Coronavirus ವಿರುದ್ಧದ ಹೋರಾಟದ ಮಧ್ಯೆ ಈ ತಪ್ಪು ಮಾಡಬೇಡಿ, ಖಾಲಿಯಾಗುತ್ತೆ ನಿಮ್ಮ ಅಕೌಂಟ್

ವಿಶ್ವಾದ್ಯಂತ ಪಸರಿಸಿರುವ ಈ ಕಾಯಿಲೆಯಿಂದ ಹಲವು ದೇಶಗಳಲ್ಲಿ ಜನರು ತೊಂದರೆಗೆ ಒಳಗಾಗಿದ್ದಾರೆ.  ಇದರಿಂದ ಮೇಲೇಳಲು ಫಂಡ್ ಮಾಧ್ಯಮದ ಮೂಲಕ ಜನರಿಂದ ಸಹಾಯ ಪಡೆಯಲಾಗುತ್ತಿದೆ. ಆದರೆ, ಕೊರೊನಾ ಫಂಡ್ ಹೆಸರಿನಡಿ ಕೆಲ ಫ್ರಾಡ್ ಕೂಡ ಇದೀಗ ಬೆಳಕಿಗೆ ಬರಲಾರಂಭಿಸಿವೆ. ಇಂತಹ ಫ್ರಾಡ್ ಗಳಿಂದ ತಪ್ಪಿಸಿಕೊಳ್ಳಲು ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಅಲರ್ಟ್ ವೊಂದನ್ನು ಜಾರಿಗೊಳಿಸಿದೆ.

Last Updated : Apr 3, 2020, 07:40 PM IST
Coronavirus ವಿರುದ್ಧದ ಹೋರಾಟದ ಮಧ್ಯೆ ಈ ತಪ್ಪು ಮಾಡಬೇಡಿ, ಖಾಲಿಯಾಗುತ್ತೆ ನಿಮ್ಮ ಅಕೌಂಟ್ title=

ನವದೆಹಲಿ: ಸದ್ಯ ಇಡೀ ಭಾರತ ದೇಶ ಕೊರೊನಾ ಮಹಾಮಾರಿಯ ವಿರುದ್ಧ ಹೋರಾಟ ನಡೆಸುತ್ತಿದೆ. ಇದಕ್ಕಾಗಿ ದೇಶದ ನಾಗರಿಕರಲ್ಲಿ ಸತತ ಮನವಿಗಳನ್ನು ಸಹ ಮಾಡಲಾಗುತ್ತಿದ್ದು, ಕೊರೊನಾ ವಿರುದ್ಧದ ಈ ಹೋರಾಟಕ್ಕೆ ಆರ್ಥಿಕ ಕೊಡುಗೆ ನೀಡಲು ಕೇಳಲಾಗುತ್ತಿದೆ. ಆದರೆ, ಕೊಡುಗೆ ನೀಡುವವರಿಗೆ ಇದೀಗ ಸೈಬರ್ ಕ್ರೈಂ ಆತಂಕ ಎದುರಾಗುತ್ತಿದೆ. ವಿಶ್ವಾದ್ಯಂತ ಪಸರಿಸಿರುವ ಈ ಕಾಯಿಲೆಯಿಂದ ಹಲವು ದೇಶಗಳಲ್ಲಿ ಜನರು ತೊಂದರೆಗೆ ಒಳಗಾಗಿದ್ದಾರೆ.  ಇದರಿಂದ ಮೇಲೇಳಲು ಫಂಡ್ ಮಾಧ್ಯಮದ ಮೂಲಕ ಜನರಿಂದ ಸಹಾಯ ಪಡೆಯಲಾಗುತ್ತಿದೆ. ಆದರೆ, ಕೊರೊನಾ ಫಂಡ್ ಹೆಸರಿನಡಿ ಕೆಲ ಫ್ರಾಡ್ ಕೂಡ ಇದೀಗ ಬೆಳಕಿಗೆ ಬರಲಾರಂಭಿಸಿವೆ. ಇಂತಹ ಫ್ರಾಡ್ ಗಳಿಂದ ತಪ್ಪಿಸಿಕೊಳ್ಳಲು ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಅಲರ್ಟ್ ವೊಂದನ್ನು ಜಾರಿಗೊಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ವೊಂದನ್ನು ಮಾಡಿರುವ ಭಾರತೀಯ ಸ್ಟೇಟ್ ಬ್ಯಾಂಕ್, "ಇಡೀ ವಿಶ್ವ ಒಂದು ಅಪಾಯಕಾರಿ ಮಹಾಮಾರಿಯ ವಿರುದ್ಧ ಹೋರಾಟ ನಡೆಸುತ್ತಿದೆ ಹಾಗೂ ಸೈಬರ್ ಅಪರಾಧಿಗಳು ಇದನ್ನು ತನ್ನ ಅಸ್ತ್ರವನ್ನಾಗಿ ಬಳಸಲು ಆರಂಭಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಎಚ್ಚರಿಕೆಯಿಂದ ಇರುವುದು ತುಂಬಾ ಅಗತ್ಯವಾಗಿದೆ" ಎಂದು ಹೇಳಿದೆ ಜನರಿಗೆ ಎಚ್ಚರಿಕೆಯಿಂದ ಇರಲು ಹೇಳಲಾಗಿರುವ ಈ ಟ್ವೀಟ್ ನಲ್ಲಿ ಕೆಲ ಸಲಹೆಗಳನ್ನೂ ಕೂಡ ನೀಡಲಾಗಿದ್ದು, ಇವುಗಳನ್ನು ಅನುಸರಿಸಿ ಆನ್ಲೈನ್ ವಂಚನೆಯಿಂದ ಪಾರಾಗಬಹುದು.

SBIನೀಡಿರುವ ಸಲಹೆಗಳೇನು?
- ಲಾಕ್ ಡೌನ್ ಪರಿಸ್ಥಿತಿಯಲ್ಲಿ ಸೈಬರ್ ಫ್ರಾಡ್ ಎಸಗುವರು ಕೂಡ ಸಕ್ರೀಯರಾಗಿದ್ದು, ಫ್ರಾಡ್ ನಡೆಸುವವರು UPI ಐಡಿಗಳ ಮೂಲಕ ಡೊನೇಶನ್ ನೆಡಲು ಮನವಿ ಸಲ್ಲಿಸುತ್ತಿದ್ದಾರೆ. ಈ ರೀತಿಯ ಫ್ರಾಡ್ UPI ಐಡಿ ಬಳಸಿ ಡೊನೇಶನ್ ಕೆಳುವವರಿಂದ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಬ್ಯಾಂಕ್ ಹೇಳಿದೆ. ನಿಮ್ಮ ಗಳಿಕೆಯನ್ನು ದಾನವಾಗಿ ನೀಡುವ ಮೊದಲು 100 ಬಾರಿ ಯೋಚಿಸಿ ಎಂದು ಬ್ಯಾಂಕ್ ಹೇಳಿದೆ.
- ಫಂಡ್ ಟ್ರಾನ್ಸ್ಫರ್ ಮಾಡುವ ಮೊದಲು, ಯಾರಿಗೆ ಫಂಡ್ ಟ್ರಾನ್ಸ್ಫರ್ ಮಾಡುತ್ತಿರುವಿರಿ ಅವರನ್ನು ಸರಿಯಾಗಿ ಗುರುತಿಸುವುದು ಆಗಯ ಎಂದು ಬ್ಯಾಂಕ್ ಹೇಳಿದೆ.
- ಯಾವುದೇ ಇ-ಕಾಮರ್ಸ್ ಸೈಟ್ ಮೇಲೆ ನಿಮ್ಮ ಕಾರ್ಡ್ ಡೀಟೇಲ್ಸ್ ಸೇವ್ ಮಾಡಬೇಡಿ.
- ಅಗತ್ಯವಲ್ಲದ ಇ-ಮೇಲ್ ಗಳಿಗೆ ನಿಮ್ಮ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
- ಕೊರೊನಾ ವೈರಸ್ ಗೆ ಸಂಬಂಧಿಸಿದ ಯಾವುದೇ ಸುದ್ದಿಯ ಮೇಲೆ ಕ್ಲಿಕ್ಕಿಸುವ ಮೊದಲು ಅದನ್ನು ಪರಿಶೀಲಿಸಿ.
- ಅಧಿಕೃತ ಮೂಲಗಳ ಜೊತೆಗೆ ಮಾತ್ರ ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಿ.
- ಒಂದು ವೇಳೆ ಯಾವುದೇ ಸ್ಕ್ಯಾಮ್ ಕುರಿತು ನಿಮಗೆ ಶಂಕೆ ಬಂದರೆ ಕೂಡಲೇ ಅದರ ವರದಿಯನ್ನು ಬ್ಯಾಂಕ್ ಜೊತೆಗೆ ಹಂಚಿಕೊಳ್ಳಿ.

ಕೊರೊನಾ ವೈರಸ್ ವಿರುದ್ಧ ಹೋರಾಟದ ನೇತೃತ್ವವಹಿಸಿರುವ ಪ್ರಧಾನಿ ನರೇಂದ್ರ ಮೋದಿ PMcares ಫಂಡ್ ಅನ್ನು ಸ್ಥಾಪಿಸಿ, ದೇಶದ ನಾಗರಿಕರಲ್ಲಿ ಕೊಡುಗೆ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೂ ಕೂಡ ಅಪರಾಧಿಗಳು ತಮ್ಮ ದಂಧೆಯಾಗಿ ಪರಿವರ್ತಿಸಿದ್ದಾರೆ. PMcares ಫಂಡ್ ರೀತಿ ಕಾಣಿಸಿಕೊಳ್ಳುವ ಸಂದೇಶಗಳಿಂದ ಎಚ್ಚರಿಕೆ ವಹಿಸಿ. ಏಕೆಂದರೆ, ಇದರ ಅಡಿ ಜನರಿಗೆ sms ಗಳನ್ನು ಕಳುಹಿಸಿ ಕೊಡುಗೆ ನೀಡಲು ಮನವಿ ಮಾಡಲಾಗುತ್ತಿದೆ. ಇಂತಹ ದಂಧೆಯಲ್ಲಿ ತೊಡಗಿರುವ ಒಂದು ಜಾಲವನ್ನು ದೆಹಲಿಯಲ್ಲಿ ಈಗಾಗಲೇ ಭೇದಿಸಲಾಗಿದೆ. 

Trending News