ಪೆಹಲ್ಗಾಮ್ ಭಯೋತ್ಪಾದಕ ದಾಳಿ ಬೆನ್ನಲ್ಲೇ ಮತ್ತೊಂದು ಆತಂಕ ! ಗೌತಮ್ ಗಂಭೀರ್ ಗೆ ISIS ಉಗ್ರರಿಂದ ಕೊಲೆ ಬೆದರಿಕೆ

Gautam Gambhir :ಇದೀಗ ಈ ಸುದ್ದಿಯಿಂದ ಎಲ್ಲೆಡೆ ಕೋಲಾಹಲ ಸೃಷ್ಯಾಗಿದೆ. ಮಾಹಿತಿಯ ಪ್ರಕಾರ, ಗಂಭೀರ್ ಅವರಿಗೆ ಕೊಲೆ ಬೆದರಿಕೆಯ ಇಮೇಲ್ ಬಂದಿದೆ. 

Written by - Ranjitha R K | Last Updated : Apr 24, 2025, 11:28 AM IST
  • ಗಂಭೀರ್ ಅವರಿಗೆ ಕೊಲೆ ಬೆದರಿಕೆಯ ಇಮೇಲ್
  • ಎಫ್‌ಐಆರ್ ದಾಖಲು ಮಾಡಿದ ಗೌತಮ್ ಗಂಭೀರ್
  • ಗೌತಮ್ ಗಂಭೀರ್ ಗೆ ಬಂದಿದ್ದ ಇ ಮೇಲ್ ನಲ್ಲಿ ಏನಿತ್ತು
ಪೆಹಲ್ಗಾಮ್ ಭಯೋತ್ಪಾದಕ ದಾಳಿ ಬೆನ್ನಲ್ಲೇ ಮತ್ತೊಂದು ಆತಂಕ ! ಗೌತಮ್ ಗಂಭೀರ್ ಗೆ ISIS ಉಗ್ರರಿಂದ ಕೊಲೆ ಬೆದರಿಕೆ

Gautam Gambhir : ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ ಕಳೆದ ಎರಡು ದಿನಗಳಿಂದ ಭಾರತ ಶೋಕ ಸಾಗರದಲ್ಲಿ ಮುಳುಗಿದೆ. ಈ ಮಧ್ಯೆ,  ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಗೆ ಕಾಶ್ಮೀರದ ಐಸಿಸ್ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ ಬಂದಿದೆ. ಇದೀಗ ಈ ಸುದ್ದಿಯಿಂದ ಎಲ್ಲೆಡೆ ಕೋಲಾಹಲ ಸೃಷ್ಯಾಗಿದೆ. ಮಾಹಿತಿಯ ಪ್ರಕಾರ, ಗಂಭೀರ್ ಅವರಿಗೆ ಕೊಲೆ ಬೆದರಿಕೆಯ ಇಮೇಲ್ ಬಂದಿದೆ.  

Add Zee News as a Preferred Source

ಎಫ್‌ಐಆರ್ ದಾಖಲು ಮಾಡಿದ ಗೌತಮ್ ಗಂಭೀರ್ : 
ಗೌತಮ್ ಗಂಭೀರ್ ಗೆ "ISIS ಕಾಶ್ಮೀರ" ದಿಂದ ಜೀವ ಬೆದರಿಕೆ ಇದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಇದಾದ ನಂತರ, ಟೀಮ್ ಇಂಡಿಯಾದ ಕೋಚ್ ಪೊಲೀಸರನ್ನು ಸಂಪರ್ಕಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಗಂಭೀರ್ ಎಫ್‌ಐಆರ್ ದಾಖಲಿಸಲು ವಿನಂತಿಸಿದ್ದಾರೆ ಎಂದು ರಾಜಿಂದರ್ ನಗರ ಪೊಲೀಸ್ ಠಾಣೆ ಮತ್ತು ಕೇಂದ್ರ ಡಿಸಿಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಪಹಲ್ಗಾಮ್ ದಾಳಿ, ಗಡಿಯುದ್ದಕ್ಕೂ ಹೈ ಅಲರ್ಟ್‌ : ಕಾಶ್ಮೀರ ಕಣಿವೆಯಲ್ಲಿ ಬೃಹತ್ ಕಾರ್ಯಾಚರಣೆ

ಇಮೇಲ್ ನಲ್ಲಿ ಏನಿತ್ತು ?:
ಗೌತಮ್ ಗಂಭೀರ್ ಅವರಿಗೆ ಏಪ್ರಿಲ್ 22 ರಂದು ಬೆದರಿಕೆ ಇಮೇಲ್ ಬಂದಿತ್ತು. ಅದರಲ್ಲಿ I KILL YOU ಎನ್ನುವ ಕೇವಲ ಮೂರು ಪದಗಳಿದ್ದವು. ಇದಕ್ಕೂ ಮೊದಲು, ಗೌತಮ್ ಗಂಭೀರ್ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಮೃತರ ಸದ್ಗತಿಗಾಗಿ ಪ್ರಾರ್ಥಿಸಿದ್ದರು. ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ, 'ಮೃತರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲು ಎಂದು ಪ್ರಾರ್ಥಿಸುವುದಾಗಿ ಬರೆದಿದ್ದಾರೆ. ಅಲ್ಲದೆ ದುಷ್ಕೃತ್ಯ ಎಸಗಿದವರು ಬೆಲೆ ತೆರಬೇಕಾಗುತ್ತದೆ, ಭಾರತ ದಾಳಿ ಮಾಡುತ್ತದೆ ಎಂದು ಬರೆದಿದ್ದರು.

ಮೇಲ್ ಟ್ರ್ಯಾಕ್ ಆಗುತ್ತಿದೆ : 
ಗಂಭೀರ್ ದೂರಿನ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮೇಲ್ ಕಳುಹಿಸಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲ್ ಅನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಈ ಮೇಲ್ ಸ್ವೀಕರಿಸಿದ ನಂತರ, ಗಂಭೀರ್ ತಮ್ಮ ಮತ್ತು ತಮ್ಮ ಕುಟುಂಬದ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಪಹಲ್ಗಾಮ್ ದಾಳಿಯ ನಂತರ, ಟೀಮ್ ಇಂಡಿಯಾದ ಅನೇಕ ಆಟಗಾರರು ಈ ಕೃತ್ಯವನ್ನು ಖಂಡಿಸಿದ್ದರು. 

ಇದನ್ನೂ ಓದಿ : ಪಹಲ್ಗಾಮ್ ದಾಳಿ: ಉಗ್ರರಿಗೆ ಸಂಬಂಧಪಟ್ಟ ಮಾಹಿತಿ ನೀಡಿದರೆ 20 ಲಕ್ಷ ರೂ. ಬಹುಮಾನ ಘೋಷಣೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News