ಅಜಿತ್ ಪವಾರ್ ಗೆ ಮತ್ತೊಮ್ಮೆ'ಮಹಾ' ಡಿಸಿಎಂ ಪಟ್ಟ..!

ಮಹಾರಾಷ್ಟದಲ್ಲಿ ಹಲವು ರಾಜಕೀಯ ಬೆಳವಣಿಗೆ ನಂತರ ಬಿಜೆಪಿ ಜೊತೆ ಸೇರಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅಜಿತ್ ಪವಾರ್ ಸೂಕ್ತ ಸಂಖ್ಯಾಬಲದ ಕೊರತೆಯಿಂದಾಗಿ 78 ಗಂಟೆಗಳ ನಂತರ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು. ಈಗ ಉದ್ಧವ್ ಠಾಕ್ರೆ ನೇತೃತ್ವದ ನೂತನ ಸರ್ಕಾರದಲ್ಲಿಯೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Last Updated : Nov 28, 2019, 07:41 PM IST
 ಅಜಿತ್ ಪವಾರ್ ಗೆ ಮತ್ತೊಮ್ಮೆ'ಮಹಾ' ಡಿಸಿಎಂ ಪಟ್ಟ..! title=

ನವದೆಹಲಿ: ಮಹಾರಾಷ್ಟದಲ್ಲಿ ಹಲವು ರಾಜಕೀಯ ಬೆಳವಣಿಗೆ ನಂತರ ಬಿಜೆಪಿ ಜೊತೆ ಸೇರಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅಜಿತ್ ಪವಾರ್ ಸೂಕ್ತ ಸಂಖ್ಯಾಬಲದ ಕೊರತೆಯಿಂದಾಗಿ 78 ಗಂಟೆಗಳ ನಂತರ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು. ಈಗ ಉದ್ಧವ್ ಠಾಕ್ರೆ ನೇತೃತ್ವದ ನೂತನ ಸರ್ಕಾರದಲ್ಲಿಯೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

'ನಾನು ಇಂದು ಪ್ರಮಾಣವಚನ ಸ್ವೀಕರಿಸುವುದಿಲ್ಲ. ಇಂದು ಮೂರು ಪಕ್ಷದಿಂದ ಆರು ನಾಯಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ' ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಜಯಂತ್ ಪಾಟೀಲ್ ಮತ್ತು ಪ್ರಫುಲ್ ಪಟೇಲ್ ಸೇರಿದಂತೆ ಇತರ ಪಕ್ಷದ ಮುಖಂಡರೊಂದಿಗಿನ ಸಭೆಯ ನಂತರ ಅಜಿತ್ ಪವಾರ್ ಹೇಳಿದರು. ಅವರು ಮತ್ತೆ ಉಪ ಮುಖ್ಯಮಂತ್ರಿಯಾಗುತ್ತಾರೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು "ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಈ ಬಗ್ಗೆ ಪಕ್ಷವು ನಿರ್ಧರಿಸುತ್ತದೆ ಎಂದು ಹೇಳಿದರು.

ಕೇವಲ ಎರಡು ದಿನಗಳ ಹಿಂದಷ್ಟೇ ಅಜಿತ್ ಪವಾರ್ ಬಿಜೆಪಿ ನೇತೃತ್ವದ ದೇವೇಂದ್ರ ಫಡ್ನವೀಸ್ ಸರ್ಕಾರದಲ್ಲಿನ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಬಹುಮತ ತಲುಪಲು ವಿಫಲವಾದ ನಂತರ ಸರ್ಕಾರ 80 ಗಂಟೆಗಳಲ್ಲಿ ಕುಸಿದಿತ್ತು.  

Trending News