ಕ್ರಿಕೆಟ್ ಮತ್ತು ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು- ನಿತಿನ್ ಗಡ್ಕರಿ

 ಮಹಾರಾಷ್ಟ್ರದಲ್ಲಿ ಯಾರೇ ಸರ್ಕಾರ ರಚಿಸಿದರೂ, ಹಿಂದಿನ ಆಡಳಿತವು ರೂಪಿಸಿದ ಅಭಿವೃದ್ಧಿ ಯೋಜನೆಗಳು ಮತ್ತು ನೀತಿಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari) ಹೇಳಿದರು.

Last Updated : Nov 15, 2019, 10:59 AM IST
ಕ್ರಿಕೆಟ್ ಮತ್ತು ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು- ನಿತಿನ್ ಗಡ್ಕರಿ  title=

ನವದೆಹಲಿ:  ಮಹಾರಾಷ್ಟ್ರದಲ್ಲಿ ಯಾರೇ ಸರ್ಕಾರ ರಚಿಸಿದರೂ, ಹಿಂದಿನ ಆಡಳಿತವು ರೂಪಿಸಿದ ಅಭಿವೃದ್ಧಿ ಯೋಜನೆಗಳು ಮತ್ತು ನೀತಿಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari) ಹೇಳಿದರು.

ಭಾರತೀಯ ಅನುಭವದಲ್ಲಿ ಹೇಳಬೇಕೆಂದರೆ ನಮ್ಮ ಪ್ರಜಾಪ್ರಭುತ್ವದಲ್ಲಿ, ಸರ್ಕಾರಗಳು ಬದಲಾಗುತ್ತವೆ. ಆದರೆ ಯೋಜನೆಗಳಲ್ಲಿ ಯಾವುದೇ ತೊಂದರೆ ಇಲ್ಲ ಮತ್ತು ಯಾವುದೇ ವ್ಯತ್ಯಾಸವಿಲ್ಲ ಎಂದು ನಾನು ಭಾವಿಸುತ್ತೇನೆ. ಅವು ಮುಂದುವರಿಯುತ್ತವೆ ಎಂದು ನಿತಿನ್ ಗಡ್ಕರಿ ಹೇಳಿದರು. ಯಾವ ಸರ್ಕಾರ ಬರುತ್ತದೆ ಎಂದು ನನಗೆ ತಿಳಿದಿಲ್ಲ, ಎನ್‌ಸಿಪಿ, ಕಾಂಗ್ರೆಸ್, ಬಿಜೆಪಿ ಅಥವಾ ಶಿವಸೇನೆ ಯಾವುದೇ ಸರ್ಕಾರ ಇರಲಿ ಅವರು ಸಕಾರಾತ್ಮಕ ನೀತಿಗಳು, ಅಭಿವೃದ್ಧಿ ನೀತಿಗಳು ಮತ್ತು ದೊಡ್ಡ ಯೋಜನೆಗಳನ್ನು ತಾವು ಬೆಂಬಲಿಸುವುದಾಗಿ" ಹೇಳಿದರು.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗುವ ಸಾಧ್ಯತೆಗಳ ಬಗ್ಗೆ ಕೇಳಿದಾಗ ಗಡ್ಕರಿ ಅವರು ಕ್ರಿಕೆಟ್ ಮತ್ತು ರಾಜಕೀಯದೊಂದಿಗೆ ಹೋಲಿಕೆ ಮಾಡಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು. "ಕ್ರಿಕೆಟ್ ಮತ್ತು ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕೆಲವೊಮ್ಮೆ ನೀವು ಪಂದ್ಯವನ್ನು ಸೋತಿದ್ದೀರಿ ಎಂದು ನೀವು ಭಾವಿಸುತ್ತೀರಿ, ಆದರೆ ಫಲಿತಾಂಶವು ಇದಕ್ಕೆ ತದ್ವಿರುದ್ಧವಾಗಿದೆ. ಅಲ್ಲದೆ, ನಾನು ದೆಹಲಿಯಿಂದ ಬಂದಿದ್ದೇನೆ, ಮಹಾರಾಷ್ಟ್ರದ ವಿವರವಾದ ರಾಜಕೀಯ ನನಗೆ ತಿಳಿದಿಲ್ಲ' ಎಂದು ಅವರು ಹೇಳಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಅಲ್ಲದ ಸರ್ಕಾರ ರಚಿಸಲು ಮಾತುಕತೆ ನಡೆಸುತ್ತಿರುವ ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಮುಖಂಡರು ಕರಡು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು (ಸಿಎಂಪಿ) ಸಿದ್ಧಪಡಿಸಿದ್ದಾರೆ, ಅದನ್ನು ಈಗ ಮೂರು ಪಕ್ಷಗಳ ಹಿರಿಯ ನಾಯಕ ಅಂತಿಮಗೊಳಿಸಲಿದ್ದಾರೆ.

288 ಸದಸ್ಯರ ವಿಧಾನಸಭೆಯಲ್ಲಿ 105 ಸ್ಥಾನಗಳನ್ನು ಹೊಂದಿರುವ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ, ಶಿವಸೇನೆಯೊಂದಿಗೆ ಗುದ್ದಾಟದ ನಂತರ ಸರ್ಕಾರವನ್ನು ರಚಿಸಲು ಅಸಮರ್ಥತೆಯನ್ನು ವ್ಯಕ್ತಪಡಿಸಿತು. ಇದಾದ ನಂತರ ಈಗ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ  ಆಡಳಿತ ಜಾರಿಯಲ್ಲಿದೆ.

 

Trending News