ಕರ್ನಾಟಕದ ನಂತರ ದೆಹಲಿಗೂ ಬಂತು ಟಿಪ್ಪು ಸುಲ್ತಾನ್ ವಿವಾದ

     

Last Updated : Jan 27, 2018, 03:35 PM IST
ಕರ್ನಾಟಕದ ನಂತರ ದೆಹಲಿಗೂ ಬಂತು ಟಿಪ್ಪು ಸುಲ್ತಾನ್ ವಿವಾದ title=

ನವದೆಹಲಿ: ಇತ್ತೀಚೆಗೆ ಕರ್ನಾಟಕದಲ್ಲಿ ಟಿಪ್ಪುಸುಲ್ತಾನ್ ಕನ್ನಡದ ಹೆಮ್ಮೆ ಎಂದು ಟಿಪ್ಪು ಸುಲ್ತಾನ್ ಜಯಂತಿಯನ್ನು ಸಿದ್ದರಾಮಯ್ಯ ಸರ್ಕಾರ ಆಡಳಿತ ಬಂದಾಗಿನಿಂದ ಆಚರಿಸುವ ಪ್ರಕಿಯೆಗೆ ಚಾಲನೆ ನೀಡಿತ್ತು. ಆದರೆ ಬಿಜೆಪಿಯು ಸರ್ಕಾರದ ಈ ನಡೆಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಆ ಮೂಲಕ ಈ ವಿಷಯ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದನ್ನು ನಾವು ಗಮನಿಸಬಹುದು. 

ಮತ್ತೆ ಈ ವಿವಾದ ಈಗ ರಾಷ್ಟ್ರದ ರಾಜಧಾನಿ ದೆಹಲಿಗೆ ಬಂದು ತಲುಪಿದೆ. ಕಾರಣವಿಷ್ಟೇ ಗಣರಾಜ್ಯೋತ್ಸವದ ದಿನದಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ವಾತಂತ್ರ ಹೋರಾಟಗಾರರ ಭಾವಚಿತ್ರಗಳ ಅನಾವರಣಕ್ಕೆ ಚಾಲನೆ ನೀಡಿದ್ದರು.ಇದೆ ಸಂದರ್ಭದಲ್ಲಿ ಭಗತ್ ಸಿಂಗ್, ಬಿರ್ಸಾ ಮುಂಡಾ, ಸುಭಾಷ ಚಂದ್ರ ಬೋಸ್, ಅಷ್ಪಖುಲ್ಲಾ ಖಾನ್ ರವರ ಜೊತೆಗೆ ಟಿಪ್ಪು ಸುಲ್ತಾನ್ ರವರ ಭಾವಚಿತ್ರವನ್ನು ಅವರು ದೆಹಲಿ ವಿಧಾನಸಭೆಯಲ್ಲಿ ಅನಾವರಣಗೊಳಿಸಿದ್ದಾರೆ.

ಸರ್ಕಾರದ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಎಎನ್ಐ ಗೆ ಪ್ರತಿಕ್ರಯಿಸಿರುವ ಬಿಜೆಪಿ ಶಾಸಕ ಓಂಪ್ರಕಾಶ್ ಶರ್ಮಾ "ಭಗತ್ ಸಿಂಗ್ ನಮ್ಮ ರಾಷ್ಟ್ರದ ಹೆಮ್ಮೆ,ಆದರೆ ಟಿಪ್ಪು ಸುಲ್ತಾನ್ ನಂತಹ ವಿವಾಧಾತ್ಮಕ ವ್ಯಕ್ತಿಯ ಭಾವಚಿತ್ರವನ್ನು ಹಾಕಿದರೆ ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತದೆ, ಅಲ್ಲದೆ ಅದು ದೇಶದ ಹಿತಾಸಕ್ತಿಗೂ ಕೂಡ ಒಳ್ಳೆಯದಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ. 

 

Trending News