ತಿರುವನಂತಪುರಮ್: ಕೇಂದ್ರ ಸಚಿವ ಸುರೇಶ್ ಗೋಪಿ ಬುಧವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಮದರ್ ಇಂಡಿಯಾ ಮತ್ತು ದಿವಂಗತ ಕಾಂಗ್ರೆಸ್ ಮುಖ್ಯಮಂತ್ರಿ ಕೆ ಕರುಣಾಕರನ್ ಅವರನ್ನು ಧೈರ್ಯಶಾಲಿ ಆಡಳಿತಗಾರ ಎಂದು ಬಣ್ಣಿಸಿದ್ದಾರೆ.ಇದೆ ವೇಳೆ ಮಾರ್ಕ್ಸ್ವಾದಿ ಹಿರಿಯ ಇ ಕೆ ನಾಯನಾರ್ ಅವರನ್ನು ತಮ್ಮ ರಾಜಕೀಯ ಗುರುಗಳು ಎಂದು ಕರೆದಿದ್ದಾರೆ.


COMMERCIAL BREAK
SCROLL TO CONTINUE READING

ಇಲ್ಲಿನ ಪುಂಕುನ್ನಂನಲ್ಲಿರುವ ಕರುಣಾಕರನ್ ಅವರ ಸ್ಮಾರಕ ಮುರಳಿ ಮಂದಿರಂಗೆ ಭೇಟಿ ನೀಡಿದ ನಂತರ ಶ್ರೀ ಗೋಪಿ ಸುದ್ದಿಗಾರರೊಂದಿಗೆ ಮಾತನಾಡಿದರು.


ಇದನ್ನೂ ಓದಿ: ಎರಡು ದಿನಗಳ ದಕ್ಷಿಣ ಭಾರತ ಉತ್ಸವಕ್ಕೆ ಅರಮನೆ ಮೈದಾನ ಸಜ್ಜು : ಪ್ರವಾಸೋದ್ಯಮ ಇಲಾಖೆ ಮತ್ತು ಎಫ್.ಕೆ.ಸಿ.ಸಿಐ ನಿಂದ ಆಯೋಜನೆ


ಕರುಣಾಕರನ್ ಸ್ಮಾರಕಕ್ಕೆ ಅವರ ಭೇಟಿಗೆ ಯಾವುದೇ ರಾಜಕೀಯ ಅರ್ಥವನ್ನು ಸೇರಿಸಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಒತ್ತಾಯಿಸಿದ ಕೇಂದ್ರ ಸಚಿವ ಗೋಪಿ, ತಮ್ಮ ಗುರುಗಳಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.ಇದೆ ವೇಳೆ ಇಂದಿರಾ ಗಾಂಧಿ ಅವರ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಾ ಅವರನ್ನು ಮದರ್ ಇಂಡಿಯಾ ಎಂದು ಕರೆದರೆ ಇನ್ನೊಂದೆಡೆಗೆ ಕರುಣಾಕರನ್ ಅವರನ್ನು ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಪಿತಾಮಹ ಎಂದು ಕರೆದಿದ್ದಾರೆ.


 ಕೇಂದ್ರ ಸಚಿವ ಗೋಪಿ ಅವರು ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಕೇರಳದಲ್ಲಿ ಬಿಜೆಪಿ ಖಾತೆಯನ್ನು ತೆರೆದಿತ್ತು.


 https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.