ಡಿಸೆಂಬರ್ ವರೆಗೆ ಬಿಜೆಪಿ ಅಧ್ಯಕ್ಷರಾಗಿ ಅಮಿತ್ ಶಾ ಮುಂದುವರೆಯುವ ಸಾಧ್ಯತೆ

ಈಗ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಷಾ ಅವರು ಬಿಜೆಪಿ ಅಧ್ಯಕ್ಷರಾಗಿ ಪಕ್ಷದ ಚುನಾವಣೆ ಮುಗಿಯುವವರೆಗೂ ಮುಂದುವರಿಯಲಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.

Updated: Jun 12, 2019 , 04:14 PM IST
ಡಿಸೆಂಬರ್ ವರೆಗೆ ಬಿಜೆಪಿ ಅಧ್ಯಕ್ಷರಾಗಿ ಅಮಿತ್ ಶಾ ಮುಂದುವರೆಯುವ ಸಾಧ್ಯತೆ

ನವದೆಹಲಿ: ಈಗ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಷಾ ಅವರು ಬಿಜೆಪಿ ಅಧ್ಯಕ್ಷರಾಗಿ ಪಕ್ಷದ ಚುನಾವಣೆ ಮುಗಿಯುವವರೆಗೂ ಮುಂದುವರಿಯಲಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.

ಬಿಜೆಪಿ ಚುನಾವಣಾ ಪ್ರಕ್ರಿಯೆ ವೇಳಾ ಪಟ್ಟಿಯನ್ನು ಗುರುವಾರ ಕಚೇರಿ ಅಧಿಕಾರಿಗಳ ಸಭೆಯಲ್ಲಿ ಅಂತಿಮಗೊಳಿಸಲಾಗುವುದು.ಡಿಸೆಂಬರ್ ನಲ್ಲಿ ಸಾಂಸ್ಥಿಕ ಚುನಾವಣೆಯು ತೀರ್ಮಾನಗೊಳ್ಳಲಿದೆ ಎಂದು ತಿಳಿದುಬಂದಿದೆ.

ಅಮಿತ್ ಶಾರವರು ಪಕ್ಷದ ರಾಷ್ಟ್ರೀಯ ಅಧಿಕಾರಿಗಳು, ರಾಜ್ಯ ಮುಖ್ಯಸ್ಥರು ಮತ್ತು ಇತರ ನಾಯಕರನ್ನು ಗುರುವಾರ ಭೇಟಿಯಾಗಲಿದ್ದಾರೆ. ಜೂನ್ 18 ರಂದು ತಮ್ಮ ಸಾಮಾನ್ಯ ಕಾರ್ಯದರ್ಶಿಗಳ ಮತ್ತೊಂದು ಸಭೆಯನ್ನು ನಡೆಸುತ್ತಾರೆ.ಈ ಸಂದರ್ಭದಲ್ಲಿ ಪಕ್ಷದ ಸಂಸದೀಯ ಮಂಡಳಿ ನೂತನ ಅಧ್ಯಕ್ಷ ಅಥವಾ ಕಾರ್ಯಕಾರಿ ಅಧ್ಯಕ್ಷರನ್ನು ನೇಮಿಸಬಹುದು ಎಂದು ನಿರೀಕ್ಷಿಸಲಾಗಿದೆ. 

2018 ರ ಸೆಪ್ಟೆಂಬರ್ನಲ್ಲಿ ಲೋಕಸಭೆ ಚುನಾವಣೆ ಮುಗಿಯುವವರೆಗೂ ಪಕ್ಷದ ಆಂತರಿಕ ಚುನಾವಣೆಯನ್ನು ಮುಂದೂಡಿತ್ತು.ಆಗ ಅಮಿತ್ ಷಾ ಅವರ ಅಧ್ಯಕ್ಷ ಅವಧಿಯನ್ನು ವಿಸ್ತರಿಸಲಾಗಿತ್ತು. 2014 ರಲ್ಲಿ ಅಮಿತ್ ಷಾ ಅವರು ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಪಕ್ಷದ ಸಂವಿಧಾನಕ್ಕೆ ಅನುಗುಣವಾಗಿ ಮೂರು ವರ್ಷಗಳ ಅವಧಿಗಳವರೆಗೆ ಅಧ್ಯಕ್ಷರಾಗಿ ಮುಂದುವರೆಯಬಹುದು.

ಗುರುವಾರ ಸಭೆಯಲ್ಲಿ ಚುನಾವಣಾ ಕ್ಯಾಲೆಂಡರ್ ಅಂತಿಮಗೊಳಿಸಬಹುದು.ಈ ಪ್ರಕ್ರಿಯೆಯು ಹೊಸ ಸದಸ್ಯತ್ವ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗುತ್ತದೆ. ಮಂಡಲ್ ಜಿಲ್ಲೆಯ ಮತ್ತು ರಾಜ್ಯ ಮಟ್ಟಗಳಲ್ಲಿ ಚುನಾವಣೆ ನಡೆಯಲಿದೆ.