close

News WrapGet Handpicked Stories from our editors directly to your mailbox

ಅಜಂಗಢದಲ್ಲಿ ಅಖಿಲೇಶ್ ಯಾದವ್ ನಾಮಪತ್ರ ಸಲ್ಲಿಕೆ

ಉತ್ತರಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ 37 ಸ್ಥಾನಗಳಿಗೆ, ಬಹುಜನ ಸಮಾಜ ಪಕ್ಷ 38 ಸ್ಥಾನಗಳಿಗೆ ಹಾಗೂ ಆರ್ ಎಲ್ ಡಿ ಪಕ್ಷ 3 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ.  

Updated: Apr 18, 2019 , 07:14 PM IST
ಅಜಂಗಢದಲ್ಲಿ ಅಖಿಲೇಶ್ ಯಾದವ್ ನಾಮಪತ್ರ ಸಲ್ಲಿಕೆ
Pic Courtesy: ANI

ಅಜಂಗಢ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅಜಂಗಢ ಲೋಕಸಭಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಸಿದರು. ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಮತ್ತು ಚಂದ್ ಮಿಶ್ರಾ ಅವರು ಅಖಿಲೇಶ್ ಗೆ ಸಾಥ್ ನೀಡಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷೆರದೂ ಈ ಕ್ಷೇತ್ರದ ಅಭಿವೃದ್ಧಿಗೆ ಜಂಟಿಯಾಗಿ ಶ್ರಮಿಸಿವೆ. ಹಾಗೆಯೇ ಮಹಾಘಟಬಂಧನ್ ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲಿದೆ ಎಂದರು. ಅಲ್ಲದೆ, ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಏನು ಕೆಲಸ ಮಾಡಿದೆ ಹಾಗೂ ರಾಜ್ಯದಲ್ಲಿ 2 ವರ್ಷಗಳ ಆಡಳಿತಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇನು ಎಂಬುದನ್ನು ಬಹಿರಂಗಪಡಿಸಲಿ ಎಂದು ಅಖಿಲೇಶ್ ಸವಾಲು ಹಾಕಿದರು.

ಉತ್ತರಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ಎಸ್ಪಿ, ಬಿಎಸ್ಪಿ ಮತ್ತು ಆರ್ ಎಲ್ಡಿ ಪಕ್ಷಗಳು ಮೈತ್ರಿಯಾಗಿ ಸ್ಪರ್ಧಿಸುತ್ತಿದೆ. ಉತ್ತರಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ 37 ಸ್ಥಾನಗಳಿಗೆ, ಬಹುಜನ ಸಮಾಜ ಪಕ್ಷ 38 ಸ್ಥಾನಗಳಿಗೆ ಹಾಗೂ ಆರ್ ಎಲ್ ಡಿ ಪಕ್ಷ 3 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ.