close

News WrapGet Handpicked Stories from our editors directly to your mailbox

ಅಮಿತ್ ಶಾ ವಿರುದ್ಧದ ಹೇಳಿಕೆಗೆ ಕಾಂಗ್ರೆಸ್ ಕೌನ್ಸಿಲರ್ ಮೇಲೆ ಮಾನಹಾನಿ ಕೇಸ್

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ  ನೀಡಿದ್ದ ವಿವಾದಾತ್ಮಕ ಹೇಳಿಕೆ ಆರೋಪದ ಮೇಲೆ ಕಾಂಗ್ರೆಸ್ ಕೌನ್ಸಿಲರ್ ಯಾಸ್ಮಿನ್ ಕಿಡ್ವಾಯ್ ವಿರುದ್ಧ ಶನಿವಾರ ದೂರು ದಾಖಲಾಗಿದೆ.

Updated: Aug 18, 2019 , 12:08 PM IST
 ಅಮಿತ್ ಶಾ ವಿರುದ್ಧದ ಹೇಳಿಕೆಗೆ ಕಾಂಗ್ರೆಸ್ ಕೌನ್ಸಿಲರ್ ಮೇಲೆ ಮಾನಹಾನಿ ಕೇಸ್
file photo

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ  ನೀಡಿದ್ದ ವಿವಾದಾತ್ಮಕ ಹೇಳಿಕೆ ಆರೋಪದ ಮೇಲೆ ಕಾಂಗ್ರೆಸ್ ಕೌನ್ಸಿಲರ್ ಯಾಸ್ಮಿನ್ ಕಿಡ್ವಾಯ್ ವಿರುದ್ಧ ಶನಿವಾರ ದೂರು ದಾಖಲಾಗಿದೆ.

ಆಗಸ್ಟ್ 10 ರಂದು ಕಿಡ್ವಾಯ್ ಅವರು ಪೋಸ್ಟ್ ಮಾಡಿದ ಟ್ವೀಟ್ ಅನ್ನು ಉಲ್ಲೇಖಿಸಿ ಭಾರತೀಯ ಜನತಾ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಇಂಪ್ರೀತ್ ಸಿಂಗ್ ಬಕ್ಷಿ ಅವರು ದೂರು ದಾಖಲಿಸಿದ್ದಾರೆ.ದೆಹಲಿ ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ 'ಯಾಸ್ಮಿನ್ ಕಿಡ್ವಾಯ್ ಅವರು ನೀಡಿರುವ ಇಂತಹ ಅವಹೇಳನಕಾರಿ ಮತ್ತು ಮಾನಹಾನಿಕರ ಹೇಳಿಕೆಯ ಏಕೈಕ ಉದ್ದೇಶವೆಂದರೆ ಅವರು ಗೃಹ ಸಚಿವರನ್ನು ದೂಷಿಸುತ್ತಿರುವುದರ ಮೂಲಕ  ಹೆಚ್ಚು ಪ್ರಚಾರ ಪಡೆಯುವುದು' ಎಂದು ಆರೋಪಿಸಿದ್ದಾರೆ. ಈಗ ಯಾಸ್ಮಿನ್ ಕಿಡ್ವಾಯ್ ವಿರುದ್ಧ ಎಫ್ಐಆರ್ ದಾಖಲಿಸಲು ಮನವಿ ಮಾಡಿಕೊಂಡಿದ್ದಾರೆ.

ಮೇಲೆ ತಿಳಿಸಿದ ಸಂಗತಿಗಳ ಸಮಗ್ರ ತನಿಖೆಯ ನಂತರ, ಐಸಿ ಕಾಯ್ದೆ 2000 ರ ಸಂಬಂಧಿತ ವಿಭಾಗಗಳ ಸೆಕ್ಷನ್ 676 ರ ಅಡಿಯಲ್ಲಿ ಯಾಸ್ಮಿನ್ ಕಿಡ್ವಾಯ್ ವಿರುದ್ಧ ಐಪಿಸಿಯ 500, 501, 153, 505 ಸೆಕ್ಷನ್‌ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗುವುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.