)
Actresses affair with Dawood Ibrahim: 80 ಮತ್ತು 90 ರ ದಶಕಗಳಲ್ಲಿ ಭೂಗತ ಲೋಕವು ಸಾಕಷ್ಟು ಪ್ರಭಾವ ಬೀರಿತ್ತು. ಆ ಸಮಯದಲ್ಲಿ ದಾವೂದ್ ಇಬ್ರಾಹಿಂ ಬಾಲಿವುಡ್ ಅನ್ನು ಆಳುತ್ತಿದ್ದ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಚಲನಚಿತ್ರ ಜಗತ್ತಾಗಲಿ ಅಥವಾ ಯಾವುದೇ ಇತರ ಉದ್ಯಮವಾಗಲಿ, ಬೇರೆ ದೇಶದಲ್ಲಿ ಕುಳಿತುಕೊಂಡೇ ಭಾರತದಲ್ಲಿ ವ್ಯವಹಾರ ಮಾಡುತ್ತಿದ್ದ ಎನ್ನಲಾಗಿದೆ. ಇನ್ನು ಆ ಸಮಯದಲ್ಲಿ ದಾವೂದ್ ಕೆಲವು ನಟಿಯರನ್ನು ಪ್ರೀತಿಸುತ್ತಿದ್ದನಂತೆ. ಹಾಗೆಯೇ ದಾವೂದ್ ಜೊತೆ ಅನೇಕ ನಟಿಯರು ಸಂಬಂಧ ಹೊಂದಿದ್ದರು. ಈ ಬಗ್ಗೆ ಕೆಲವರು ಅದನ್ನು ಬಹಿರಂಗಪಡಿಸಿದರೆ, ಇನ್ನೂ ಕೆಲವರು ಶಾಶ್ವತವಾಗಿ ಮೌನವಾಗಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ದಾವೂದ್ ತಾನು ಇಷ್ಟಪಡುವ ನಟಿಯರಿಗೆ ಕರೆ ಮಾಡುತ್ತಿದ್ದ. ತನ್ನ ಬೇಡಿಕೆಗಳಿಗೆ ಒಪ್ಪಿದರೆ, ಎಲ್ಲವೂ ಸರಿಯಾಗಿತ್ತು. ಇಲ್ಲದಿದ್ದರೆ ಅವರಿಗೆ ಬೆದರಿಕೆ ಹಾಕಲು ಪ್ರಾರಂಭಿಸುತ್ತಿದ್ದ ಎನ್ನಲಾಗಿದೆ. ಇನ್ನು ಆ ಕಾಲದ 4 ನಟಿಯರು ಅವನಿಂದ ಪ್ರಭಾವಿತರಾಗಿದ್ದರು ಎಂದು ಹೇಳಲಾಗುತ್ತದೆ. ಆ ನಟಿಯರಲ್ಲಿ ಕೆಲವರು ಕಣ್ಮರೆಯಾದರೆ, ಇನ್ನೂ ಕೆಲವರು ವೈವಾಹಿಕ ಜೀವನ ನಡೆಸುತ್ತಿದ್ದಾರೆ.
ಮಂದಾಕಿನಿ: ಮಂದಾಕಿನಿ 80 ರ ದಶಕದಲ್ಲಿ ಬಾಲಿವುಡ್ಗೆ ಬಂದಾಕೆ, ಬ್ಲಾಕ್ಬಸ್ಟರ್ ಚಿತ್ರ ರಾಮ್ ತೇರಿ ಗಂಗಾ ಮೈಲಿ (1986) ಮೂಲಕ ಫೇಮಸ್ ಆದರು. ಈ ಚಿತ್ರದಲ್ಲಿ ದಾವೂದ್ ಮಂದಾಕಿನಿಯವರನ್ನು ಮೊದಲ ಬಾರಿಗೆ ನೋಡಿದ್ದು, ನಂತರ ಹಲವು ವರ್ಷಗಳ ನಂತರ 1994 ರ ಮಂದಾಕಿನಿಯ ಫೋಟೋ ವೈರಲ್ ಆಗಿತ್ತು, ಅದರಲ್ಲಿ ಅವರು ದಾವೂದ್ ಜೊತೆ ಕುಳಿತು ಕ್ರಿಕೆಟ್ ಪಂದ್ಯ ನೋಡುತ್ತಿದ್ದರು. ಆ ಫೋಟೋ ಬಂದ ತಕ್ಷಣ, ಮಂದಾಕಿನಿಯ ಬಗ್ಗೆ ಸಾಕಷ್ಟು ವಿವಾದಗಳಿದ್ದವು. ಆದರೆ ಮಂದಾಕಿನಿ ಯಾವಾಗಲೂ ಈ ವಿಷಯಗಳನ್ನು ನಿರಾಕರಿಸಿದರು. ಬಹಳ ಹಿಂದೆಯೇ ಅವರು ಭಾರತಕ್ಕೆ ಮರಳಿದ್ದು, ನಂತರ ಮಂದಾಕಿನಿ ವೈದ್ಯರನ್ನು ವಿವಾಹವಾದರು ಎಂಬ ಸುದ್ದಿ ಬಂತು. ಅವರಿಗೆ ಅವರಿಂದ ಇಬ್ಬರು ಮಕ್ಕಳಿದ್ದಾರೆ.
ಜಾಸ್ಮಿನ್ ಧುನ್ನಾ: 1988 ರಲ್ಲಿ ಬಿಡುಗಡೆಯಾದ ಸೂಪರ್ಹಿಟ್ ಬಾಲಿವುಡ್ ಚಿತ್ರ ವೀರಾನದ ಪ್ರಮುಖ ನಟಿ ಜಾಸ್ಮಿನ್ ಧುನ್ನಾ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು. ಚಿತ್ರ ಬಿಡುಗಡೆಯಾದ ನಂತರ, ಅನೇಕ ನಿರ್ಮಾಪಕರು ಅವರಿಗೆ ಬೇರೆ ಬೇರೆ ಆಫರ್ ನೀಡಲು ಮುಂದಾದರು. ಆದರೆ ಆಕೆ ಆ ಸಮಯಕ್ಕಾಗಲೇ ಕಣ್ಮರೆಯಾಗಿದರು. ಮಾಧ್ಯಮ ವರದಿಗಳ ಪ್ರಕಾರ, ಜಾಸ್ಮಿನ್ ಅವರನ್ನು ಚಿತ್ರದಲ್ಲಿ ನೋಡಿದ ನಂತರ, ದಾವೂದ್ ಆಕೆ ಬಗ್ಗೆ ಹುಚ್ಚನಾಗಿದ್ದನಂತೆ. ಅಷ್ಟೇ ಅಲ್ಲದೆ, ಫೋನ್ ಮೂಲಕ ಆಕೆಯನ್ನು ಬೆದರಿಸುತ್ತಿದ್ದನು ಎನ್ನಲಾಗಿದೆ. ಆ ಸುದ್ದಿಗಳ ನಡುವೆ, ಜಾಸ್ಮಿನ್ ಇದ್ದಕ್ಕಿದ್ದಂತೆ ಕಣ್ಮರೆಯಾದರು. ಇಂದು ಹೇಗಿದ್ದಾರೆ, ಎಲ್ಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಅನಿತಾ ಅಯೂಬ್: ಪಾಕಿಸ್ತಾನಿ ನಟಿ ಅನಿತಾ ಅಯೂಬ್ ಕೂಡ ಹಿಂದಿ ಚಿತ್ರಗಳಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅನಿತಾ ಹಿಂದಿ ಚಿತ್ರಗಳಲ್ಲಿ ಕೆಲಸ ಪಡೆಯಲು ಕಷ್ಟಪಡುತ್ತಿದ್ದಾಗ, ದಾವೂದ್ನ ಬೆಂಬಲವನ್ನು ಪಡೆದಿದ್ದಳು. ಆ ದಿನಗಳಲ್ಲಿ ಅವರ ಪ್ರೇಮ ಸಂಬಂಧದ ಸುದ್ದಿ ಮುಖ್ಯಾಂಶಗಳಲ್ಲಿತ್ತು. ಆ ಸಮಯದಲ್ಲಿ, ಅಂತಹ ಕೆಲವು ಘಟನೆಗಳು ನಡೆದ ನಂತರ ನಟಿ ಕಣ್ಮರೆಯಾದರು. ಅನಿತಾ ಇತ್ತೀಚಿನ ದಿನಗಳಲ್ಲಿ ನ್ಯೂಯಾರ್ಕ್ನಲ್ಲಿದ್ದು, ಅವರ ಮಗನೊಂದಿಗೆ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅನಿತಾ ಅಯೂಬ್ ಪಾಕಿಸ್ತಾನದ ಕರಾಚಿ ಹುಡುಗಿ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ನಂತರ ಭಾರತಕ್ಕೆ ಬಂದು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಳು. ಇಲ್ಲಿಗೆ ಬಂದ ಬಳಿಕ ದಾವೂದ್ ಜತೆ ಇರುವ ಫೋಟೋಗಳು ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ್ದಾಕೆಗೆ ಆಫರ್ಗಳು ಕಡಿಮೆಯಾಗ ತೊಡಗಿತು.
ಜನಪ್ರಿಯ ನಿರ್ಮಾಪಕ ಜಾವೇದ್ ಸಿದ್ದಿಕಿ ಅನಿತಾ ಅವರನ್ನು ತಮ್ಮ ಸಿನಿಮಾದಲ್ಲಿ ಸೇರಿಸಿಕೊಳ್ಳಲು ನಿರಾಕರಿಸಿದ್ದರು ಎಂಬ ಕಾರಣಕ್ಕೆ ದಾವೂದ್ ಇಬ್ರಾಹಿಂ ಅವರನ್ನು ಗುಂಡಿಕ್ಕಿ ಕೊಂದಿದ್ದ ಎಂದು ಕೆಲ ವರದಿಗಳು ಹೇಳುತ್ತವೆ. ಈ ವಿವಾದ ಅನಿತಾ ಅವರಿಗೂ ಮುಳುವಾಗಿದ್ದಲ್ಲದೆ, ಚಿತ್ರರಂಗದ ಬಾಗಿಲು ಸಂಪೂರ್ಣವಾಗಿ ಬಂದ್ ಆಗುವಂತೆ ಮಾಡಿತು.
ಮಹ್ವಿಶ್ ಹಯಾತ್: ಪಾಕಿಸ್ತಾನಿ ನಟಿ ಮಹ್ವಿಶ್ ಹಯಾತ್ ಕೂಡ ದಾವೂದ್ ಜೊತೆ ಪ್ರೇಮ ಸಂಬಂಧದ ಕಥೆಗಳನ್ನು ಹೊಂದಿದ್ದಾರೆ. ಮಹ್ವಿಶ್ ಒಬ್ಬ ಐಟಂ ಗರ್ಲ್ ಆಗಿದ್ದು, ದಾವೂದ್ ಆಕೆ ಬಗ್ಗೆ ಹುಚ್ಚನಾಗಿದ್ದ ಎಂದು ಹೇಳಲಾಗುತ್ತದೆ. ಆ ನಂತರ, ಮಹ್ವಿಶ್ನ ಅದೃಷ್ಟ ಹೇಗೆ ಶೈನ್ ಆಯಿತು ಎಂದರೆ, ಪಾಕಿಸ್ತಾನದ ಉನ್ನತ ನಟಿಯರ ಪಟ್ಟಿಯಲ್ಲಿ ಸೇರಿಸಲ್ಪಟ್ಟಳು. 37 ವರ್ಷದ ಮಹ್ವಿಶ್ ಇಲ್ಲಿಯವರೆಗೆ ಮದುವೆಯಾಗಿಲ್ಲ. ಟ್ರಿಬ್ಯೂನ್ಗೆ ನೀಡಿದ ಸಂದರ್ಶನದಲ್ಲಿ, ಮಹ್ವಿಶ್ ಅವರು ಮದುವೆಯ ಬಗ್ಗೆ ಗಂಭೀರವಾಗಿ ಯೋಚಿಸುತ್ತಿರುವುದಾಗಿ ಮತ್ತು ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುವುದಾಗಿ ಹೇಳಿದ್ದರು.