ಗುಡ್ ನ್ಯೂಸ್; Airtel, Vodafone Idea ದಿಂದ ಮೂರು ಹೊಸ ಪ್ರಿಪೇಯ್ಡ್ ಪ್ಲಾನ್!

Airtel and Vodafone: ಇತ್ತೀಚೆಗೆ, ಎರಡೂ ಕಂಪನಿಗಳು ಇತರ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಧ್ವನಿ ಕರೆ ಮಿತಿಯನ್ನು (FUP limit) ಕೊನೆಗೊಳಿಸಿವೆ.

Updated: Dec 9, 2019 , 03:08 PM IST
ಗುಡ್ ನ್ಯೂಸ್; Airtel, Vodafone Idea ದಿಂದ ಮೂರು ಹೊಸ ಪ್ರಿಪೇಯ್ಡ್ ಪ್ಲಾನ್!

ಬೆಂಗಳೂರು: ಈ ತಿಂಗಳ ಮೊದಲ ವಾರದಿಂದ ದುಬಾರಿ ಸುಂಕ ಹೇರಿರುವ ಟೆಲಿಕಾಂ ಕಂಪನಿಗಳು ಇದೀಗ ಹೊಸ ಪ್ರಿಪೇಯ್ಡ್ ಪ್ಲಾನ್ ಗಳನ್ನು ಪ್ರಾರಂಭಿಸಿವೆ. ಹೌದು, ಏರ್ಟೆಲ್(Airtel) ಮತ್ತು ವೊಡಾಫೋನ್(Vodafone) ಐಡಿಯಾ(Idea) ಮೂರು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿವೆ. ಇದು 56 ದಿನಗಳವರೆಗೆ ಮಾನ್ಯತೆಯನ್ನು ಹೊಂದಿರುತ್ತದೆ ಮತ್ತು ಪ್ರತಿದಿನ ಕನಿಷ್ಠ 1GB ಡೇಟಾವನ್ನು ಪಡೆಯುತ್ತದೆ. ಟೆಲಿಕಾಂ ಟಾಕ್ ಸುದ್ದಿಯ ಪ್ರಕಾರ, ಈ ಮೂರು ಯೋಜನೆಗಳು - 219, 399 ಮತ್ತು 449 ರೂಪಾಯಿಗಳು. ಇತ್ತೀಚೆಗೆ, ಎರಡೂ ಕಂಪನಿಗಳು ಇತರ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಧ್ವನಿ ಕರೆ ಮಿತಿಯನ್ನು (FUP limit) ಕೊನೆಗೊಳಿಸಿವೆ.

ಯೋಜನೆಯಲ್ಲಿ ಏನಿದೆ?
ಎರಡೂ ಕಂಪನಿಗಳ ಸುಂಕಗಳು ದುಬಾರಿಯಾಗುವುದಕ್ಕಿಂತ ಮೊದಲು 169 ರೂ.ಗಳ  ಯೋಜನೆಯಲ್ಲಿ ಇದ್ದ ಪ್ರಯೋಜನಗಳು ಇದೀಗ 219 ರೂ. ಮೌಲ್ಯದ ಯೋಜನೆಯಲ್ಲಿ ಲಭ್ಯವಿದೆ. ಅಂದರೆ, ಈ ಯೋಜನೆಯಲ್ಲಿ 50 ರೂಪಾಯಿಗಳ ಹೆಚ್ಚಳ ಮಾಡಲಾಗಿದೆ. ಅಂತೆಯೇ, 399 ಮತ್ತು 449 ರೂಗಳ ಯೋಜನೆಗಳೆರಡೂ ಕಂಪನಿಗಳ ಹೊಸ ಯೋಜನೆಗಳಾಗಿವೆ. ಇವುಗಳಲ್ಲಿ 56 ದಿನಗಳ ಮಾನ್ಯತೆ ಇರುತ್ತದೆ. ಏರ್ಟೆಲ್ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ವೊಡಾಫೋನ್ ಐಡಿಯಾ ಕೂಡ ಇದೇ ರೀತಿಯ ಯೋಜನೆಯನ್ನು ನೀಡಿದೆ.

ಏರ್‌ಟೆಲ್‌ನ 219 ರೂ. ಯೋಜನೆಯಲ್ಲಿ 28 ದಿನಗಳ ಸಿಂಧುತ್ವ, ಪ್ರತಿದಿನ 1 GB ಡೇಟಾ, ಪ್ರತಿದಿನ 100 ಎಸ್‌ಎಂಎಸ್, ಉಚಿತ ಹಲೋ ಟ್ಯೂನ್‌ಗಳು, ಅನಿಯಮಿತ ವಿಂಕ್ ಸಂಗೀತವಿದೆ. ಏರ್‌ಟೆಲ್‌ನ 399 ಮತ್ತು 449 ರೂಪಾಯಿಗಳ ಯೋಜನೆಯು 56 ದಿನಗಳ ಸಿಂಧುತ್ವ ಹೊಂದಿದ್ದು, ಕ್ರಮವಾಗಿ ಪ್ರತಿದಿನ 1.5 GB ಡೇಟಾ ಮತ್ತು 2 GB ಡೇಟಾ, 100 ಎಸ್‌ಎಂಎಸ್ ಮತ್ತು 90 ಎಸ್‌ಎಂಎಸ್ ಸೌಲಭ್ಯವನ್ನು ಹೊಂದಿದೆ. ಅಲ್ಲದೆ, ಉಚಿತ ಹಾಲೋ ಟ್ಯೂನ್‌ಗಳು, ಅನಿಯಮಿತ ವಿಂಕ್ ಸಂಗೀತವೂ ಲಭ್ಯವಿರುತ್ತದೆ. ವೊಡಾಫೋನ್ ಸಹ ಇದೇ ರೀತಿಯ ಯೋಜನೆಗಳನ್ನು ಪರಿಚಯಿಸಿದೆ.