ಯೆಗಳಿಂದಾಗಿ ಚಿಕ್ಕ ವಯಸ್ಸಿನಲ್ಲೇ ವಿದ್ಯಾಭ್ಯಾಸ ತೊರೆದರು. ನಂತರ ಮದುವೆಯಾಗಿ 6 ಮಕ್ಕಳ ತಾಯಿಯಾದರು, ಗಂಡನ ಅಕಾಲಿಕ ಮರಣದ ನಂತರ ಮನೆಗೆಲಸ ಮಾಡಿ 6 ಮಕ್ಕಳನ್ನು ಬೆಳೆಸಿದರು. ಆದರೆ ಕೇವಲ ಎರಡು ವರ್ಷಗಳ ಹಿಂದಷ್ಟೇ ಇವರ 60 ವರ್ಷ ವಯಸ್ಸಿನ ಮಗಳು 10ನೇ ತರಗತಿ ಪರೀಕ್ಷೆ ಬರೆದಿದ್ದರು, ಅದನ್ನು ನೋಡಿ ಸ್ಫೂರ್ತಿ ಪಡೆದ ಕಾರ್ತಿಯಾಯನಿ ಅಜ್ಜಿ  'ಅಕ್ಷರ ಲಕ್ಷಂ' ಸಾಕ್ಷರತಾ ಯೋಜನೆ ಅಡಿಯಲ್ಲಿ ಶಿಕ್ಷಣಕ್ಕಾಗಿ ಹೆಸರು ನೊಂದಾಯಿಸಿಕೊಂಡಿದ್ದಾರೆ. 


ಆದರೆ, ಈ ಯೋಜನೆಯಡಿ ಶಿಕ್ಷಣ ಪಡೆಯಲು 4ನೇ ತರಗತಿ ಪರೀಕ್ಷೆಗೆ ಸಮನಾಗಿ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಓದುವ, ಬರೆಯುವ ಮತ್ತು ಗಣಿತ ಜ್ಞಾನಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗಿತ್ತು. 100 ಅಂಕಗಳಿಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಕನಿಷ್ಠ 30 ಅಂಕಗಳನ್ನು ಪಡೆದವರಿಗೆ ಈ ಯೋಜನೆಯಡಿ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಜ್ಜಿಗೆ, 10ನೇ ತರಗತಿವರೆಗೆ ಓದುವ ಹಂಬಲ ವ್ಯಕ್ತಪಡಿಸಿದ್ದಾರೆ.