ಮುಂಬೈ:ಗಲ್ಲಾಪೆಟ್ಟಿಗೆಯಲ್ಲಿ ಸತತವಾಗಿ ಸೂಪರ್‌ಹಿಟ್ ಚಿತ್ರಗಳನ್ನು ನೀಡುತ್ತಿರುವ ಅಕ್ಷಯ್ ಕುಮಾರ್ ಈಗ ಬಾಲಿವುಡ್‌ನ ಅತ್ಯಂತ ದುಬಾರಿ ನಟನಾಗಿ ಹೊರಹೊಮ್ಮಿದ್ದಾನೆ. ವರದಿಗಳ ಪ್ರಕಾರ, ಅವರು ತಮ್ಮ ಮುಂಬರುವ ಚಿತ್ರಕ್ಕಾಗಿ 120 ಕೋಟಿ ರೂ.ಗಳ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಇದು ನಿರ್ಮಾಪಕರಿಗೆ ಆಶ್ಚರ್ಯಕರ ಸಂಗತಿಯಾಗಿದೆ. ಮನರಂಜನಾ ವೆಬ್‌ಸೈಟ್‌ ಪ್ರಕಟಿಸಿರುವ ಮಾಹಿತಿ ಪ್ರಕಾರ, ಅವರ ಈ ಚಿತ್ರ 'ತನು ವೆಡ್ಸ್ ಮನು' ಖ್ಯಾತಿ ಆನಂದ್ ಎಲ್. ರೈ ನಿರ್ದೇಶನದಲ್ಲಿ ಸಿದ್ಧವಾಗಲಿದೆ ಎನ್ನಲಾಗಿದೆ. ಆದರೆ, ಇದುವರೆಗೆ ಅಕ್ಷಯ್ ಆಗಲಿ ಅಥವಾ ಅವರ ತಂಡವಾಗಲಿ ಅಥವಾ ಚಿತ್ರ ನಿರ್ಮಾಪಕರಿಂದ ಈ ಚಿತ್ರದ ಕುರಿತು ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ ಮತ್ತು ಅವರ ಶುಲ್ಕದ ಘೋಷಣೆ ಕೂಡ ಆಗಿಲ್ಲ.


COMMERCIAL BREAK
SCROLL TO CONTINUE READING

ಅಕ್ಷಯ್ ಪಡೆಯುವ ಸಂಭಾವನೆಯ ಲೆಕ್ಕಾಚಾರ ಈ ರೀತಿ ಇರುತ್ತದೆ
ಅಕ್ಷಯ್ ಯಾವುದೇ ಚಿತ್ರಕ್ಕೆ ಒಂದೇ ಬಾರಿಗೆ ಸಂಭಾವನೆ ಪಡೆಯುವುದಿಲ್ಲ. ಅವರು ತಮ್ಮ ಸಂಭಾವನೆಯನ್ನು  ವಿವಿಧ ಹಂತಗಳಲ್ಲಿ ಪಡೆಯುತ್ತಾರೆ. ಮಾರುಕಟ್ಟೆಯ ಪಂಡಿತರ ಪ್ರಕಾರ, ಕಳೆದ ವರ್ಷದವರೆಗೂ ಅಕ್ಷಯ್ ತಾವು  ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ ಚಿತ್ರಗಳಿಗಾಗಿ 10-15 ಕೋಟಿ ರೂ. ಶುಲ್ಕ ಪಡೆಯುತ್ತಿದ್ದರು. ಇದೇ ವೇಳೆ ಅವರು ನಿರ್ಮಾಪಕರಾಗಿಲ್ಲದ ಚಿತ್ರಗಳಿಗೆ ಅವರು 40-50 ಕೋಟಿ ರೂ. ಶುಲ್ಕವನ್ನು ಪಡೆಯುತ್ತಿದ್ದರು. ಆದರೆ ಎರಡೂ ಸಂದರ್ಭಗಳಲ್ಲಿ ಒಂದು ವಿಷಯ ಸಾಮಾನ್ಯವಾಗಿರುತ್ತದೆ. ಅದೇನೆಂದರೆ ಚಿತ್ರದಿಂದ ಬಂದ ಲಾಭದಲ್ಲಿ ಪಾಲು. ಇದರಲ್ಲಿ ಅಕ್ಷಯ್ ಅವರ ಪಾಲು ಶೇ 60-80ರಷ್ಟು ಇರುತ್ತದೆ.


ಹೊಸ ವರ್ಷದ ಆರಂಭದಿಂದ  ಅಕ್ಷಯ್ ತಮ್ಮ ಸಂಭಾವನೆಯಲ್ಲಿ ಏರಿಕೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಚಿತ್ರವೊಂದಕ್ಕೆ 120 ಕೋಟಿ ರೂ. ಸಂಭಾವನೆ ಕೇಳುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ.


ಕಳೆದ ವರ್ಷ ಅವರು ಅಭಿನಯಿಸಿದ ನಾಲ್ಕೂ ಚಿತ್ರಗಳು ಸೂಪರ್ ಹಿಟ್ ಚಿತ್ರಗಳಾಗಿದ್ದವು
2019ರಲ್ಲಿ ಅಕ್ಷಯ್ ಅವರ ನಾಲ್ಕು ಚಿತ್ರಗಳು (ಕೇಸರಿ, ಮಿಷನ್ ಮಂಗಲ್, ಹೌಸ್‌ಫುಲ್ 4 ಮತ್ತು ಗುಡ್ ನ್ಯೂಸ್) ಬಿಡುಗಡೆಯಾಗಿದ್ದವು ಮತ್ತು ಎಲ್ಲಾ ನಾಲ್ಕು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಆಗಿ ಹೊರಹೊಮ್ಮಿದ್ದವು. ನಾಲ್ಕು ಚಿತ್ರಗಳು ಕ್ರಮವಾಗಿ ಸುಮಾರು 154. 41 ಕೋಟಿ, 202.98 ಕೋಟಿ, 194.60 ಕೋಟಿ ಮತ್ತು 201.14 ಕೋಟಿ ರೂ. ಗಳಿಕೆ ಮಾಡಿದ್ದವು. ಒಟ್ಟಾರೆ ಹೇಳುವುದಾದರೆ  ಅಕ್ಷಯ್ ಅಭಿನಯದ ಈ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 753.13 ಕೋಟಿ ರೂ.ಗಳ ವ್ಯವಹಾರವನ್ನು ನಡೆಸಿದ್ದವು. ಇದು ಇದು ಯಾವುದೇ ಒಬ್ಬ ಭಾರತೀಯ ನಟನ ಅತಿ ದೊಡ್ಡ ಗಳಿಕೆಯಲ್ಲಿ ಒಂದಾಗಿದೆ.


2020ರಲ್ಲಿಯೂ ಕೂಡ ಒಟ್ಟು ನಾಲ್ಕು ಚಿತ್ರಗಳಲ್ಲಿ ನಟಿಸಲಿದ್ದಾರೆ ಅಕ್ಷಯ್
2020 ರಲ್ಲಿಯೂ ಕೂಡ ಅಕ್ಷಯ್ ಅವರ ನಾಲ್ಕು ಚಿತ್ರಗಳು (ಸೂರ್ಯವಂಶಿ, ಲಕ್ಷ್ಮಿ ಬಾಂಬ್, ಪೃಥ್ವಿರಾಜ್ ಚೌಹಾನ್ ಮತ್ತು ಬಚ್ಚನ್ ಪಾಂಡೆ) ಬಿಡುಗಡೆಯಾಗಲಿವೆ. ಈ ನಾಲ್ಕೂ ಚಿತ್ರಗಳೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಭಾರಿ ಗಳಿಕೆ ಮಾಡಲಿವೆ ಎಂದು ನಿರೀಕ್ಷಿಸಲಾಗುತ್ತಿದೆ.