ನೂತನ ಕೊಲ್ಕತ್ತಾ ಪೋಲಿಸ್ ಕಮಿಷನರ್ ಆಗಿ ಅನುಜ್ ಶರ್ಮಾ ನೇಮಕ

 ಪಶ್ಚಿಮ ಬಂಗಾಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅನುಜ್ ಶರ್ಮಾ ಅವರನ್ನು ಕೋಲ್ಕತಾ ಪೋಲಿಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಈ ಹಿಂದಿನ ಕಮಿಷನರ್ ರಾಜೀವ್ ಕುಮಾರ್ ಕ್ರಿಮಿನಲ್ ಇನ್ವೆಸ್ಟಿಗೇಶನ್ ಇಲಾಖೆಯ (ಸಿಐಡಿ) ಎಡಿಜಿ ಮತ್ತು ಐಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ.

Last Updated : Feb 19, 2019, 03:51 PM IST
ನೂತನ ಕೊಲ್ಕತ್ತಾ ಪೋಲಿಸ್ ಕಮಿಷನರ್ ಆಗಿ ಅನುಜ್ ಶರ್ಮಾ ನೇಮಕ title=
Photo courtesy:DNA

ನವದೆಹಲಿ: ಪಶ್ಚಿಮ ಬಂಗಾಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅನುಜ್ ಶರ್ಮಾ ಅವರನ್ನು ಕೋಲ್ಕತಾ ಪೋಲಿಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಈ ಹಿಂದಿನ ಕಮಿಷನರ್ ರಾಜೀವ್ ಕುಮಾರ್ ಕ್ರಿಮಿನಲ್ ಇನ್ವೆಸ್ಟಿಗೇಶನ್ ಇಲಾಖೆಯ (ಸಿಐಡಿ) ಎಡಿಜಿ ಮತ್ತು ಐಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ.

1991 ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಶರ್ಮಾ ಅವರು ಐಜಿ (ಕಾನೂನು ಮತ್ತು ಆದೇಶ) ನಿಂದ 2015 ರಲ್ಲಿ ಎಡಿಜಿಯ ಸ್ಥಾನಕ್ಕೆ ಬಡ್ತಿ ನೀಡಲಾಗಿತ್ತು . ಡಾರ್ಜಿಲಿಂಗ್ನಲ್ಲಿ ಕಳೆದ ವರ್ಷದ ಗೂರ್ಖಾ ಗಲಭೆ ಸಂದರ್ಭದಲ್ಲಿ ಅವರು ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಚಿಟ್ ಫಂಡ್ ಹಗರಣ ಪ್ರಕರಣದಲ್ಲಿ ಸಿಬಿಐ ಅವರನ್ನು ವಿಚಾರಣೆ ನಡೆಸುತ್ತಿರುವ ಪ್ರಸ್ತುತ ನಗರ ಪೊಲೀಸ್ ಮುಖ್ಯಸ್ಥ ರಾಜೀವ್ ಕುಮಾರ್ ಅವರನ್ನು ಸಿಐಡಿಯ ಎಡಿಜಿ ಮತ್ತು ಐಜಿಪಿಯಾಗಿ ನೇಮಕ ಮಾಡಲಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಅವರನ್ನು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈಗ ವರ್ಗಾವಣೆ ಮಾಡಲಾಗಿದೆ 

ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬ್ಯಾನರ್ಜಿಯವರಿಗೆ ಆಪ್ತವಿರುವ ಐಪಿಎಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಲು ದೆಹಲಿಯಲ್ಲಿ ರಾಜ್ಯ ಬಿಜೆಪಿ ಒತ್ತಾಯಿಸುತ್ತಿದೆ. ಇಂತಹ ಪಟ್ಟಿಯಲ್ಲಿ ರಾಜೀವ್ ಕುಮಾರ್ ಕೂಡ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ.

Trending News