)
Actor Dileep Gets Clean Chit : ನಟ ದಿಲೀಪ್ ಖ್ಯಾತ ನಟಿಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಆರೋಪ ಹೊತು ಕಾನೂನು ಹೋರಾಟ ನಡೆಸಿದರು. ಇಂದು ಹೈಕೋರ್ಟ್ ದಿಲೀಪ್ ಅವರ ನಿರ್ದೋಷಿಯೆಂದು ಘೋಷಿಸಿದೆ. ಎರ್ನಾಕುಲಂ ಜಿಲ್ಲಾ ಮತ್ತು ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ ವರ್ಗೀಸ್ ಅವರು ತೀರ್ಪು ಪ್ರಕಟಿಸಿದರು. ಫೆಬ್ರವರಿ 17, 2017 ರಂದು ಖ್ಯಾತ ನಟಿಯೊಬ್ಬರನ್ನ ಕಾರಿನೊಳಗೆ ಅಪಹರಣ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದ್ದಾಗಿದೆ.
ನಟಿಯ ಕಿಡ್ನ್ಯಾಪ್, ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ಒಟ್ಟು ಹತ್ತ ಮಂದಿಯನ್ನ ವಿಚಾರಿಸಲಾಗಿದೆ.ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂದನ್ ಬಿ, ವಿಜೇಶ್ ವಿಪಿ, ಸಲೀಂ ಎಚ್, ಪ್ರದೀಪ್, ಚಾರ್ಲಿ ಥಾಮಸ್, ಸನಿಲ್ ಕುಮಾರ್ ಅಲಿಯಾಸ್ ಮೇಸ್ತ್ರಿ ಸನಿಲ್, ಶರತ್ ಸೇರಿದಂತೆ ಹತ್ತು ಮಂದಿ ಆರೋಪಿಗಳು ವಿಚಾರಣೆ ಎದುರಿಸಿದ್ದರು.ಎಲ್ಲಾ ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಜೊತೆಗೆ, ಕ್ರಿಮಿನಲ್ ಪಿತೂರಿ, ಅಪಹರಣ, ಲೈಂಗಿಕ ದೌರ್ಜನ್ಯ, ಸಾಮೂಹಿಕ ಅತ್ಯಾಚಾರ, ಸಾಕ್ಷ್ಯ ನಾಶ ಮತ್ತು ಸಾಮಾನ್ಯ ಉದ್ದೇಶ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವು ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಸಾಕ್ಷ್ಯ ನಾಶಪಡಿಸಿದ ಹೆಚ್ಚುವರಿ ಆರೋಪವನ್ನೂ ಆರೋಪಿ ನಟ ದಿಲೀಪ್ ಎದುರಿಸಿದರು.
2017ರಲ್ಲಿ ಮೊದಲ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಮುಖ ಆರೋಪಿ ಪಲ್ಸರ್ ಸುನಿ ಜೈಲಿನಿಂದ ದಿಲೀಪ್ಗೆ ಪತ್ರ ಕಳುಹಿಸಿದ್ದಾನೆ ಎಂದು ತನಿಖಾಧಿಕಾರಿಗಳು ಆರೋಪಿಸಿದರು. ಆದಾದ ನಂತ್ರ ಆ ವರ್ಷದ ಜುಲೈನಲ್ಲಿ ದಿಲೀಪ್ನನ್ನು ಬಂಧಿಸಲಾಯಿತು. ನಂತರ ಅಕ್ಟೋಬರ್ 2017 ರಲ್ಲಿ ಅವರಿಗೆ ಜಾಮೀನು ನೀಡಲಾಯಿತು. ನಂತರ 2017 ರಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಲಾಯಿತು. ಮಲಯಾಳಂ ನಟ ದಿಲೀಪ್ ಈ ಬಗ್ಗೆ ಸತತವಾಗಿ ಕಾನೂನು ಹೋರಾಟ ನಡಿಸುತ್ತ ಬಂದಿದ್ದು, ಇಂದು ಕೇರಳ ಹೈಕೋರ್ಟ್ ನಿರ್ದೋಷಿ ಎಂದು ಘೋಷಿಸಿ ಬಿಗ್ ರಿಲೀಫ್ ಕೊಟ್ಟಿದೆ..