ದೆಹಲಿ ದಂಗೆ; ಮೆಟ್ರೋ ಸವಾರರಿಗೆ ಮಹತ್ವದ ಮಾಹಿತಿ

ದೆಹಲಿಯಲ್ಲಿ ಮಂಗಳವಾರ ಸಂಜೆ ಗಲಭೆ ಸಂಭವಿಸಿದ ನಂತರ, ಭದ್ರತೆಯ ಕಾರಣ ಸೂಕ್ಷ್ಮ ಸ್ಥಳಗಳ ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಯಿತು.

Updated: Feb 26, 2020 , 11:04 AM IST
ದೆಹಲಿ ದಂಗೆ; ಮೆಟ್ರೋ ಸವಾರರಿಗೆ ಮಹತ್ವದ ಮಾಹಿತಿ

ನವದೆಹಲಿ: ದೆಹಲಿಯ ಎಲ್ಲಾ ಮೆಟ್ರೋ ನಿಲ್ದಾಣಗಳ (Delhi Metro) ಗೇಟ್‌ಗಳನ್ನು ತೆರೆಯಲಾಗಿದ್ದು ದೆಹಲಿಯಲ್ಲಿ ಮೆಟ್ರೋವನ್ನೇ ಆಶ್ರಯಿಸಿರುವ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಈ ಮಾಹಿತಿಯನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯೊಂದಿಗೆ ಹಂಚಿಕೊಂಡಿದೆ. ವಾಸ್ತವವಾಗಿ, ನಿನ್ನೆ ದೆಹಲಿಯಲ್ಲಿ ನಡೆದ ಗಲಭೆಯ ನಂತರ ಕೆಲವು ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಯಿತು.

ದೆಹಲಿಯಲ್ಲಿ ಮಂಗಳವಾರ ಸಂಜೆ ಗಲಭೆ ಸಂಭವಿಸಿದ ನಂತರ, ಭದ್ರತೆಯ ಕಾರಣ ಸೂಕ್ಷ್ಮ ಸ್ಥಳಗಳ ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಯಿತು. ದೆಹಲಿಯ ಜಫರಾಬಾದ್, ಮೌಜ್ಪುರ್-ಬಾಬರ್ಪುರ್, ಗೋಕುಲ್ಪುರಿ, ಜೊಹ್ರಿ ಎನ್ಕ್ಲೇವ್ ಮತ್ತು ಶಿವ ವಿಹಾರ್ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿನ್ನೆ ಸಂಜೆಯಿಂದ ಸಾರ್ವಜನಿಕರಿಗೆ ಮುಚ್ಚಲಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ದೆಹಲಿ ಪೊಲೀಸರು ಅನೇಕ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಿದರೆ, ದೆಹಲಿಯ ಹೆಚ್ಚಿನ ಪ್ರದೇಶಗಳಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ.

ಇಂದು ಪರಿಸ್ಥಿತಿ ತಕ್ಕ ಮಟ್ಟಿಗೆ ತಹಬದಿಗೆ ಬಂದ ಹಿನ್ನೆಲೆಯಲ್ಲಿ ಎಲ್ಲಾ ಮೆಟ್ರೋ ನಿಲ್ದಾಣಗಳನ್ನೂ ತೆರೆಯಲಾಗಿದೆ. ಇನ್ನು ದೆಹಲಿ ಮೆಟ್ರೋ ರೈಲು ನಿಗಮವು ಭದ್ರತೆಗೆ ಸಂಬಂಧಿಸಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದೆ.