ಮತ್ತೆ ಬದಲಾಗಲಿದೆಯಂತೆ ಹವಾಮಾನ: ಐಎಂಡಿ ಎಚ್ಚರಿಕೆ

ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ದೇಶದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 7 ರಷ್ಟು ಹೆಚ್ಚಿನ ಮಳೆಯಾಗಿದೆ. ಮಾನ್ಸೂನ್ ಸದ್ಯಕ್ಕೆ ಮುಂದುವರಿಯುವ ಸಾಧ್ಯತೆಯಿದೆ, ಸೆಪ್ಟೆಂಬರ್ ಮೂರನೇ ವಾರದಲ್ಲಿ ದೇಶದ ಹಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

Last Updated : Sep 8, 2020, 03:01 PM IST
  • ಹವಾಮಾನ ಇಲಾಖೆ (IMD) ಪ್ರಕಾರ ದೇಶದಲ್ಲಿ ಈವರೆಗೆ ಶೇಕಡಾ 7 ರಷ್ಟು ಹೆಚ್ಚಿನ ಮಳೆಯಾಗಿದೆ.
  • ಸೆಪ್ಟೆಂಬರ್ ಮೂರನೇ ವಾರದಲ್ಲಿ ದೇಶದ ಹಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಬಹುದು.
  • ಹವಾಮಾನ ಇಲಾಖೆಯ ಪ್ರಕಾರ ಈ ವರ್ಷ ಮಳೆಗಾಗಿ (Rain) ನೀಡಲಾದ ಮುನ್ಸೂಚನೆಗಳು ಶೇಕಡಾ 80 ಕ್ಕಿಂತ ಹೆಚ್ಚು ಸರಿಯಾಗಿದೆ ಎಂದು ಸಾಬೀತಾಗಿದೆ.
ಮತ್ತೆ ಬದಲಾಗಲಿದೆಯಂತೆ ಹವಾಮಾನ: ಐಎಂಡಿ ಎಚ್ಚರಿಕೆ title=

ನವದೆಹಲಿ : ಹವಾಮಾನ ಇಲಾಖೆ (IMD) ಪ್ರಕಾರ ದೇಶದಲ್ಲಿ ಈವರೆಗೆ ಶೇಕಡಾ 7 ರಷ್ಟು ಹೆಚ್ಚಿನ ಮಳೆಯಾಗಿದೆ. ಮಾನ್ಸೂನ್ ಸದ್ಯಕ್ಕೆ ಮುಂದುವರಿಯುವ ಸಾಧ್ಯತೆಯಿದೆ, ಸೆಪ್ಟೆಂಬರ್ ಮೂರನೇ ವಾರದಲ್ಲಿ ದೇಶದ ಹಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಬಹುದು. 

ಹವಾಮಾನ ಇಲಾಖೆಯ ಪ್ರಕಾರ ಈ ವರ್ಷ ಮಳೆಗಾಗಿ (Rain) ನೀಡಲಾದ ಮುನ್ಸೂಚನೆಗಳು ಶೇಕಡಾ 80 ಕ್ಕಿಂತ ಹೆಚ್ಚು ಸರಿಯಾಗಿದೆ ಎಂದು ಸಾಬೀತಾಗಿದೆ.

ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ.ಎಂ.ರಾಜೀವನ್ ಅವರ ಪ್ರಕಾರ ಈ ವರ್ಷ ದೇಶದ ಹೆಚ್ಚಿನ ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಉತ್ತಮವಾಗಿದೆ. ವರ್ಚುವಲ್ ಸಮ್ಮೇಳನದಲ್ಲಿ ಈ ವರ್ಷ ಉತ್ತಮ ಮಳೆಯಿಂದಾಗಿ ಬೆಳೆಗಳ ಉತ್ತಮ ಉತ್ಪಾದನೆಯಿಂದ ರೈತರು ಹೆಚ್ಚಿನ ಲಾಭ ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದರು. ಇದು ದೇಶದ ಆರ್ಥಿಕತೆಗೆ ಸಹಕಾರಿಯಾಗಲಿದೆ.

ಮಾನ್ಸೂನ್ ಆರ್ಥಿಕತೆಗೆ ಎಷ್ಟು ಪ್ರಯೋಜನವನ್ನು ನೀಡುತ್ತದೆ ಎಂಬ ನಿಖರ ಲೆಕ್ಕಾಚಾರವನ್ನು ಇದೀಗ ಮಾಡಲು ಸಾಧ್ಯವಿಲ್ಲ. ಆದಾಗ್ಯೂ ಇದು ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಣಯಿಸಬಹುದು. ಇಲ್ಲಿಯವರೆಗೆ ಇಡೀ ದೇಶದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 7 ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ತಿಳಿಸಿದ್ದಾರೆ.

ಐಎಂಡಿ ಮಹಾನಿರ್ದೇಶಕ ಡಾ.ಎಂ.ಮಹಾಪಾತ್ರ ಪ್ರಕಾರ ಸೆಪ್ಟೆಂಬರ್‌ನಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ವಾಯುವ್ಯ ಮತ್ತು ಮಧ್ಯ ಭಾರತ ಸೇರಿದಂತೆ ದೇಶದ ಹೆಚ್ಚಿನ ಭಾಗಗಳಲ್ಲಿ ಮಾನ್ಸೂನ್ (Monsoon) ಮಳೆ ಕಡಿಮೆಯಾಗುವ ನಿರೀಕ್ಷೆಯಿದೆ. ಆದರೆ ಸೆಪ್ಟೆಂಬರ್ 17ರ ನಂತರ ಮತ್ತೆ ಮಳೆ ಹೆಚ್ಚಾಗುತ್ತದೆ. ಮಾನ್ಸೂನ್ ಸಾಮಾನ್ಯವಾಗಿ ಸೆಪ್ಟೆಂಬರ್ 17 ರಿಂದ ಮರಳಲು ಪ್ರಾರಂಭಿಸುತ್ತದೆ.
 

Trending News