10ನೇ ವಯಸ್ಸಿನಲ್ಲೇ ಈ ಭಾರತೀಯ ಬಾಲಕನಿಗೆ ಅಂತರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ
ಭಾರತದ 10 ವರ್ಷದ ಬಾಲಕ ಆರ್ಶ್ದೀಪ್ ಸಿಂಗ್ ಬ್ರಿಟನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸಿದ್ದ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪೈಪ್ನಲ್ಲಿ ಅಡಗಿರುವ ಎರಡು ಗೂಬೆಗಳ ಚಿತ್ರವನ್ನು ತೆಗೆದಿದ್ದಕ್ಕೆ ಅವರಿಗೆ ಈ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿ 10 ವರ್ಷದ ಒಳಗೆ ಮತ್ತು 11-14 ಹಾಗೂ 15-17 ವಯಸ್ಸಿನ ಮೂರು ವಿಭಾಗಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.