Andhra Pradesh shocker : ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರ‍್ಯಾಲಿಯಲ್ಲಿ ದೊಡ್ಡ ಅಪಘಾತ ನಡೆದು ಹೋಗಿದೆ. ಕಿಕ್ಕಿರಿದು ಸೇರಿದ್ದ ಜನರ ನಡುವೆಯಿಂದ ಜಗನ್ ಮೋಹನ್ ರೆಡ್ಡಿ ಕಾರು ವ್ಯಕ್ತಿಯ ಮೇಲೆ ಹರಿದಿದೆ. ಆದರೆ ಇದ್ಯಾವುದರ ಪರಿವೇ ಇಲ್ಲದ ಜಗನ್ ಮೋಹನ ರೆಡ್ಡಿ ಜನರತ್ತ ಕೈಬೀಸುತ್ತಾ ತೆರಳಿದ ಘಟನೆ ನಡೆದಿದೆ. ಜಹನ್ ಮೋಹನ್ ರೆಡ್ಡಿ ಕಾರಿನಡಿಗೆ ಬಿದ್ದ ವ್ಯಕ್ತಿ ಅಪ್ಪಚ್ಚಿಯಾದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಗುಂಟೂರು ಜಿಲ್ಲಿಯಲ್ಲಿ ವೈಎಸ್ಆರ್‌ಸಿಪಿ ಪಕ್ಷದ ಬೃಹತ್ ರ‍್ಯಾಲಿ ಆಯೋಜಿಸಲಾಗಿತ್ತು. ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಕಾರಿನ ಮೂಲಕ ಆಗಮಿಸಿದ್ದರು. ರ‍್ಯಾಲಿಗಾಗಿ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಅಭಿಮಾನಿಗಳು ಜಗನ್ ಕಾರು ಸುತ್ತುವರೆದಿದ್ದಾರೆ. ಜಗನ್ ಕೈ ಕುಲುಕಲು ಪ್ರಯತ್ನಿಸಿದ್ದಾರೆ. ಈ ನೂಕಾಟ ತಳ್ಳಾಟದಲ್ಲಿ 65 ವರ್ಷದ ಕಾರ್ಯಕರ್ತ ಚೀಲಿ ಸಿಂಗಯ್ಯ ಕಾರಿನಡಿಗೆ ಬಿದ್ದಿದ್ದಾರೆ. ಜನರ ಹರ್ಷೋದ್ಘಾರ, ಜಯಘೋಷಗಳು ಮೊಳಗಿದೆ. ಹೀಗಾಗಿ ವ್ಯಕ್ತಿ ಕಾರಿನಡಿಗೆ ಬಿದ್ದರೂ ಯಾರಿಗೂ ಗೊತ್ತೇ ಆಗಿಲ್ಲ. ಇತ್ತ ಪರಿಸ್ಥಿತಿ ಕೈಮೀರುತ್ತಿದ್ದರೂ ಜಗನ್ ಮೋಹನ್ ರೆಡ್ಡಿ ಮಾತ್ರ ಜನರತ್ತಾ ಕೈಬೀಸುತ್ತಾ ತೆರಳಿದ್ದಾರೆ ಎನ್ನಲಾಗುತ್ತದೆ.
ಇದನ್ನೂ ಓದಿ:ಈ ಇರುವೆ ಕಚ್ಚಿದರೆ ನೀವು ತಕ್ಷಣ ಸಾಯುತ್ತೀರಿ..! ಇದರ ವಿಷ ಹಾವು ಮತ್ತು ಚೇಳಿಗಿಂತ ಡೇಂಜರ್..
ಸಿಂಗಯ್ಯ ರಸ್ತೆ ಅಪಘಾತದ ಬಗ್ಗೆ ಟಿಡಿಪಿ ರಾಜಕೀಯ ಪಿತೂರಿ ನಡೆಸಿದೆ ಎನ್ನಲಾಗುತ್ತಿದೆ. ಜಗನ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಸಿಂಗಯ್ಯ ಸಾವಿನ ಬಗ್ಗೆ ಸುಳ್ಳು ದೂರು ನೀಡುವಂತೆ ಟಿಡಿಪಿ ನಾಯಕರು, ಕುಟುಂಬ ಸದಸ್ಯರ ಮೇಲೆ ಒತ್ತಡ ಹೇರಿದ್ದಾರೆ. ಸಿಂಗಯ್ಯ ಕುಟುಂಬ ಒಪ್ಪಿಕೊಳ್ಳದ ಕಾರಣ ಎಲ್ಲೋ ಗ್ಯಾಂಗ್ ಸುಳ್ಳು ಪ್ರಚಾರ ಮಾಡುತ್ತಿದೆ. ಜಗನ್ ಅವರ ವಾಹನ ಡಿಕ್ಕಿ ಹೊಡೆದಿಲ್ಲ ಎಂದು ಎಸ್‌ಪಿ ಸತೀಶ್ ಅಧಿಕೃತವಾಗಿ ಘೋಷಿಸಿದ್ದಾರೆ. ಆದರೂ ಟಿಡಿಪಿ ಮತ್ತು ಎಲ್ಲೋ ಮೀಡಿಯಾ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಕೆಸರು ಎರಚುತ್ತಿವೆ ಎಂದು ದೂರಿದ್ದಾರೆ.
ಟಿಡಿಪಿ ಟಿಡಿಪಿ ಮತ್ತು ಎಲ್ಲೋ ಮೀಡಿಯಾ ಜಗನ್ ವಿರುದ್ಧ ದುಷ್ಪ್ರಚಾರ ಮಾಡಿವೆ. ಸಿಂಗಯ್ಯ ಅವರ ಸಾವನ್ನು ವಿವಾದಕ್ಕೀಡು ಮಾಡಲು ಪ್ರಯತ್ನಿಸುತ್ತಿವೆ. ಜಗನ್ ಅವರ ವಾಹನ ಡಿಕ್ಕಿ ಹೊಡೆದಿಲ್ಲ ಎಂದು ಅಪಘಾತ ಸಂಭವಿಸಿದ ತಕ್ಷಣ ಗುಂಟೂರು ಎಸ್‌ಪಿ ಸತೀಶ್ ಕುಮಾರ್ ಘೋಷಿಸಿದ್ದಾರೆ. ಏಟುಕೂರು ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಅಪಘಾತ ಸಂಭವಿಸಿದೆ. ಮಾಜಿ ಮುಖ್ಯಮಂತ್ರಿಗಳ ಬೆಂಗಾವಲು ವಾಹನ ಸಾಗುತ್ತಿದ್ದಾಗ, ಅದರ ಮುಂದಿದ್ದ ಅಡ್ವಾನ್ಸ್ ವಾಹನ ಡಿಕ್ಕಿ ಹೊಡೆದಿದೆ ಎಂದು ಎಸ್‌ಪಿ ಹೇಳಿದ್ದಾರೆ. ಆದರೆ, ಎಸ್‌ಪಿ ಹೇಳಿದ ನಾಲ್ಕು ದಿನಗಳ ನಂತರ ಟಿಡಿಪಿ ಮತ್ತು ಎಲ್ಲೋ ಮೀಡಿಯಾ ಪಿತೂರಿ ನಡೆಸಿ, ವೈಎಸ್ ಜಗನ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಸುಳ್ಳು ಪ್ರಚಾರವನ್ನು ಪ್ರಾರಂಭಿಸಿವೆ ಎಂದು ಜಗನ್ ಬೆಂಬಲಿಗರು ದೂರಿದ್ದಾರೆ.
ಇನ್ನು ಘಟನೆ ಸಂಬಂಧ ಟಿಡಿಪಿ ನಾಯಕರು, ಮಾಜಿ ಸಿಎಂ ಜಗನ್ ವಿರುದ್ಧ ಮುಗಿಬಿದ್ದಿದ್ದಾರೆ. ಕಾರಿನ ಚಕ್ರಕ್ಕೆ ವ್ಯಕ್ತಿ ಸಿಲುಕಿ ಸಾಯುತ್ತಿದ್ದರೂ ಜಗನ್ ತಮ್ಮ ಕಾರು ನಿಲ್ಲಿಸಿಲ್ಲ. ಕೊನೇ ಪಕ್ಷ ಆಸ್ಪತ್ರೆಗೆ ಸೇರಿಸುವ ಕೆಲಸವನ್ನೂ ಮಾಡಿಲ್ಲ. ಹಾಗಾಗಿ ಜಗನ್ ಅವರನ್ನು ಕೂಡಲೇ ಬಂಧಿಸಬೇಕು. ಯಾವುದೇ ಜಾಮೀನು ನೀಡಬಾರದು. ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಟಿಡಿಪಿ ನಾಯಕರು ಆಗ್ರಹಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









