)
ಬೆಂಗಳೂರು: ದೊಡ್ಡ ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ 20 ಕ್ಕೂ ಹೆಚ್ಚು ಬಾಂಬ್ ಬೆದರಿಕೆಗಳನ್ನು ಕಳುಹಿಸಿದ್ದಾರೆ. ಅವರು ತಾವೇ ಏರ್ ಇಂಡಿಯಾ ವಿಮಾನವನ್ನು ಅಪಘಾತಗೊಳಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಚೆನ್ನೈನ ಪ್ರಮುಖ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಈ ಮಾತುಗಳು ಜನರಿಗೆ ಆಶ್ಚರ್ಯ ಮೂಡಿಸಿದೆ.
ಗುಜರಾತ್ನ ಅಹಮದಾಬಾದ್ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನದ ದುರಂತ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿರುವ ಸಮಯದಲ್ಲಿ ಇಂಥದ್ದೊಂದು ಹೇಳಿಕೆ ಜನರಲ್ಲಿ ಆಘಾತ ತಂದಿದೆ. ವಿಮಾನ ಪತನಗೊಳಿಸಿದ್ದು ನಾನೇ ಎಂದು ಇ-ಮೇಲ್ ಕಳುಹಿಸಿದ್ದ ಮಹಿಳಾ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಹಮದಾಬಾದ್ ಪೊಲೀಸರು ಸೋಮವಾರ ತಮಿಳುನಾಡಿನ ಚೆನ್ನೈನಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರ ಹಿರಿಯ ಸಲಹೆಗಾರ್ತಿ ರೆನೆ ಜೋಶಿಲ್ಡಾ ಅವರನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮಹಿಳಾ ಟೆಕ್ಕಿ ಆಗಿರುವ ರೆನೆ ಜೋಶಿಲ್ಡಾ ರೊಬೊಟಿಕ್ಸ್ನಲ್ಲಿ ತರಬೇತಿ ಪಡೆದು ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ನರೇಂದ್ರ ಮೋದಿ ಕ್ರೀಡಾಂಗಣ, ಬಿಜೆ ವೈದ್ಯಕೀಯ ಕಾಲೇಜು ಮತ್ತು ಅಹಮದಾಬಾದ್ನ ಶಾಲೆಗಳು ಸೇರಿದಂತೆ ಹಲವು ಉನ್ನತ ಸ್ಥಳಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ ಆರೋಪ ಈ ಮಹಿಳಾ ಟೆಕ್ಕಿ ಮೇಲಿದೆ. ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತದ ಬಳಿಕ ಬಿಜೆ ವೈದ್ಯಕೀಯ ಕಾಲೇಜಿಗೆ ಬಂದಿದ್ದ ಮತ್ತೊಂದು ಬೆದರಿಕೆ ಇಮೇಲ್ ನಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿತ್ತು.
ರೆನೆ ಜೋಶಿಲ್ಡಾ ಅವರು ದಿವಿಜ್ ಪ್ರಭಾಕರ್ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದರು. ಆತನನ್ನು ಮದುವೆಯಾಗಲು ಬಯಸಿದ್ದರಂತೆ. ಆದರೆ ಆ ಹುಡುಗ ಇವರ ಜೊತೆ ಮದುವೆಯನ್ನು ನಿರಾಕರಿಸಿದ್ದ. ದಿವಿಜ್ ಈ ವರ್ಷದ ಆರಂಭದಲ್ಲಿ ಬೇರೆ ಯುವತಿಯೊಂದಿಗೆ ಮದುವೆ ಆದರಂತೆ. ಇದರಿಂದ ಮನನೊಂದಿರುವ ರೆನೆ ಜೋಶಿಲ್ಡಾ ಆತನ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ ರಚಿಸಿ ಅದರಿಂದ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ವರದಿಯಾಗಿದೆ.
ತನ್ನ ಮಾಜಿ ಪ್ರಿಯತಮನ ಮೇಲೆ "ಸೇಡು ತೀರಿಸಿಕೊಳ್ಳಲು" ಈ ಮಹಿಳಾ ಟೆಕ್ಕಿ ಇಂಥ ಕೆಲಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರೊಬೊಟಿಕ್ಸ್ನಲ್ಲಿ ತರಬೇತಿ ಪಡೆದ ಜೋಶಿಲ್ಡಾ, ಹಲವಾರು ನಕಲಿ ಇಮೇಲ್ ವಿಳಾಸಗಳನ್ನು ಸೃಷ್ಟಿಸಿದರು. ರಾಜ್ಯಗಳಲ್ಲಿ ಹಲವಾರು ವಂಚನೆ ಇಮೇಲ್ಗಳನ್ನು ಕಳುಹಿಸಲು ಇದನ್ನು ಬಳಸಿದರು. ಬೆದರಿಕೆಗಳನ್ನು ಕಳುಹಿಸುವಾಗ ತನ್ನ ಗುರುತನ್ನು ಮರೆಮಾಡಲು ವರ್ಚುವಲ್ ಖಾಸಗಿ ನೆಟ್ವರ್ಕ್ಗಳು (ವಿಪಿಎನ್ಗಳು) ಮತ್ತು ಡಾರ್ಕ್ ವೆಬ್ ಅನ್ನು ಸಹ ಬಳಸಿದ್ದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.