ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಗೌತಮ್ ಗಂಭೀರ್  ತನ್ನ ಆಡಳಿತದ ವೈಫಲ್ಯಗಳನ್ನು ಮರೆಮಾಚುವ ಸಲುವಾಗಿ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನಕ್ಕೆ ಆಗ್ರಹಿಸುತ್ತದೆ ಎಂದು ಹೇಳಿದರು.



COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರನ್ನು ಸೋಲಿಸುವ ಉದ್ದೇಶದ  ಹೊರತು ಕಾಂಗ್ರೆಸ್ ಮತ್ತು ಎಎಪಿಗೆ ಯಾವುದೇ ದೃಷ್ಟಿಕೋನವಿಲ್ಲ ಎಂದು ಗಂಭೀರ್ ಹೇಳಿದರು."ಲೋಕಸಭೆ ಚುನಾವಣೆಗಿಂತ ಮುಂಚಿತವಾಗಿ ಆಮ್ ಆದ್ಮಿ ಪಕ್ಷವು ಸಂಪೂರ್ಣ ರಾಜ್ಯದ ಸ್ಥಾನ ಮಾನದ ಬೇಡಿಕೆಯನ್ನು ಇರಿಸಿದೆ.  ತನ್ನ ಆಡಳಿತದ ವೈಫಲ್ಯಗಳನ್ನು ಮರೆಮಾಚಲು ಅದು ಈ ತಂತ್ರವನ್ನು ಬಳಸಿದೆ ಎಂದು ಗಂಭೀರ್ ಆರೋಪಿಸಿದರು.



ಇತ್ತಿಚಿಗೆಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದ ಅವರು ಈಗ ಈಶಾನ್ಯ ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.ಈ ಕ್ಷೇತ್ರದಲ್ಲಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅರ್ವಿಂದರ್  ಸಿಂಗ್ ಲವ್ಲಿ ಮತ್ತು ಆಮ್ ಆದ್ಮಿ ಪಾರ್ಟಿಯ ಅತಿಶಿಯವರನ್ನು ಅವರು ಎದುರಿಸಲಿದ್ದಾರೆ.ದೆಹಲಿ ಈಶ್ಯಾನ್ಯ ಕ್ಷೇತ್ರದಲ್ಲಿ ಇದಕ್ಕೂ ಮೊದಲು ಮಹೇಶ್ ಗಿರಿ ಅವರು ಪ್ರತಿನಿಧಿಸಿದ್ದರು.


ದೆಹಲಿಯಲ್ಲಿ ಬಿಜೆಪಿ ಮುಂದಿರುವ ಪ್ರಮುಖ ಸವಾಲು ಕಾಂಗ್ರೆಸ್ ಅಥವಾ ಆಮ್ ಆದ್ಮಿ ಪಕ್ಷವಲ್ಲ ಬದಲಾಗಿ ಪ್ರಧಾನಿ ಮೋದಿ ಅವರು ನೀಡಿದ ಭರವಸೆಗಳನ್ನು ಈಡೇರಿಸುವುದು, ಮತ್ತು ಅಭಿವೃದ್ದಿ  ಕಾರ್ಯಸೂಚಿಗೆ ಪ್ರಾಮುಖ್ಯತೆ ನೀಡುವುದು ಎಂದು  ಹೇಳಿದರು.