)
Meerut Hotel Firing: ಉತ್ತರ ಪ್ರದೇಶದ ಮೀರತ್ನ ಹೋಟೆಲ್ನಲ್ಲಿ ಯುವಕನೊಬ್ಬ ಗುಂಡು ಹಾರಿಸಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಾಸ್ತವವಾಗಿ ಆ ಯುವಕ ಹೋಟೆಲ್ ಸಿಬ್ಬಂದಿ ಬಳಿ ಹುಡುಗಿಗಾಗಿ ಬೇಡಿಕೆ ಇಟ್ಟಿದ್ದನೆಂದು ಹೇಳಲಾಗಿದೆ. ʼನನಗೆ ಒಂದು ರಾತ್ರಿಗೆ ಹುಡುಗಿ ಬೇಕುʼ ಎಂದು ಯುವಕ ಹೇಳಿದ್ದ. ಇದಕ್ಕೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದಾಗ ಆತ ಕೋಪಗೊಂಡು ಮನಬಂದಂತೆ ಗುಂಡು ಹಾರಿಸಿದ್ದಾನೆ. ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಈ ಆಘಾತಕಾರಿ ಘಟನೆ ಹೋಟೆಲ್ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ.
ವಿಡಿಯೋ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನ ಗುರುತಿಸಿ ಬಂಧಿಸಿದ್ದಾರೆ. ಈ ಪ್ರಕರಣವು ಮೀರತ್ನ ಟಿಪಿ ನಗರದ ವೇದವ್ಯಾಸ್ಪುರಿಯಲ್ಲಿರುವ ಹೋಟೆಲ್ಗೆ ಸಂಬಂಧಿಸಿದೆ. ಈ ಗುಂಡಿನ ದಾಳಿ ಘಟನೆಯು ಈ ಪ್ರದೇಶದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಮೀರತ್ನ ವೇದವ್ಯಾಸ್ಪುರಿಯ ಡಿವೈಡ್ ರಸ್ತೆಯಲ್ಲಿ ಒಂದು ಹೋಟೆಲ್ ಇದೆ. ಸುಮಿತ್ ಮತ್ತು ಅಮಿತ್ ಇಬ್ಬರೂ ಹೋಟೆಲ್ ನಡೆಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ 9.30ಕ್ಕೆ ಯುವಕನೊಬ್ಬ ಬೈಕ್ನಲ್ಲಿ ಬಂದು ಒಂದು ರಾತ್ರಿಗೆ ನನಗೆ ಹುಡುಗಿ ಬೇಕೆಂದು ಬೇಡಿಕೆ ಇಟ್ಟಿದ್ದ ಎಂದು ಸುಮಿತ್ ಪೊಲೀಸರಿಗೆ ತಿಳಿಸಿದ್ದಾರೆ.
ಯುವಕನ ಬೇಡಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೆ. ಹೋಟೆಲ್ನಲ್ಲಿ ಈ ರೀತಿಯ ವ್ಯವಸ್ಥೆ ಇರುವುದಿಲ್ಲವೆಂದು ಯುವಕನಿಗೆ ನಾನ ತಿಳಿಹೇಳಿದೆ. ಇದರಿಂದ ಆ ಯುವಕ ಇದ್ದಕ್ಕಿದ್ದಂತೆ ಕೋಪಗೊಂಡ. ತಕ್ಷಣವೇ ಆತ ಅವಾಚ್ಯ ಶಬ್ಧಗಳಿಂದ ನಿಂದಿಸಲು ಪ್ರಾರಂಭಿಸಿದ ಎಂದು ಸುಮಿತ್ ತಿಳಿಸಿದ್ದಾರೆ. ಯುವಕನ ಅವಿವೇಕದ ಬೇಡಿಕೆಯಿಂದ ನಮ್ಮೆಲ್ಲರಿಗೂ ಶಾಕ್ ಆಗಿತ್ತು. ನಾವು ಆತನ ಬೇಡಿಕೆಗೆ ನಿರಾಕರಿಸಿದಾಗ ಆತ ತುಂಬಾ ಕೋಪಗೊಂಡಿದ್ದ. ಹೋಟೆಲ್ ಸಿಬ್ಬಂದಿ ಆತನ ಮಾತುಗಳನ್ನು ನಿರ್ಲಕ್ಷಿಸಿ, ಇಲ್ಲಿ ಆ ರೀತಿಯ ಯಾವುದೇ ಸೌಲಭ್ಯವಿಲ್ಲ. ನಾವು ನಿನಗೆ ರೂಂ ಕೊಡುವುದಿಲ್ಲವೆಂದು ಹೇಳಿದರು. ಕೊನೆಗೆ ಆ ಯುವಕ ಹೋಟೆಲ್ ಸಿಬ್ಬಂದಿಗೆ ಬೆದರಿಕೆ ಹಾಕಿ ಹೊರಟುಹೋದ.
ಬಾಯಿಗೆ ಕರವಸ್ತ್ರ ಕಟ್ಟಿಕೊಂಡು ಮತ್ತೆ ಬಂದ ಯುವಕ
ಸಿಬ್ಬಂದಿಗೆ ಅವಾಜ್ ಹಾಕಿದ್ದ ಆರೋಪಿ ಯುವಕ ಸುಮಾರು 10 ಗಂಟೆ ಸುಮಾರಿಗೆ ಮತ್ತೆ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಬಂದಿದ್ದ. ಬಂದವನೇ ಹೋಟೆಲ್ ಸಿಬ್ಬಂದಿ ಮೇಲೆ ಏಕಾಏಕಿ ಗುಂಡು ಹಾರಿಸಿದ. ಗುಂಡು ಗಾಜಿಗೆ ತಗುಲಿದ್ದು, ಕೌಂಟರ್ನಲ್ಲಿ ಕುಳಿತಿದ್ದ ಸುಮಿತ್ ಅಡಗಿಕೊಂಡು ತನ್ನ ಜೀವ ಉಳಿಸಿಕೊಂಡ. ಸ್ಥಳಕ್ಕೆ ಬಂದ ಪೊಲೀಸರು ಹೋಟೆಲ್ನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಟಿಪಿ ನಗರ ಪ್ರದೇಶದ ನಿವಾಸಿ ರಾಜ್ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪಿಸ್ತೂಲ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ.