ಆನ್ಲೈನ್ ನಲ್ಲಿ ಔಷಧಿಗಳ ಮಾರಾಟಕ್ಕೆ Amazon ನಿಂದ Pharmacy ಲಾಂಚ್, ಬೆಂಗಳೂರಿನಿಂದ ಸೇವೆ ಆರಂಭ

ದೇಶಾದ್ಯಂತ ಆನ್ಲೈನ್ ಔಷಧ ಮಾರಾಟದಲ್ಲಿ ವ್ಯಾಪಕ ಹೆಚ್ಚಳವಾದ ಹಿನ್ನೆಲೆ ಕಂಪನಿ ಇಟ್ಟಿರುವ ಈ ಹೆಜ್ಜೆ ತುಂಬಾ ಮಹತ್ವಪೂರ್ಣ ಎಂದೇ ಭಾವಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕೊರೊನಾ ವೈರಸ್ ಮಹಾಮಾರಿಯ ಕಾರಣ ಜನರು ಮಾತುಕಟ್ಟೆಗೆ ಭೇಟಿ ನೀಡುವುದರಿಂದ ಹಿಂಜರಿಯುತ್ತಿದ್ದಾರೆ ಹಾಗೂ ನಿಯಮಿತ ಔಷಧಿಗಳ ಖರೀದಿಗಾಗಿ ಆನ್ಲೈನ್ ನಲ್ಲಿ ಔಷಧಿಗಳನ್ನು ಖರೀದಿಸುತ್ತಿದ್ದಾರೆ.

Updated: Aug 14, 2020 , 06:05 PM IST
ಆನ್ಲೈನ್ ನಲ್ಲಿ ಔಷಧಿಗಳ ಮಾರಾಟಕ್ಕೆ Amazon ನಿಂದ Pharmacy ಲಾಂಚ್, ಬೆಂಗಳೂರಿನಿಂದ ಸೇವೆ ಆರಂಭ

ನವದೆಹಲಿ: ಆನ್ಲೈನ್ ರಿಟೇಲ್ ಮಾರುಕಟ್ಟೆಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅಮೇರಿಕಾ ಮೂಲದ ಕಂಪನಿ ಅಮೆಜಾನ್(Amazon) ಇದೀಗ ಭಾರತದಲ್ಲಿ ಆನ್ಲೈನ್ ಔಷಧಿಗಳ ಮಾರಾಟ ಕೂಡ ನಡೆಸಲಿದೆ. ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಕಂಪನಿ ಮೊದಲಿಗೆ ಈ ಸೇವೆಯನ್ನು ಆರಂಭಿಸಲಿದೆ. ಆಗಸ್ಟ್ 13 ರಂದು ಕಂಪನಿ ಈ ಕುರಿತು ಘೋಷಣೆ ಮಾಡಿದೆ.

ಬೆಂಗಳೂರು ಬಳಿಕ ದೇಶದ ಇತರೆ ನಗರಗಳಲ್ಲಿ ಶುರುವಾಗಲಿದೆ ಈ ಸೇವೆ
ವರದಿಗಳ ಪ್ರಕಾರ ಕಂಪನಿ ಈ ಕುರಿತು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ 'ಅಮೆಜಾನ್ ಫಾರ್ಮಸಿ'ಯ ಘೋಷಣೆ ಮಾಡಿದೆ. ಇದರ ಅಡಿ ಕಂಪನಿ ಪ್ರಿಸ್ಕ್ರಿಪ್ಶನ್ ಆಧಾರಿತ ಹಾಗೂ ಓವರ್ ದಿ ಕೌಂಟರ್ ಔಷಧಿಗಳು, ಆರೋಗ್ಯ ಉಪಕರಣಗಳು ಹಾಗೂ ಭಾರತೀಯ ಹರ್ಬಲ್ ಔಷಧಿಗಳ ಮಾರಾಟ ಮಾಡಲಿದೆ.

ಪ್ರಸ್ತುತ ಕಂಪನಿ ಬೆಂಗಳೂರಿನಲ್ಲಿ ಮಾತ್ರ ತನ್ನ ಈ ಸೇವೆ ಆರಂಭ್ಸಲಿದೆ. ಇದಾದ ಬಳಿಕ ಕಂಪನಿ ನಿಧನವಾಗಿ ದೇಶದ ಇತರೆ ಭಾಗಗಳಲ್ಲಿ ಈ ಸೇವೆಯನ್ನು ಜಾರಿಗೊಳಿಸಲಿದೆ ಎನ್ನಲಾಗಿದೆ. ದೇಶಾದ್ಯಂತ ಆನ್ಲೈನ್ ಔಷಧ ಮಾರಾಟದಲ್ಲಿ ವ್ಯಾಪಕ ಹೆಚ್ಚಳವಾದ ಹಿನ್ನೆಲೆ ಕಂಪನಿ ಇಟ್ಟಿರುವ ಈ ಹೆಜ್ಜೆ ತುಂಬಾ ಮಹತ್ವಪೂರ್ಣ ಎಂದೇ ಭಾವಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕೊರೊನಾ ವೈರಸ್ ಮಹಾಮಾರಿಯ ಕಾರಣ ಜನರು ಮಾತುಕಟ್ಟೆಗೆ ಭೇಟಿ ನೀಡುವುದರಿಂದ ಹಿಂಜರಿಯುತ್ತಿದ್ದಾರೆ ಹಾಗೂ ನಿಯಮಿತ ಔಷಧಿಗಳ ಖರೀದಿಗಾಗಿ ಆನ್ಲೈನ್ ನಲ್ಲಿ ಔಷಧಿಗಳನ್ನು ಖರೀದಿಸುತ್ತಿದ್ದಾರೆ.