ಆರ್ಟಿಕಲ್ 370, 35 ಎ ದೇಶದಲ್ಲಿ ಭಯೋತ್ಪಾದನೆಗೆ ಹೆಬ್ಬಾಗಿಲು: ಅಮಿತ್ ಶಾ

ಆರ್ಟಿಕಲ್ 370 ಮತ್ತು 35 ಎ ದೇಶದಲ್ಲಿ ಭಯೋತ್ಪಾದನೆಗೆ ಒಂದು ಹೆಬ್ಬಾಗಿಲು. ಪ್ರಧಾನಿ ನರೇಂದ್ರ ಮೋದಿ ಆ ನಿಬಂಧನೆಗಳನ್ನು ರದ್ದುಗೊಳಿಸುವ ಮೂಲಕ ಆ ಪ್ರವೇಶವನ್ನು ಮುಚ್ಚಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.  

Updated: Oct 31, 2019 , 12:11 PM IST
ಆರ್ಟಿಕಲ್ 370, 35 ಎ ದೇಶದಲ್ಲಿ ಭಯೋತ್ಪಾದನೆಗೆ ಹೆಬ್ಬಾಗಿಲು: ಅಮಿತ್ ಶಾ

ನವದೆಹಲಿ: ಆರ್ಟಿಕಲ್ 370 ಮತ್ತು 35 ಎ ದೇಶದಲ್ಲಿ ಭಯೋತ್ಪಾದನೆಗೆ ಒಂದು ಹೆಬ್ಬಾಗಿಲು. ಪ್ರಧಾನಿ ನರೇಂದ್ರ ಮೋದಿ ಆ ನಿಬಂಧನೆಗಳನ್ನು ರದ್ದುಗೊಳಿಸುವ ಮೂಲಕ ಆ ಪ್ರವೇಶವನ್ನು ಮುಚ್ಚಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

"ಪ್ರಧಾನಿ ಮೋದಿ ಅವರು ಸರ್ದಾರ್ ಪಟೇಲ್ ಅವರ ಕನಸನ್ನು ಈಡೇರಿಸಿದ್ದಾರೆ. ಆರ್ಟಿಕಲ್ 370 ಮತ್ತು ಆರ್ಟಿಕಲ್ 35 ಎ ಅನ್ನು ರದ್ದುಗೊಳಿಸುವ ಮೂಲಕ ಪಿಎಂ ಮೋದಿ ಜಮ್ಮು ಕಾಶ್ಮೀರವನ್ನು ಭಾರತದೊಂದಿಗೆ ಶಾಶ್ವತವಾಗಿ ಒಗ್ಗೂಡಿಸಿದರು. ಆರ್ಟಿಕಲ್ 370 ಮತ್ತು 35 ಎ ದೇಶದಲ್ಲಿ ಭಯೋತ್ಪಾದನೆಗೆ ಒಂದು ಹೆಬ್ಬಾಗಿಲು ಎಂದು ನಾನು ನಿಮಗೆ ಮತ್ತೆ ಹೇಳಲು ಬಯಸುತ್ತೇನೆ ... ಪಿಎಂ ಮೋದಿ ಆ ಗೇಟ್ ಮುಚ್ಚಿದ್ದಾರೆ”ಎಂದು ಗೃಹ ಸಚಿವರು ಹೇಳಿದರು.

ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, "ಸರ್ದಾರ್ ಪಟೇಲ್ 500 ಕ್ಕೂ ಹೆಚ್ಚು ಸಂಸ್ಥಾನಗಳನ್ನು ವಿಲೀನಗೊಳಿಸಿ ಯುನೈಟೆಡ್ ಇಂಡಿಯಾವನ್ನು ರಚಿಸಿದರು. ಆದರೆ ಒಂದು ವಿಷಯ ಕೊರತೆಯಿತ್ತು ಅದೇ ಜಮ್ಮು ಕಾಶ್ಮೀರ. ಇದನ್ನು ಭಾರತದಲ್ಲಿ ವಿಲೀನಗೊಳಿಸಲಾಗಿತ್ತಾದರೂ, ಈ ರಾಜ್ಯಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ಮತ್ತು ಆರ್ಟಿಕಲ್ 35 ಎ ಯಿಂದಾಗಿ ನಮಗೆ ಸಮಸ್ಯೆಯಾಗಿ ಉಳಿದಿತ್ತು. ಕಳೆದ 70 ವರ್ಷಗಳಿಂದ ಯಾರೂ ಸಹ ಇದನ್ನು ಸ್ಪರ್ಶಿಸುವ ಗೋಜಿಗೇ ಹೋಗಿರಲಿಲ್ಲ. 2019ರ ಆಗಸ್ಟ್ 5 ರಂದು ಭಾರತದ ಸಂಸತ್ತು ಆರ್ಟಿಕಲ್ 370 ಮತ್ತು ಆರ್ಟಿಕಲ್ 35 ಎ ಅನ್ನು ತೆಗೆದುಹಾಕಿ ಸರ್ದಾರ್ ವಲ್ಲಭಾಯಿ ಪಟೇಲರ ಕನಸನ್ನು ನನಸಾಗಿಸಿದೆ" ಎಂದು ತಿಳಿಸಿದರು. 

ಭಾರತಕ್ಕೆ ಸ್ವಾತಂತ್ರ್ಯ ದೊರೆತು ಹಲವು ವರ್ಷಗಳ ನಂತರವೂ ಸರ್ದಾರ್ ಪಟೇಲ್ ಅವರಿಗೆ ಸರಿಯಾದ ಮಾನ್ಯತೆ ದೊರೆತಿರಲಿಲ್ಲ. ಮಾಜಿ ಗೃಹ ಸಚಿವರಿಗೆ ಪ್ರಧಾನಿ ಮೋದಿಗೆ ಮನ್ನಣೆ ನೀಡಿದರು ಎಂದರು.