ಆಕಾಶ್ ಕ್ಷಿಪಣಿ ಉಡಾವಣೆ ಯಶಸ್ವಿ
ನವದೆಹಲಿ : ದೇಶೀಯವಾಗಿ ನಿರ್ಮಿಸಲಾಗಿರುವ ಭೂ ಮೇಲ್ಮೈನಿಂದ ಆಕಾಶಕ್ಕೆ ಚಿಮ್ಮುವ ಸೂಪರ್ ಸಾನಿಕ್ ಆಕಾಶ್ ಕ್ಷಿಪಣಿ ಉಡಾವಣೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಮಂಗಳವಾರ ಒಡಿಶಾದ ಚಾಂದಿಪುರ್ನಲ್ಲಿರುವ ಪರೀಕ್ಷಾ ವಲಯದಿಂದ ಮಂಗಳವಾರ ಮಧ್ಯಾಹ್ನ 1.40ರಲ್ಲಿ ಯಶಸ್ವಿಯಾಗಿ ಕ್ಷಿಪಣಿಯ ಪರೀಕ್ಷೆ ನಡೆಸಲಾಯಿತು. ಆಕಾಶ್ ಕ್ಷಿಪಣಿಯಲ್ಲಿ ತರಂಗಾಂತರಗಳನ್ನು ಸ್ವೀಕರಿಸುವ ತಂತ್ರಜ್ಞಾನವನ್ನು ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ.
ಉಡಾವಣೆ ಕಾರ್ಯಾಚರಣೆಗಳನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ರಕ್ಷಣಾ ಸಚಿವ ಜಿ.ಸತೀಶ್ ರೆಡ್ಡಿ, ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗಾಲಯದ ನಿರ್ದೇಶಕ (ಡಿಆರ್ಡಿಎಲ್), ಎಂ.ಎಸ್.ಆರ್. ಪ್ರಸಾದ್, ಕಾರ್ಯಕ್ರಮ ನಿರ್ದೇಶಕ ಜಿ. ಚಂದ್ರ ಮೌಳಿ, ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿರ್ದೇಶಕ ಬಿ.ಕೆ. ದಾಸ್ ಮತ್ತು ಇತರ ಉನ್ನತ DRDO ವಿಜ್ಞಾನಿಗಳು ಈ ಕಾರ್ಯಕ್ಕೆ ಸಾಕ್ಷಿಯಾದರು.
ಆಕಾಶ್ ಕ್ಷಿಪಣಿಯನ್ನು ಶೀಘ್ರದಲ್ಲೇ ಸೇನೆಗೆ ಸೇರ್ಪಡೆ ಮಾಡಲಾಗುವುದು. ಈ ಕ್ಷಿಪಣಿಯ ಯಶಸ್ವಿ ಪರೀಕ್ಷೆಯಿಂದ ಭಾರತ ಯಾವುದೇ ವಿಧದ ಭೂ ಮೇಲ್ಮೈನಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯನ್ನು ನಿರ್ಮಿಸಲು ಸಮರ್ಥವಾಗಿದೆ ಎಂಬುದು ಸಾಬೀತಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.