JNU ನಂತರ ಕೋಲ್ಕತ್ತಾದ ಈ ಕಾಲೇಜಿನಲ್ಲಿ ಶುಲ್ಕ ಹೆಚ್ಚಳ! ವಿದ್ಯಾರ್ಥಿನಿಯರ ಆಕ್ರೋಶ

ಕೋಲ್ಕತ್ತಾದ ದಕ್ಷಿಣೇಶ್ವರದಲ್ಲಿರುವ ಮಹಿಳಾ ಹಿರಾಲಾಲ್ ಮಜುಂದಾರ್ ಸ್ಮಾರಕ ಕಾಲೇಜಿನಲ್ಲಿ(Hiralal Majumdar Memorial College for Women) ಮಂಗಳವಾರ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Last Updated : Nov 20, 2019, 09:48 AM IST
JNU ನಂತರ ಕೋಲ್ಕತ್ತಾದ ಈ ಕಾಲೇಜಿನಲ್ಲಿ ಶುಲ್ಕ ಹೆಚ್ಚಳ! ವಿದ್ಯಾರ್ಥಿನಿಯರ ಆಕ್ರೋಶ title=

ಕೋಲ್ಕತಾ: ಜೆಎನ್‌ಯು(JNU)ನಲ್ಲಿ ಶುಲ್ಕ ಹೆಚ್ಚಳ ವಿರುದ್ಧ ವಿದ್ಯಾರ್ಥಿಗಳ ಆಂದೋಲನ ಮುಂದುವರೆದಿದೆ. ಏತನ್ಮಧ್ಯೆ, ಕೋಲ್ಕತ್ತಾದ ಕಾಲೇಜೊಂದರಲ್ಲಿ ಶುಲ್ಕ ಹೆಚ್ಚಳದ ಬಗ್ಗೆ ವಿದ್ಯಾರ್ಥಿನಿಯರು ಅಸಮಾಧಾನ ಹೊರಹಾಕಿದ್ದಾರೆ. 

ಮಾಹಿತಿಯ ಪ್ರಕಾರ, ಕೋಲ್ಕತ್ತಾದ ದಕ್ಷಿಣೇಶ್ವರದಲ್ಲಿರುವ ಮಹಿಳಾ ಹಿರಾಲಾಲ್ ಮಜುಂದಾರ್ ಸ್ಮಾರಕ ಕಾಲೇಜಿನಲ್ಲಿ(Hiralal Majumdar Memorial College for Women) ಮಂಗಳವಾರ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಸ್ತುಗಳನ್ನು ಧ್ವಂಸ ಮಾಡಿದರು.

ವಾಸ್ತವವಾಗಿ, ಹುಡುಗಿಯರು ಕಾಲೇಜಿನ ವಾರ್ಷಿಕ ಶುಲ್ಕ ಹೆಚ್ಚಳದ ಬಗ್ಗೆ ಪ್ರಾಂಶುಪಾಲರನ್ನು ಭೇಟಿ ಮಾಡಲು ಹೋದರು. ಬಳಿಕ ಪ್ರಾಂಶುಪಾಲರೊಂದಿಗೆ ಘರ್ಷಣೆ ಉಂಟಾದ ಕಾರಣ ಕಾಲೇಜು ಆವರಣವನ್ನು ಧ್ವಂಸ ಮಾಡಲು ಪ್ರಾರಂಭಿಸಿದರು. ಪ್ರತಿ ಮೂರು ತಿಂಗಳಿಗೊಮ್ಮೆ ಕಾಲೇಜು ಶುಲ್ಕವನ್ನು ಹೆಚ್ಚಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಕಾಲೇಜು ವಿದ್ಯಾರ್ಥಿನಿಯರ ಆರೋಪಗಳನ್ನು ಪ್ರಾಂಶುಪಾಲರು ನಿರಾಕರಿಸಿದರು. ಇಡೀ ವರ್ಷದ ಶುಲ್ಕವನ್ನು ಮೂರು ತಿಂಗಳ ಮಧ್ಯಂತರದಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಪ್ರಾಸ್ಪೆಕ್ಟಸ್‌ನಲ್ಲಿ ಉಲ್ಲೇಖಿಸಿರುವಂತೆ ಶುಲ್ಕ ವಿಧಿಸಲಾಗುತ್ತಿದೆ. ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಾಲಕಿಯರ ಆರೋಪ ಸಂಪೂರ್ಣವಾಗಿ ಸುಳ್ಳು ಎಂದು ಅವರು ತಿಳಿಸಿದ್ದಾರೆ.

ಮತ್ತೊಂದೆಡೆ, ಈ ವಿಷಯದ ಬಗ್ಗೆ ರಾಜಕೀಯವೂ ಪ್ರಾರಂಭವಾಗಿದೆ. ಈ ವಿಷಯವನ್ನು ಸಂವಾದದ ಮೂಲಕ ಬಗೆಹರಿಸಬೇಕು ಎಂದು ತೃಣಮೂಲ ಕಾಂಗ್ರೆಸ್(TMC) ಸಚಿವ ಮದನ್ ಮಿತ್ರ ಹೇಳಿದರು. ಕಾಲೇಜು ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳೊಂದಿಗೆ ಕುಳಿತು ಮಾತನಾಡುವ ಮೂಲಕ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Trending News