close

News WrapGet Handpicked Stories from our editors directly to your mailbox

ಉತ್ತರ ಪ್ರದೇಶದಲ್ಲಿ ಭೀಕರ ಧೂಳು ಬಿರುಗಾಳಿಗೆ 19 ಮಂದಿ ಸಾವು

ರಾಜ್ಯದ ವಿವಿಧ ಭಾಗಗಳಲ್ಲಿ ಗುರುವಾರ ಸಂಜೆ ಉಂಟಾದ ಭೀಕರ ಧೂಳು ಬಿರುಗಾಳಿಯ ಪರಿಣಾಮ ಹಲವೆಡೆ ಮರಗಳು ಬುಡಮೇಲಾಗಿದ್ದು, ಗೋಡೆಗಳು ಕುಸಿದಿವೆ.

Updated: Jun 7, 2019 , 03:22 PM IST
ಉತ್ತರ ಪ್ರದೇಶದಲ್ಲಿ ಭೀಕರ ಧೂಳು ಬಿರುಗಾಳಿಗೆ 19 ಮಂದಿ ಸಾವು

ಲಕ್ನೋ: ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಗುರುವಾರ ಸಂಜೆ ಉಂಟಾದ ಭೀಕರ ಧೂಳು ಬಿರುಗಾಳಿಗೆ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದು, 48ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ರಾಜ್ಯ ಪರಿಹಾರ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

"ಮಣಿಪುರಿಯಲ್ಲಿ ಆರು ಮಂದಿ ಮೃತಪಟ್ಟರೆ, ಇಬ್ಬರು ಎತಾಹ್ ಮತ್ತು ಕಾಸ್ಗಂಜ್ನಲ್ಲಿ ನಿಧನರಾಗಿದ್ದಾರೆ. ಮೊರಾದಾಬಾದ್, ಬಡಾನ್, ಪಿಲಿಭಿತ್, ಮಥುರಾ, ಕನ್ನೌಜ್, ಸಂಭಲ್ ಮತ್ತು ಘಜಿಯಾಬಾದ್ನಲ್ಲಿ ತಲಾ ಒಬ್ಬರು ಭೀಕರ ಧೂಳು ಬಿರುಗಾಳಿಯಿಂದ ಸಾವನ್ನಪ್ಪಿದರು" ಎಂದು ಅಧಿಕಾರಿಗಳು ಮಾಹಿತಿ ಬಿಡುಗಡೆ ಮಾಡಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಗುರುವಾರ ಸಂಜೆ ಉಂಟಾದ ಭೀಕರ ಧೂಳು ಬಿರುಗಾಳಿಯ ಪರಿಣಾಮ ಹಲವೆಡೆ ಮರಗಳು ಬುಡಮೇಲಾಗಿದ್ದು, ಗೋಡೆಗಳು ಕುಸಿದಿವೆ. ಮಣಿಪುರದಲ್ಲಿ 40ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

"ಸಂತ್ರಸ್ತರಿಗೆ ಶೀಘ್ರವೇ ಅಗತ್ಯ ನೆರವು ಒದಗಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟು ಪರಿಹಾರ ಕಾರ್ಯಾಚರಣೆ ಬಗ್ಗೆ ನಿಗಾ ವಹಿಸುವಂತೆ ಸಚಿವರಿಗೂ ನಿರ್ದೇಶಿಸಿದ್ದಾರೆ ಎಂದು ಹೇಳಲಾಗಿದೆ.