ಶಿವಸೇನೆಯ ಕಾರ್ಯಕರ್ತರಿಗೆ ಶಾಯರಿ ಹೇಳುವ ಮೂಲಕ ತಿರುಗೇಟು ನೀಡಿದ ಫಡ್ನವಿಸ್ ಪತ್ನಿ

ವಿಡಿಯೋ ಟ್ವೀಟ್ ಮಾಡಿರುವ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಶಾಯರಿ ಹೇಳುವ ಮೂಲಕ ಶಿವಸೇನೆಯ ಕಾರ್ಯಕರ್ತರಿಗೆ ತಿರುಗೇಟು ನೀಡಿದ್ದಾರೆ.

Written by - Nitin Tabib | Last Updated : Dec 24, 2019, 09:17 PM IST
ಶಿವಸೇನೆಯ ಕಾರ್ಯಕರ್ತರಿಗೆ ಶಾಯರಿ ಹೇಳುವ ಮೂಲಕ ತಿರುಗೇಟು ನೀಡಿದ ಫಡ್ನವಿಸ್ ಪತ್ನಿ title=

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಮಂಗಳವಾರ ಶಿವಸೇನಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೋ ಟ್ವೀಟ್ ಮಾಡಿರುವ ಅಮೃತಾ ಫದವಿಸ್ ಶಾಯರಿ ಹೇಳುವ ಮೂಲಕ ಶಿವಸೈನಿಕರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಈ ವಿಡಿಯೋದಲ್ಲಿ ಶೆವಸೇನಾ ಕಾರ್ಯಕರ್ತರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಅಮೃತಾ ಫಡ್ನವಿಸ್ ಭಾವಚಿತ್ರಕ್ಕೆ ಬೂಟು-ಚಪ್ಪಲಿಗಳಿಂದ ಹೊಡೆಯುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಹಂಚಿಕೊಂಡಿರುವ ಅಮೃತಾ ಫಡ್ನವಿಸ್ ' ದಿಖಾವೋ ಚಪ್ಪಲ್, ಫೆಂಕೋ ಪತ್ಥರ್, ಯಹ ತೋ ಪುರಾನಾ ಶೌಕ್ ಹೈ ಆಪ್ಕಾ, ಹಮ್ ಟು ವೋ ಶಕ್ಸ್ ಹೈ ಕಿ ಧೂಪ್ ಮೇ ಭಿ ನಿಖರ್ ಆಯೆಂಗೆ' ಎಂಬ ಅಡಿ ಬರಹ ಬರೆದಿದ್ದಾರೆ. 'ಚಪ್ಪಲ್ ತೋರಿಸಿ, ಕಲ್ಲು ತೂರಾಟ ನಡೆಸಿ, ಇದು ನಿಮ್ಮ ಹಳೆ ಚಾಳಿ, ಬಿಸಿಲಿನಲ್ಲಿಯೂ ಕೂಡ ಹೊಳಪು ಕಳೆದುಕೊಳ್ಳದ ವ್ಯಕ್ತಿತ್ವ ನಮ್ಮದು' ಎಂದು ಅರ್ಥ.

ಸಾವರ್ಕರ್ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಸಾವರ್ಕರ್ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದರು. ಹಾಗೂ "ರಾಹುಲ್ ಅವರು ವೀರ ಸಾವರ್ಕರ್ ಹಾಗೂ ಅವರ ಮಹಾನ್ ಕೆಲಸಗಳ ಪೈಕಿ ಒಂದರ ಹತ್ತಿರವೂ ಇಲ್ಲ. ಅಷ್ಟೇ ಅಲ್ಲ ರಾಹುಲ್ ತಮ್ಮಷ್ಟಕ್ಕೆ ತಾವು ಗಾಂಧಿ ಎಂದು ಹೇಳಿಕೊಳ್ಳುವ ತಪ್ಪು ಮಾಡಬಾರದು. ಗಾಂಧಿ ಹೆಸರು ಬಳಸುವುದರಿಂದ ಯಾರು ಮಹಾತ್ಮಾ ಗಾಂಧಿ ಆಗಲು ಸಾಧ್ಯವಿಲ್ಲ" ಎಂದಿದ್ದರು. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ನ 'ಭಾರತ ಬಚಾವೋ' ಸಮಾವೇಶದಲ್ಲಿ ರಾಹುಲ್ ಗಾಂಧಿ "ಕ್ಷಮೆಯಾಚಿಸಲು ನಾನು ಸಾವರ್ಕರ್ ಅಲ್ಲ" ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ಕೂಡ ತೀಕ್ಷ ಪ್ರತಿಕ್ರಿಯೆ ವ್ಯಕ್ತಪಡಿಸಿತ್ತು.

ಈ ಟ್ವೀಟ್ ನಿಂದ ಭುಗಿಲೆದ್ದಿತ್ತು ವಿವಾದ
ದೇವೇಂದ್ರ ಫಡ್ನವಿಸ್ ಮಾಡಿರುವ ಈ ಟ್ವೀಟ್ ಗೆ ರೀ ಟ್ವೀಟ್ ಮಾಡಿದ್ದ ಅವರ ಪತ್ನಿ ಅಮೃತಾ ಫಡ್ನವಿಸ್, "ತುಂಬಾ ಸರಿಯಾಗಿದ್ದನ್ನೇ ಹೇಳಿದಿರಿ ದೇವೇಂದ್ರ ಫಡ್ನವೀಸ್ ಜೀ! ಕೇವಲ ಠಾಕ್ರೆ ಉಪನಾಮ ಬಳಸುವುದರಿಂದ ಯಾರು 'ಠಾಕ್ರೆ' ಆಗಲು ಸಾಧ್ಯವಿಲ್ಲ. ಓರ್ವ ವ್ಯಕ್ತಿ ತನ್ನ ಕುಟುಂಬ ಹಾಗೂ ಅಧಿಕಾರದಿಂದ ಮೇಲೆದ್ದು, ಜನತೆ ಹಾಗೂ ಪಕ್ಷದ ಸದಸ್ಯರ ಒಳಿತಿಗಾಗಿ ಪ್ರಾಮಾಣಿಕವಾಗಿ ಯೋಚಿಸುವ ಅಗತ್ಯವಿದೆ" ಎಂದಿದ್ದರು . ಈ ಟ್ವೀಟ್ ಬಳಿಕ ಫಡ್ನವೀಸ್ ಹಾಗೂ ಶಿವಸೈನಿಕರ ಮಧ್ಯೆ ತೀವ್ರ ಘರ್ಷಣೆ ನಡೆದಿದೆ.

ಈ ಮೊದಲೂ ಕೂಡ ಟ್ವೀಟ್ ವಾರ್ ನಡೆಸಲಾಗಿತ್ತು
ಈ ಮೊದಲೂ ಕೂಡ ಶಿವಸೈನಿಕರನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದ ಅಮೃತಾ ಫಡ್ನವೀಸ್ " ಶಿವಸೇನೆಯ ವಂಚನೆ, ಮೋಸದ ಮುಖ ಹಾಗೂ ಕೌಟುಂಬಿಕ ಸದಸ್ಯರಿಗೆ ಆದ್ಯತೆ ಇದು ಬಹಿರಂಗವಾಗಿದೆ ಎಂಬುದು ನನ್ನಂತಹ ಸಾಮಾನ್ಯ ನಾಗರಿಕರ ವಿಚಾರ. ಏಕೆಂದರೆ ಶಿವಸೇನೆಗೆ ಮತ ನೀಡಿರುವ ಹಲವರು ಶಿವಸೇನೆ ಚುನಾವಣೆಯಲ್ಲಿ ಬಿಜೆಪಿಯ ಮೈತ್ರಿಪಕ್ಷ ವಾಗಿದೆ ಎಂಬ ಒಂದೇ ಒಂದು ಕಾರಣಕ್ಕೆ ಮತ ಚಲಾಯಿಸಿದ್ದಾರೆ" ಎಂದು ಬರೆದಿದ್ದರು.

Trending News