ಅಸ್ಸಾಂ ನೋಂದಣಿ ಕರಡು ವಿಚಾರ: ರಾಜೀವ್ ಗಾಂಧಿ ಮಾಡಿದ್ದೂ ಇದನ್ನೇ- ಅಮಿತ್ ಷಾ

ಅಸ್ಸಾಂ ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್ ಆರ್ ಸಿ) ಅಂತಿಮ ಕರಡಿಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಿರುಗೇಟು ನೀಡಿದ್ದಾರೆ.  

Last Updated : Jul 31, 2018, 04:57 PM IST
ಅಸ್ಸಾಂ ನೋಂದಣಿ ಕರಡು ವಿಚಾರ: ರಾಜೀವ್ ಗಾಂಧಿ ಮಾಡಿದ್ದೂ ಇದನ್ನೇ- ಅಮಿತ್ ಷಾ  title=

ನವದೆಹಲಿ: 1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಅಸ್ಸಾಂ ಒಪ್ಪಂದವೂ ಕೂಡಾ ಎನ್ ಆರ್ ಸಿ ಉದ್ದೇಶವನ್ನೇ ಹೊಂದಿತ್ತು. ಆದರೆ ಅದನ್ನು ಜಾರಿಗೆ ತರುವ ಧೈರ್ಯವನ್ನು ಸರ್ಕಾರ ಮಾಡಲಿಲ್ಲ ಎಂದು ಹೇಳುವ ಮೂಲಕ ಅಸ್ಸಾಂ ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್ ಆರ್ ಸಿ) ಅಂತಿಮ ಕರಡಿಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಿರುಗೇಟು ನೀಡಿದ್ದಾರೆ.

ಅಸ್ಸಾಂ ಎನ್ಆರ್ಸಿ ಬಂಗಾಳಿ, ಬಿಹಾರಿ ಮತ್ತು ಹಿಂದೂಗಳನ್ನು ಟಾರ್ಗೆಟ್ ಮಾಡುವ ಉದ್ದೇಶಪೂರ್ವಕ ಪ್ರಯತ್ನ: ಮಮತಾ ಬ್ಯಾನರ್ಜಿ

ಮಂಗಳವಾರ ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್ ಷಾ, "ಎನ್ ಆರ್ ಸಿ ಅಡಿಯಲ್ಲಿ ಅಕ್ರಮ ವಲಸಿಗರನ್ನು ಗುರುತಿಸಿ, ನಾಗರಿಕರಿಗೆ ಪ್ರತ್ಯೇಕ ನೋಂದಣಿ ಮಾಡಬೇಕು. ರಾಜೀವ್ ಗಾಂಧಿ ಅವರು 1985ರಲ್ಲಿ ಅಸ್ಸಾಂ ಕರಡಿಗೆ ಸಹಿ ಹಾಕಿದ್ದು, ಇದು ಎನ್ಆರ್ಸಿ ಕರಡನ್ನೇ ಹೋಲುತ್ತದೆ. ಹಿಂದಿನ ಸರ್ಕಾರಗಳು ಇದನ್ನು ಜಾರಿ ಮಾಡುವ ಧೈರ್ಯ ಮಾಡಲಿಲ್ಲ. ಆದರೆ ನಮಗೆ ಆ ಧೈರ್ಯ ಇದೆ. ಹಾಗಾಗಿ ನಾವು ಕರಡನ್ನು ಜಾರಿಗೊಳಿಸಲು ಮುಂದಾಗಿದ್ದೇವೆ" ಎಂದು ಹೇಳಿದರು.

NRCಯಲ್ಲಿ ಹೆಸರಿಲ್ಲದವರನ್ನು ವಿದೇಶಿಯರು ಎನ್ನಲು ಸಾಧ್ಯವಿಲ್ಲ: ಗೃಹ ಸಚಿವಾಲಯ

ಅಮಿತ್ ಷಾ ಅವರ ಈ ಹೇಳಿಕೆಯಿಂದಾಗಿ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಗದ್ದಲ್ ಆರಂಭಿಸಿದರು. ಆದರೆ ಪ್ರತಿ ಪಕ್ಷಗಳ ಗದ್ದಲಕ್ಕೆ ಆಕ್ರೋಶ ವ್ಯಕ್ತಪಡಿಸಿದ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು, ಇದು ರಾಜ್ಯಸಭೆ, ಹಿರಿಯರ ಮೇಲ್ಮನೆಯಾಗಿದೆ. ನಿಮ್ಮ, ನಡೆ ನುಡಿಗಳನ್ನು ಇಡೀ ದೇಶವೇ ಗಮನಿಸುತ್ತಿದೆ. ದಯವಿಟ್ಟು ಪ್ರಜಾಪ್ರಭುತ್ವವನ್ನು ಅಣಕಿಸುವಂತೆ ಮಾಡಬೇಡಿ ಎಂದು ಮನವಿ ಮಾಡಿದರು.

ಅಸ್ಸಾಂ ನಾಗರಿಕ ರಾಷ್ಟ್ರೀಯ ನೋಂದಣಿಯಿಂದಾಗಿ ಪಟ್ಟಿಯಲ್ಲಿ ಹೆಸರಿಲ್ಲದ 40 ಲಕ್ಷ ಅಸ್ಸಾಂ ನಿವಾಸಿಗಳಿಗೆ ತೊಂದರೆಯಾಗಲಿದೆ ಎನ್ನಲಾಗಿದೆ. 

Trending News